ಗೋಕಾಕ ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮ್ಮೇಳನದಲ್ಲಿ ಭರಮಣ್ಣ ಉಪ್ಪಾರ ಅವರನ್ನು ಸನ್ಮಾನಿಸಲಾಯಿತು. ಮುತ್ತೇಶ್ವರ ಸ್ವಾಮೀಜಿ, ನಾರಾಯಣ ಶರಣರು, ಭಾರತಿ ಮದಬಾಂವಿ, ಗೌಡಪ್ಪ ಪಾಟೀಲ ಇತರರಿದ್ದರು.
ಗೋಕಾಕ: ಜಾನಪದ ಕಲೆ ನಶಿಸಿ ಹೋಗುತ್ತಿರುವ ಕಾಲದಲ್ಲಿ ಜಾನಪದ ಸಾಹಿತ್ಯ ಉಳಿಸುವ ಮಹತ್ತರ ಕಾರ್ಯ ಕರ್ನಾಟಕ ಜಾನಪದ ಪರಿಷತ್ ಮಾಡುತ್ತಿದೆ ಎಂದು ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯ ಭರಮಣ್ಣ ಉಪ್ಪಾರ ಹೇಳಿದರು.
ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ಡಾ.ಶ್ರೀರಾಮ ಇಟ್ಟಣ್ಣವರ ಪ್ರಧಾನ ವೇದಿಕೆಯಲ್ಲಿ ಭಾನುವಾರ ಕನ್ನಡ ಜಾನಪದ ಪರಿಷತ್, ತಾಲೂಕು ಟಕ ಗೋಕಾಕ ವತಿಯಿಂದ ಹಮ್ಮಿಕೊಂಡಿದ್ದ ಗೋಕಾಕ ತಾಲೂಕಿನ ಪ್ರಪ್ರಥಮ ಕನ್ನಡ ಜಾನಪದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಆಧುನಿಕ ಯುಗದಲ್ಲಿ ಜನರಲ್ಲಿ ಜಾನಪದ ಅಭಿರುಚಿ ಕಡಿಮೆಯಾಗುತ್ತಿದ್ದು, ಬಯಲಾಟ, ನಾಟಕ ಮಾಯವಾಗಿವೆ. ಜನರಲ್ಲಿ ಜಾನಪದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಜಾನಪದ ಕಲಾವಿದರನ್ನು ಸರ್ಕಾರ ಗುರುತಿಸಿ ಗೌರವಿಸುವ ಕಾರ್ಯಮಾಡಬೇಕಿದೆ ಎಂದರು.
ತಾಲೂಕಿನ 25 ಜಾನಪದ ಕಲಾವಿದರಿಗೆ ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಹಡಗಿನಾಳದ ಮುತ್ತೇಶ್ವರ ಸ್ವಾಮೀಜಿ, ವಡೆಯರಹಟ್ಟಿಯ ನಾರಾಯಣ ಶರಣರು, ಕಸಾಪ ತಾಲೂಕು ಟಕದ ಅಧ್ಯೆ ಭಾರತಿ ಮದಬಾಂವಿ, ಗೌಡಪ್ಪ ಪಾಟೀಲ, ಬಸವರಾಜ ಉಮರಾಣಿ, ಕಜಾಪ ತಾಲೂಕು ಟಕದ ಅಧ್ಯ ಜಯಾನಂದ ಮಾದರ, ಪುಷ್ಪಾ ಮುರಗೋಡ, ವಿದ್ಯಾ ರೆಡ್ಡಿ, ಮಹಾಂತೇಶ ತಾವಂಶಿ, ಬಲದೇವ ಸಣ್ಣಕ್ಕಿ, ಡಾ.ಅರುಣ ಸವತಿಕಾಯಿ, ಕಲಾವಿದ ಜಿ.ಕೆ.ಕಾಡೇಶಕುಮಾರ, ಈಶ್ವರಚಂದ್ರ ಬೆಟಗೇರಿ, ಗೌಡಪ್ಪ ಪಾಟೀಲ, ಮಾಲಪ್ಪ ಆಡಿನ, ಡಾ.ಎಲ್.ಎಸ್.ಚೌರಿ, ಬಿ.ಬಿ.ಪಟಗುಂದಿ, ಆನಂದ ಸೋರಗಾವಿ ಇತರರಿದ್ದರು.