ಸಂಡೂರಿನಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮಾಜದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಲಿಂಗನಾಯಕನಹಳ್ಳಿ ಚನ್ನವೀರ ಮಹಾಶಿವಯೋಗಿ ಸ್ವಾಮೀಜಿ, ಸಂಸದ ಈ.ತುಕಾರಾಮ್, ಶಾಸಕಿ ಅನ್ನಪೂರ್ಣ ತುಕಾರಾಮ್, ಬಿಕೆಜಿ ಗಣಿಮಾಲೀಕ ಬಿ.ನಾಗನಗೌಡ ಇತರರಿದ್ದರು. 
ರಾಜ್ಯ

ಶರಣರ ವಚನಗಳ ಸಂದೇಶ ಪಾಲಿಸಿರಿ

ಪ್ರಮುಖ ಮುಖ್ಯಾಂಶಗಳು

  • ಶಾಸಕಿ ಅನ್ನಪೂರ್ಣ ತುಕಾರಾಮ್ ಸಲಹೆ
  • ಬಸವೇಶ್ವರ ಜಯಂತ್ಯುತ್ಸವ
ಸಂಡೂರು: ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕೆಂದು ಸಂಸದ ಈ.ತುಕಾರಾಮ್ ಹೇಳಿದರು. 
ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮಾಜದಿಂದ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. 
 ಶಾಸಕಿ ಅನ್ನಪೂರ್ಣ ತುಕಾರಾಮ್ ಮಾತನಾಡಿ, ಬಸವಣ್ಣ ಅವರು ಜಾತಿ, ವರ್ಣ, ಲಿಂಗ ತಾರತಮ್ಯ ಹೋಗಲಾಡಿಸಿ ಸಮ ಸಮಾಜದ ಕನಸನ್ನು ಬಿತ್ತಿದರು. ಕಾಯಕವೇ ಕೈಲಾಸ ಎಂದು ಮನೆಯನ್ನು ಮಹಾಮನೆ ಎಂದು ಕರೆದರು. ವಚನಗಳ ಮೂಲಕ ಸಾರಿದ ಸಂದೇಶಗಳನ್ನು ಎಲ್ಲರೂ ಪಾಲಿಸಬೇಕಾದ ಅಗತ್ಯ ಇದೆ ಎಂದರು.  
ಲಿಂಗನಾಯಕನಹಳ್ಳಿಯ ಚನ್ನವೀರ ಮಹಾಶಿವಯೋಗಿ ಸ್ವಾಮೀಜಿ, ಬಿಕೆಜಿ ಗಣಿ ಮಾಲೀಕ ಬಿ.ನಾಗನಗೌಡ, ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಕಿನ್ನೂರೇಶ್ವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಏಕಾಂಬ್ರಪ್ಪ, ಬಿ.ಜಿ.ಸಿದ್ದನಗೌಡ, ಅನಿಲ್ ಕುಮಾರ ಕುಲಕರ್ಣಿ, ಕೆ.ಎಸ್.ಚನ್ನಬಸಪ್ಪ, ಬಸವರಾಜ ಮಸೂತಿ, ಸಿ.ಎಂ.ಶಿಗ್ಗಾಂವಿ, ರಮೇಶ್ ಗಡಾದ್, ಬನ್ನಿಹಟ್ಟಿ ಮಹೇಶ್, ಪಿ.ರವಿಕುಮಾರ್, ವಿರೇಶ್ ಗಾಣಿಗ, ಡಾ.ತಿಪ್ಪೇರುದ್ರ, ಸುರೇಶ್ ಗೌಡ, ಉಬ್ಬಳಗಂಡಿ ಉಡೇದ ಯರ‌್ರಿಸ್ವಾಮಿ, ಸೋವೇನಹಳ್ಳಿ ಶಿವಮೂರ್ತಿಸ್ವಾಮಿ, ಎಸ್‌ಟಿಡಿ.ರುದ್ರಗೌಡ, ಸರೋಜಾ ಜ್ಯೋತಿ ಪ್ರಕಾಶ್, ಶಿವಲೀಲಾ ವೀರೇಶ್, ಪಿಎಸ್‌ಐ ಎಂ.ಕಾರ್ತಿಕ್ ಇತರರಿದ್ದರು.