Food safety department  
ರಾಜ್ಯ

ಆಹಾರ ಸುರಕ್ಷತೆ ಇಲಾಖೆಯಿಂದ ಮುಂದುವರಿದ ದಾಳಿ

ಪ್ರಮುಖ ಮುಖ್ಯಾಂಶಗಳು

  • * ಆಹಾರ ದಾಸ್ತಾನು ಮಳಿಗೆಗಳಲ್ಲಿ ಅಧಿಕಾರಿಗಳಿಂದ ಪರಿಶೀಲನೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಸ್ಟಾರ್ ಹೋಟೆಲ್‌ಗಳ ಮೇಲೆ ಶುಕ್ರವಾರ ದಿಢೀರ್ ದಾಳಿ ನಡೆಸಿದ್ದ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು, ತಮ್ಮ ಕಾರ್ಯಾಚರಣೆ ಮುಂದುವರಿಸಿದ್ದು, ಶನಿವಾರ ಆ ಹೋಟೆಲ್‌ಗಳಿಗೆ ಆಹಾರ ಉತ್ಪನ್ನಗಳ ಸರಬರಾಜು ಮಾಡುತ್ತಿದ್ದ ಆಹಾರ ದಾಸ್ತಾನು ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಆಹಾರ ಮಳಿಗೆಗಳಿಗೆ ಪದಾರ್ಥಗಳನ್ನು ಸರಬರಾಜು ಮಾಡುತ್ತಿದ್ದ ಕೋಲ್ಡ್‌ಮ್ಯಾನ್ ಲಾಜಿಸ್ಟಿಕ್ಸ್ ಪ್ರೈ. ಲಿ. ಮತ್ತು ರಾಧಾಕೃಷ್ಣ ುಡ್‌ಲ್ಯಾಂಡ್ ಲಿಮಿಟೆಡ್‌ನ ಕೇಂದ್ರಗಳಲ್ಲಿನ ಆಹಾರ ಉತ್ಪನ್ನಗಳ ದಾಸ್ತಾನು, ಗುಣಮಟ್ಟ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲಿಸಿ ಬಳಕೆಗೆ ಯೋಗ್ಯವಲ್ಲದ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕೇಂದ್ರಗಳಿಂದ ಸುಮಾರು 70 ಕೆ.ಜಿ. ಸೋಯಾ ಸಾಸ್ ಹಾಗೂ ಅವಧಿ ಮುಕ್ತಾಯಕ್ಕೆ ಸಮೀಪದಲ್ಲಿದ್ದ ವಿವಿಧ ಬಗೆಯ ಸಾಸ್‌ಗಳನ್ನು ಪತ್ತೆಹಚ್ಚಲಾಯಿತು. ಜತೆಗೆ ಸುಮಾರು 10 ಲೀಟರ್‌ಗಳಷ್ಟು ವಿವಿಧ ಬಗೆಯ ಪಾನೀಯಗಳು, ಸ್ಟ್ರಾಬೆರಿ ್ಲೇವರ್‌ನ ಪಾನೀಯಗಳು, ಅವಧಿ ಮುಕ್ತಾಯಕ್ಕೆ ಸಮೀಪದಲ್ಲಿದ್ದ ಪಾನೀಯಗಳನ್ನು ವಶಪಡಿಸಲಾಗಿದೆ. ಅಲ್ಲದೆ 5 ಬಗೆಯ ಮಾಂಸದ ಮಾದರಿ ಹಾಗೂ 13 ಇತರೆ ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಸದರಿ ಸಂಸ್ಥೆಗಳಲ್ಲಿ ಮಾಂಸವನ್ನು 18 ಡಿಗ್ರಿ ಸೆಲ್ಶಿಯಸ್ ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಿದ್ದು, 9 ತಿಂಗಳ ಅವಧಿ ನಮೂದಿಸಲಾಗಿದೆ. ಈ ರೀತಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಸುವ ಆಹಾರ ಉದ್ದಿಮೆಗಳ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ- 2006 ಹಾಗೂ ನಿಯಮಗಳು- 2011ರ ಅನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಆಯುಕ್ತ ಕೆ. ಶ್ರೀನಿವಾಸ ತಿಳಿಸಿದ್ದಾರೆ.