ಹಡಗಿನಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಥಮ ಕನ್ನಡ ಜಾನಪದ ಸಮ್ಮೇಳನವನ್ನು ಡಾ.ಸಿ.ಟಿ.ಗುರುಪ್ರಸಾದ ಉದ್ಘಾಟಿಸಿದರು. ಅರವಿಂದ ಪಾಶ್ಚಾಪುರ, ಬಸಗೌಡ ಪಾಟೀಲ ಇತರರಿದ್ದರು.
ಗೋಕಾಕ: ಉತ್ತರ ಕರ್ನಾಟಕ ಜಾನಪದ ಸೊಗಡಿನ ತವರೂರು. ಅದನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಹಂಪಿ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥ ಡಾ.ಸಿ.ಟಿ.ಗುರುಪ್ರಸಾದ ಹೇಳಿದರು.
ತಾಲೂಕಿನ ಹಡಗಿನಾಳ ಗ್ರಾಮದ ಡಾ.ಶ್ರೀರಾಮ ಇಟ್ಟಣ್ಣವರ ಪ್ರಧಾನ ವೇದಿಕೆಯಲ್ಲಿ ಕನ್ನಡ ಜಾನಪದ ಪರಿಷತ್ ಹಾಗೂ ತಾಲೂಕು ಟಕದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಜಾನಪದ ನಿರಂತರವಾದುದು. ಇದಕ್ಕೆ ಕೊನೆಯಿಲ್ಲ. ಇಂದಿನ ಪೀಳಿಗೆಗೆ ಜಾನಪದ ಪರಿಚಯಿಸುವ ಕಾರ್ಯ ಮಾಡಬೇಕು. ಕಲಾವಿದರು ಜಾನಪದದ ಜೀವಾಳ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸರ್ಕಾರ ಕಲಾವಿದರ ಕೇಂದ್ರ ಸ್ಥಾಪಿಸುವ ಕಾರ್ಯ ಮಾಡಬೇಕಿದೆ ಮುಂದಿನ ಪೀಳಿಗೆಗೆ ಜಾನಪದ ಮತ್ತು ಕಲಾವಿದರ ಮಹತ್ವ ತಿಳಿಸೋಣ ಎಂದರು.
ಬಸವಣ್ಣೆಪ್ಪ ಕಬಾಡಗಿ ಮಾತನಾಡಿ, ಗೋಕಾವಿ ಸುಂದರ ನೈಸರ್ಗಿಕ ಪರಿಸರದಲ್ಲಿ ನೆಲೆಗೊಂಡು ನಾಡಿನ ಕಲೆ, ಸಾಹಿತ್ಯ ಸಂಸತಿ ಹಾಗೂ ಶೈಕ್ಷಣಿಕ ಕ್ಷೇತ್ರಗಳಿಗೆ ಮೌಲಿಕ ಕೊಡುಗೆ ನೀಡಿದೆ. ತಪಸ್ವಿ ತಡಸಲ ಮಹಾಲಿಂಗೇಶ್ವರರು, ಅರಬಾವಿ ದುರದುಂಡೀಶ್ವರರು, ಸಾವಳಗಿ ಶಿವಲಿಂಗೇಶ್ವರರು, ಕೊಣ್ಣೂರು ಕಾಡಸಿದ್ಧೇಶ್ವರರು ಹಾಗೂ ಅಂಕಲಗಿ ಅಡವಿಸಿದ್ಧೇಶ್ವರರಂಥ ಹಲವು ತಪಸ್ವಿಗಳು ನಡೆದಾಡಿದ ಪುಣ್ಯಭೂಮಿ ಎಂದರು.
ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಯುವ ಮುಖಂಡ ಸವೋರ್ತ್ತಮ ಜಾರಕಿಹೊಳಿ ಮಾತನಾಡಿ, ಜಾನಪದ ಕ್ಷೇತ್ರದಲ್ಲಿ ಗೋಕಾಕ ಕಜಾಪ ಉತ್ತಮ ಸಂಟನೆ ಮಾಡಿದೆ. ಎಂದರು.ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಎಸ್.ಬಾಲಾಜಿ ಮಾತನಾಡಿ, ಜಾನಪದ ಕಲಾವಿದರ ಮಾಶಾಸನ ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಗ್ರಂಥಗಳನ್ನು ಲೋಕಾರ್ಪಣೆಗೊಳಿಸಿದ ಶಹಜಹಾನ್ ಮುದಕವಿ ಮಾತನಾಡಿದರು. ಶೂನ್ಯ ಸಂಪಾದನ ಮಠದ ಮುರುರಾಜೇಂದ್ರ ಸ್ವಾಮೀಜಿ, ಸ್ಥಳಿಯ ಮುತ್ತೇಶ್ವರ ಸ್ವಾಮೀಜಿ ಆರ್ಶೀವಚನ ನೀಡಿದರು.
ಪತ್ರಕರ್ತ ಸಾದಿಕ್ ಹಲ್ಯಾಳ, ಸಾಹಿತಿ ಡಾ.ಸುರೇಶ ಹನಗಂಡಿ ಸಂಪಾದಿಸಿದ "ಗೋಕಾವಿ ಮುತ್ತು' ಸ್ಮರಣ ಸಂಚಿಕೆ, ಜಯಾನಂದ ಮಾದರ ಅವರ "ಮಣ್ಣಿನ ದ್ವೀಪಗಳು' ಹಾಗೂ ಅನಿಲ ಮಡಿವಾಳರ "ಕಾಲಚಕ್ರ' ಕೃತಿಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ನಿವೃತ್ತ ನ್ಯಾಯಾಧೀಶ ಅರವಿಂದ ಪಾಶ್ಚಾಪುರ, ಜಿಪಂ ಮಾಜಿ ಅಧ್ಯ ಬಸಗೌಡ ಪಾಟೀಲ, ಪ್ರೊ.ಚಂದ್ರಶೇಖರ ಅಕ್ಕಿ, ರಾಮಣ್ಣ ಹುಕ್ಕೇರಿ, ಎಸ್.ಬಿ.ಸೊಂಡೂರ, ಕಜಾಪ ಜಿಲ್ಲಾಧ್ಯ ಮೋಹನ ಗುಂಡ್ಲೂರ, ತಾಲೂಕಾಧ್ಯಕ್ಷ ಜಯಾನಂದ ಮಾದರ, ಬಿ.ಪಿ.ಲಮಾಣಿ, ಮಂಜುಳಾ ಗೀದಿ, ಪ್ರೊ.ಕೆ.ಎಸ್.ಕೌಜಲಗಿ ಇತರರಿದ್ದರು.