ಕಲಬುರಗಿಯಲ್ಲಿ ಗುರುವಾರ ಆಯೋಜಿಸಿದ್ದ ಜಾನಪದ ಮತ್ತು ಸಾಂಸ್ಕೃತಿಕ ಕಲರವ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಉದ್ಘಾಟಿಸಿದರು. ಡಾ.ಹನುಮಂತರಾವ ದೊಡ್ಡಮನಿ, ಬಸವರಾಜ ತೋಟದ, ದೇವೀಂದ್ರಪ್ಪ ಕಪನೂರ, ಶರಣಪ್ಪ ಸಿಂಪಿ ಇತರರಿದ್ದರು. 
ರಾಜ್ಯ

ಜನಪದ ಜನರ ಭಾವನೆ ಬೆಸೆಯುವ ಮಾಧ್ಯಮ

ಪ್ರಮುಖ ಮುಖ್ಯಾಂಶಗಳು

  • ಕಸಾಪ ಜಿಲ್ಲಾಧ್ಯಕ್ಷ ತೇಗಲತಿಪ್ಪಿ ಅನಿಸಿಕೆ >
  • ಕಲಬುರಗಿ ಕಲಾ ಮಂಡಳದಲ್ಲಿ ಜಾನಪದ, ಸಾಂಸ್ಕೃತಿಕ ಕಲರವ
ಕಲಬುರಗಿ: ಸಂಗೀತಕ್ಕೆ ಯಾವುದೇ ಭಾಷೆ, ಜಾತಿ ಮತ್ತು ಧರ್ಮದ ಮೀತಿಯಿಲ್ಲ. ಇದು ಜನರ ಭಾವನೆ ಬೆಸೆಯುವ ಬಹುದೊಡ್ಡ ಶಕ್ತಿಯುತ ಮಾಧ್ಯಮ ಎಂದು ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಡಿ ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆ ನಗರದ ಕಲಾ ಮಂಡಳದಲ್ಲಿ ಗುರುವಾರ ಏರ್ಪಡಿಸಿದ್ದ ಜಾನಪದ ಮತ್ತು ಸಾಂಸ್ಕೃತಿಕ ಕಲರವ ಕಾರ್ಯಕ್ರಮ ಉದ್ಘಾಟಿಸಿದ ಅವರು, ಶಾಸಿಯ ಸಂಗೀತ ಅಥವಾ ಹಿತವಾದ ಜಾನಪದ ಗೀತೆಗಳನ್ನು ಆಲಿಸುವುದರಿಂದ ಮಾನಸಿಕ ಒತ್ತಡ ಕಡಿಮೆ ಜತೆಗೆ ಏಕಾಗ್ರತೆಯೂ ಹೆಚ್ಚಲಿದೆ ಎಂದರು.
ರಾಜ್ಯ ಯುವ ಪ್ರಶಸ್ತಿ ಪುರಸತ ಬಸವರಾಜ ತೋಟದ ಮಾತನಾಡಿ, ಕಲಾವಿದರಿಗೆ ಅವಕಾಶ ಕೊಡುವ ಮೂಲಕ ಪ್ರೋತ್ಸಾಹಿಸುವ ಕಾರ್ಯ ಮಾಡಲಾಗುತ್ತಿದೆ. ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಡಾ.ಹನುಮಂತರಾವ ದೊಡ್ಡಮನಿ, ಹಿರಿಯ ಪತ್ರಕರ್ತ ದೇವೇಂದ್ರಪ್ಪ ಕಪನೂರ, ಹೋರಾಟಗಾರ ದತ್ತು ಭಾಸಗಿ, ಮಲ್ಲಿಕಾರ್ಜುನ ಮಾತನಾಡಿದರು. ಸಂಸ್ಥೆ ಅಧ್ಯ ಶರಣಪ್ಪ ಸಿಂಪಿ ಅಧ್ಯಕ್ಷತೆ ವಹಿಸಿದ್ದರು.
ವೀರಗಾಸೆ, ಪುರವಂತಿಗೆ (ಶಿವಕುಮಾರ ಡಬರಾಬಾದ ತಂಡ), ಶಹನಾಯಿ (ಚಂದ್ರಕಾಂತ ಡಿಗ್ಗಿ ತಂಡ), ಜಾನಪದ ಗಾಯನ (ಬಸವರಾಜ ಶೃಂಗೇರಿ ತಂಡ), ಸುಗಮ ಸಂಗೀತ (ಸಿದ್ಧಲಿಂಗ ಮಾವೂರ ತಂಡ), ತತ್ವಪದ ಗಾಯನ (ಮಹಾಂತಪ್ಪ ಕಾಂಬಳೆ ತಂಡ), ಹಂತಿ ಪದ (ಮಲ್ಲಪ್ಪ ದೊಡ್ಡಿ), ಜಾನಪದ ನೃತ್ಯ (ಸಾನ್ವಿ ಯನಗುಂಟಿ), ಅತಾ ನಂದೂರ ಭರತ ನಾಟ್ಯ ಪ್ರದರ್ಶಿಸಿದರು. ಲಕ್ಷ್ಮಣ ಹೇರೂರ ತಬಲಾ, ಶ್ರೀಧರ ಹೊಸಮನಿ ಹಾಮೋರ್ನಿಯಂ ಸಾಥ್​ ನೀಡಿದರು.
"

ಜಾನಪದ ಸಾಹಿತ್ಯ ಜನಪದರ ಕಥೆಯಷ್ಟೇ ಅಲ್ಲ, ಅದು ಇಡೀ ಕನ್ನಡ ಭಾಷೆ ಮತ್ತು ಶಿಷ್ಟ ಸಾಹಿತ್ಯದ ತಾಯಿ ಬೇರು. ಬಾಯಿಯಿಂದ ಬಾಯಿಗೆ ಹರಿದುಬಂದ ಈ ಮೌಖಿಕ ಪರಂಪರೆ ಕನ್ನಡ ಸಂಸ್ಕೃತಿಯ ಜೀವನಾಡಿಯಾಗಿದೆ.

— > ಡಾ.ಹನುಮಂತರಾವ ದೊಡ್ಡಮನಿ ಹಿರಿಯ ಸಾಹಿತಿ