ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ವಚನ ಶಿಲಾಶಾಸನ ಮಂಟಪ ಇಂಗಳೇಶ್ವರ ವಿರಕ್ತಮಠದ ಲಿಂ. ಸಿದ್ಧಲಿಂಗ ಶಿವಯೋಗಿಗಳ 92ನೇ ಜಾತ್ರಾಮಹೋತ್ಸವ ಅಂಗವಾಗಿ ಜಾನಪದ ಸಾಹಿತ್ಯ ಸಂಭ್ರಮವನ್ನು ಆಲಮೇಲದ ಶ್ರೀಗಳು ಉದ್ಘಾಟಿಸಿದರು. ಶಿವಾನಂದ ಮಂಗಾನವರ, ಬಸವರಾಜ ಹಾರಿವಾಳ, ದೇವೇಂದ್ರ ಗೋನಾಳ ಮತ್ತಿತರರಿದ್ದರು.
- ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಅಭಿಪ್ರಾಯ
- ಗುರುವಂದನಾ ಸಮಾರಂಭ
ಬಸವನಬಾಗೇವಾಡಿ: ಸರಳ ಭಾಷೆಯಿಂದ ಕೂಡಿದ ಜಾನಪದ ಸಾಹಿತ್ಯ ಸಮುದಾಯದ ಅಂಕು ಡೊಂಕುಗಳನ್ನು ತಿದ್ದುವ ಸಾಮರ್ಥ್ಯ ಹೊಂದಿದೆ ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಇಂಗಳೇಶ್ವರ ವಚನ ಶಿಲಾಶಾಸನ ಮಂಟಪ ಇಂಗಳೇಶ್ವರ ವಿರಕ್ತಮಠದ ಲಿಂ. ಸಿದ್ಧಲಿಂಗ ಶಿವಯೋಗಿಗಳ 92ನೇ ಜಾತ್ರಾಮಹೋತ್ಸವ ಹಾಗೂ ಲಿಂ ಚನ್ನಬಸವ ಸ್ವಾಮೀಜಿಗಳ 95ನೇ ಗುರುವಂದನಾ ಸಮಾರಂಭ ಅಂಗವಾಗಿ ಜಾನಪದ ಸಾಹಿತ್ಯ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರು ಜಾನಪದ ಸಂಸ್ಕೃತಿಯ ಮೌಲ್ಯಗಳನ್ನು ಪ್ರತಿಪಾದಿಸಿ ಅದರಂತೆ ನಡೆದು ಸುಂದರ ಸೌಹಾರ್ದತೆಯ ಜೀವನ ಕಟ್ಟಿಕೊಂಡು ಮಾದರಿಯಾಗಿದ್ದಾರೆ ಎಂದರು.
ಜಾನಪದ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ಜಾನಪದ ಸಾಹಿತ್ಯ ಬೆಳೆಸಿ ಉಳಿಸಿ ಮೌಖಿಕ ಪರಂಪರೆಯಿಂದ ಬೆಳೆದು ಬಂದ ಜನಸಾಮಾನ್ಯರ ಸಾಹಿತ್ಯವಾಗಿದೆ. ಜಾನಪದ ಗೀತೆಗಳು. ಕಥೆಗಳು. ಗಾದೆಗಳು. ಒಗಟುಗಳು ಪ್ರಖ್ಯಾತಗೊಂಡಿವೆ. ರಾಜ್ಯದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು ಜನಪದರ ಆಸ್ತಿ ಎಂದು ಹೇಳಿದರು.
ಶಿಕ್ಷಕ ಅಶೋಕ ಹಂಚಲಿ, ಶಿವಲೀಲಾ ಮುರಾಳ ಮಾತನಾಡಿದರು.
ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಮಂಗಾನವರ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸವರಾಜ ಹಾರಿವಾಳ, ಜಾನಪದ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ದೇವೇಂದ್ರ ಗೋನಾಳ, ಜಾನಪದ ಚಿಂತಕ ಬಸವರಾಜ ಸಾರವಾಡ, ವಿವೇಕಾನಂದ ಕಲ್ಯಾಣಶೆಟ್ಟಿ, ಬುರಾವ ಮಹಾರಾಜ, ನಿಂಗಪ್ಪ ಬೋಮ್ಮನಳ್ಳಿ, ಕಾಶಿನಾಥ ಅವಟಿ, ಎಲ್. ಒಂಕಾರ, ಯಮನಪ್ಪ ಮಿಣಜಗಿ, ವಿಜಯಲಕ್ಷ್ಮೀ ಹಳಕಟ್ಟಿ, ವೀರಣ್ಣ ಬೇಕಿನಾಳ, ಸಿ.ಬಿ. ಬಿರಾದಾರ ಮತ್ತಿತರರಿದ್ದರು.
ಹೆಬ್ಬಾಳ ಗ್ರಾಮದ ರೈತರ ಹಂತಿ ಪದ ಹಾಡಿ ರಂಜಿಸಿದರು. ಕಸಾಪ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಶಿವಾನಂದ ಡೋಣೂರ ಸ್ವಾಗತಿಸಿ ಗೌರವಿಸಿದರು. ಶಶಿಕಲಾ ನಾಯ್ಕೋಡಿ ಜಾನಪದ ಗೀತಗಾಯನ ಮಾಡಿದರು.