ಬಿ.ಫೌಜಿಯಾ ತರನ್ನುಮ್​ ಜಿಲ್ಲಾಧಿಕಾರಿ 
ರಾಜ್ಯ

ಸಲಹೆ ಪಾಲಿಸಿ, ಆರೋಗ್ಯ ಕಾಪಾಡಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಮನವಿ
  • ನಾಳೆಯಿಂದ ಮೂರು ದಿನ ಬಿಸಿಗಾಳಿ ಹೆಚ್ಚಳ
ಕಲಬುರಗಿ: ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜಿಲ್ಲಾದ್ಯಂತ ಬುಧವಾರದಿಂದ ಏ.17ರವರೆಗೆ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆಯಿದ್ದು, ಎಲ್ಲೋ ಅರ್ಲಟ್ ​ಘೋಷಿಸಲಾಗಿದೆ. ಹೀಟ್​ ವೇವ್​ (ಶಾಖದ ಹೊಡೆತ)ನಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದ್ದು, ಮುಂಜಾಗ್ರತೆಯಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಲಹೆ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪ್ರಾಧಿಕಾರದ ಜಿಲ್ಲಾಧ್ಯಕ್ಷರೂ ಆದ ಡಿಸಿ ಬಿ.ಫೌಜಿಯಾ ತರನ್ನುಮ್​ ತಿಳಿಸಿದ್ದಾರೆ.
ಸಾರ್ವಜನಿಕರು ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಬೇಕು. ಸಾಧ್ಯವಾದಷ್ಟು ಹಗುರ, ತಿಳಿ ಬಣ್ಣದ, ಸಡಿಲ ಮತ್ತು ರಂಧ್ರವಿರುವ ಹತ್ತಿ ಬಟ್ಟೆ ಧರಿಸಬೇಕು. ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕ, ಛತ್ರಿ/ಟೋಪಿ, ಬೂಟು ಅಥವಾ ಚಪ್ಪಲ್​ ಬಳಸಬೇಕು. ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆ ತಪ್ಪಿಸಬೇಕು. ಮಧ್ಯಾಹ್ನ 12ರಿಂದ 3ರವರೆಗೆ ಹೊರಗೆ ಕೆಲಸ ಮಾಡಕೂಡದು. ದೇಹವನ್ನು ರ್ನಿಜಲೀಕರಣಗೊಳಿಸುವ ಅಲ್ಕೋಹಾಲ್​, ಚಹಾ, ಕಾಫಿ ಮತ್ತು ಕಾಬೋರ್ನೇಟೆಡ್​ ತಂಪು ಪಾನೀಯ ಸೇವನೆ ಬೇಡ. ಹೊರಗೆ ಕೆಲಸ ಮಾಡುತ್ತಿದ್ದರೆ ಟೋಪಿ ಅಥವಾ ಛತ್ರಿ ಬಳಸಿ ಮತ್ತು ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆ ಬಳಸಬೇಕು.
ನಿಲ್ಲಿಸಿದ ವಾಹನಗಳ ಬಳಿ ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು. ಚಕ್ಕರ್​ ಬಂದರೆ, ಅನಾರೋಗ್ಯ ಅನಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಮನೆಯಲ್ಲಿ ತಯಾರಿಸಿದ ಪಾನಿಯಗಳಾದ ಲಕ್ಷಿ$್ಮ, ತೋರಣಿ (ಅಕ್ಕಿ ನೀರು), ನಿಂಬೆ ನೀರು, ಮಜ್ಜಿಗೆ ಬಳಸಿದರೆ ದೇಹವನ್ನು ಮರು ಜಲೀಕರಣಕ್ಕೆ ಸಹಾಯವಾಗಲಿದೆ. ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಕುಡಿಯಲು ಸಾಕಷ್ಟು ನೀರು ನೀಡಬೇಕು. ಮನೆಯನ್ನು ತಂಪಾಗಿರಿಸಿ ಪರದೆ, ಶಟರ್​ ಅಥವಾ ಸನ್​ಶೇಡ್​ಗಳನ್ನು ಬಳಸಿ ಮತ್ತು ರಾತ್ರಿಯಲ್ಲಿ ಕಿಟಕಿ ತೆರೆಯಬೇಕು. ಫ್ಯಾನ್​, ಒದ್ದೆ ಬಟ್ಟೆ ಬಳಸಿ ಮತ್ತು ತಣ್ಣೀರಿನಲ್ಲಿ ಸ್ನಾನ ಮಾಡುವುದು ಒಳಿತು. ಸಾಧಾರಣ ತಾಪಮಾನ ಮತ್ತು ಶಾಖ ಸಾಮಾನ್ಯ ಜನ ಸಹಿಸಿಕೊಳ್ಳಬಲ್ಲರು. ಆದರೆ ದುರ್ಬಲ ಮತ್ತು ಮಧ್ಯಮ ಆರೋಗ್ಯ ಕಾಳಜಿ ಇರುವ ಜನರು (ಉದಾ@ ಶಿಶು, ವೃದ್ಧರು, ದೀರ್ಕಾಲದ ಕಾಯಿಲೆ ಇರುವವರಿಗೆ ಸಹಿಸಿಕೊಳ್ಳಲಾಗದು) ಬಿಸಿಲಿನಲ್ಲಿ ತಲೆ ಹಾಗೂ ದೇಹವನ್ನು ಸೂರ್ಯನ ಕಿರಣಗಳಿಗೆ ಒಡ್ಡದಿರಿ ಎಂದು ಸಲಹೆ ನೀಡಿದ್ದಾರೆ.
ಜಾನುವಾರುಗಳಿಗೆ ಶುದ್ಧ ನೀರು ಕುಡಿಸಿ
ಜಾನುವಾರುಗಳನ್ನು ಬೆಳಗ್ಗೆ ಮತ್ತು ಸಂಜೆ ಮೇಯಿಸಲು ಬಿಡಬೇಕು. ದಿನಕ್ಕೆ ಎರಡ್ಮೂರು ಬಾರಿ ಶುದ್ಧ ನೀರು ಕುಡಿಸಬೇಕು. ಮಧ್ಯಾಹ್ನದ ಸಮಯದಲ್ಲಿ ಜಾನುವಾರು ಹಾಗೂ ಕುರಿ ಮತ್ತು ಆಡುಗಳನ್ನು ಕೊಟ್ಟಿಗೆ ಅಥವಾ ಗಿಡದ ನೆರಳಿನಲ್ಲಿ ಕಟ್ಟಬೇಕು. ಜಮೀನು ಉಳುಮೆ ಮಾಡಲು ಎತ್ತುಗಳನ್ನು ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ಮಾತ್ರ ಬಳಸಬೇಕು. ರ್ನಿಜಲೀಕರಣಗೊಂಡ ಜಾನುವಾರುಗಳಿಗೆ ಉಪ್ಪು, ಅಡುಗೆ ಸೋಡಾ, ಬೆಲ್ಲ ಹಾಗೂ ಲಿಂಬೆಹಣ್ಣಿನ ರಸವನ್ನು ನೀರಿನಲ್ಲಿ ಮಿಶ್ರಣ ಮಾಡಿ ದಿನದಲ್ಲಿ ಮೂರ್ನಾಲ್ಕು ಸಲ ಕುಡಿಸಬೇಕು.

ನೇರ ಬಿಸಿಲು/ಬಿಸಿಗಾಳಿಗೆ ಒಡ್ಡಿಕೊಳ್ಳಬೇಡಿ. ಬಿಸಿಲಲ್ಲಿ ಕೊಡೆ ಇಲ್ಲದೆ ಹೊರಗೆ ಹೋಗಬಾರದು. ಕಪ್ಪು /ಘಾಡ ಬಣ್ಣದ, ತೆಳುವಾದ ಹಾಗೂ ಸಿಂಥಟಿಕ್​ ಉಡುಪು ಧರಿಸಬಾರದು. ಹೆಚ್ಚಿನ ಬಿಸಿಲು ಇರುವ ಅವಧಿಯಲ್ಲಿ ಶ್ರಮದಾಯಕ ಕೆಲಸ ಮಾಡಬಾರದು. ಬಿಸಿ ಚಹ, ಮದ್ಯ ಸೇವಿಸಬಾರದು. ವಾಸವಿರುವ ಕೋಣೆಯಲ್ಲಿ ನೇರವಾಗಿ ಬಿಸಿಲು ಬೀಳುವುದನ್ನು ತಪ್ಪಿಸಬೇಕು.