Food distribution in memory of BEO Umadevi
ಚಿಂತಾಮಣಿ: ಇತ್ತೀಚೆಗೆ ನಿಧನರಾದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ನೆನಪಿಗಾಗಿ ಬುಧವಾರ ತಾಲೂಕಿನ ಮುರುಗಮಲ್ಲೆ ಪ್ರೌಢಶಾಲೆಯಲ್ಲಿ ಅನ್ನದಾನ ಮಾಡಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಉಮಾದೇವಿ ಮುರಗಮಲ್ಲೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ನಂತರ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಶ್ರಮಿಸಿದ ಮಾರ್ಗದರ್ಶಕರಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪಾಲಕರು, ಸಾರ್ವಜನಿಕರಿಗೆ ಅನ್ನಪ್ರಸಾದ ವಿನಿಯೋಗಿಸಲಾಯಿತು. ಮುಖ್ಯಶಿಕ್ಷಕಿ ನಿರ್ಮಲಾ ಮಾತನಾಡಿ, ಬಿಇಒ ಉಮಾದೇವಿಗೆ ಮಕ್ಕಳೆಂದರೆ ಪಂಚಪ್ರಾಣ. ಅವರ ಹೆಸರಿನಲ್ಲಿ ಅನ್ನದಾನ ಮಾಡುತ್ತಿರುವುದು ಸಮಾಧಾನ ತಂದಿದೆ ಎಂದರು.
ವಿವಿಧ ಶಾಲೆಗಳ ಶಿಕ್ಷಕರು, ಶಿಕ್ಷಣ ಇಲಾಖೆ ಸಿಬ್ಬಂದಿ ಭಾಗವಹಿಸಿ ಉಮಾದೇವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮಾಡಿದರು. ಅಧಿಕಾರಿಯೊಬ್ಬರ ಅಗಲಿಕೆಯ ನಂತರ ಅವರ ಹೆಸರಿನಲ್ಲಿ ನಡೆದ ಸಮಾಜಮುಖಿ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಹಳೆಯ ವಿದ್ಯಾರ್ಥಿಗಳಾದ ಆರ್ಎಸ್ಎಸ್ ಸುರೇಶ, ಎಚ್.ಕೆ.ನರಸಿಂಹಮೂರ್ತಿ, ಜಿ.ಐ.ಶ್ರೀನಿವಾಸ, ಮುರಳಿ ಕೃಷ್ಣ, ಹರೀಶ್, ಮುರಳಿ ಬಾಬು, ಅಶೋಕ, ವಿನಯ್, ರೂಪಾ, ಜಯಲಕ್ಷಿ$್ಮ, ಸರಿತಾ, ಲಕ್ಷಿ$್ಮ, ಮನದೀಪ್, ಶೋಭಾ, ನೇತ್ರಾ, ಆರ್.ಆನಂದ, ಮಂಜುನಾಥ್, ಲಕ್ಷಿ$್ಮ ಇದ್ದರು.