ವಿಜಯಪುರ ಹೋಬಳಿ ವೆಂಕಟಗಿರಿಕೋಟೆಯಲ್ಲಿ ಸಮೃದ್ಧಿ ಸಮಾಜ ಸೇವಾ ಟ್ರಸ್ಟಿನಿಂದ ಆಯೋಜಿಸಿದ್ದ ಜಾನಪದ ಕಲಾ ಉತ್ಸವದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಅವರು ಸಂಘದ ಸದಸ್ಯರನ್ನು ಅಭಿನಂದಿಸಿದರು. ಕೇಂದ್ರ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಹೊಸಕೋಟೆ ಸುಬ್ಬರಾಜು, ಸಮೃದ್ಧಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಕದಿರಪ್ಪ ಇದ್ದರು.
ವಿಜಯಪುರ : ಜಾನಪದ ಕಲೆಯು, ಭಾವನಾತ್ಮಕವಾಗಿ ಕೂಡಿರುವ ಕಲೆಯಾಗಿದ್ದು, ದೇಶ, ವಿದೇಶಗಳಲ್ಲಿಲ್ಲೂ ನಮ್ಮ ಸಂಸತಿಯನ್ನು ಪ್ರತಿಬಿಂಬಿಸುವ ಮೂಲಕ ಗಂಡುಕಲೆಯಾಗಿ ಪ್ರಸಿದ್ಧಿ ಪಡೆದುಕೊಂಡಿದೆ. ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಹೋಬಳಿಯ ವೆಂಕಟಗಿರಿಕೋಟೆಯ ಮಂಜುನಾಥ ಪ್ರೌಢಶಾಲೆಯ ಆವರಣದಲ್ಲಿ ಸಮೃದ್ಧಿ ಸಮಾಜ ಸೇವಾ ಟ್ರಸ್ಟಿನ 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಮೃದ್ಧಿ ಜಾನಪದ ಕಲಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಕಲಾವಿದರಿಂದ ಜಾನಪದ ಕಲೆ ಜೀವಂತವಾಗಿದೆ. ಶಿಡ್ಲಘಟ್ಟ ತಾಲೂಕಿನ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರು, ತಮಟೆ ವಾದನದ ಮೂಲಕ ಜಪಾನ್ನಲ್ಲಿ ಕಲೆ ಪ್ರದರ್ಶಿಸಿ ದೇಶದ ಕೀರ್ತಿಯನ್ನು ಮೆರೆದಿದ್ದಾರೆ. ಅಂತಹ ಕಲಾವಿದರನ್ನು ಹುಟ್ಟು ಹಾಕುವುದಕ್ಕೆ ಮತ್ತು ಕಲಾವಿದರಲ್ಲಿನ ಕಲೆಯನ್ನು ಅನಾವರಣಗೊಳಿಸುವುದಕ್ಕೆ ಜಾನಪದ ಕಲಾ ಉತ್ಸವಗಳು ಉತ್ತಮ ವೇದಿಕೆಗಳಾಗಲಿವೆ ಎಂದರು.
ಬುಳ್ಳಹಳ್ಳಿಯ ತಮಟೆ ವಾದನ ತಂಡ ಪ್ರಥಮ ಬಹುಮಾನ, ಹಾಗೂ ಬೈಚಾಪುರ ತಮಟೆ ವಾದನ ತಂಡ ದ್ವೀತಿಯ ಸ್ಥಾನ, ಬೂದಿಗೆರೆ ತಮಟೆ ವಾದನ ತಂಡ ಮೂರನೇ ಬಹುಮಾನ ಪಡೆದುಕೊಂಡರು. ಅಂತಾರಾಷ್ಟ್ರೀಯ ಖ್ಯಾತಿಯ ಜಂಬೆಬಾಲು ಅವರ ತಂಡದಿಂದ ಆಕರ್ಷಕವಾದ ಜಂಬೆವಾದನ ಎಲ್ಲರ ಗಮನ ಸೆಳೆಯಿತು. ಜಾನಪದ ಗಾಯನ, ಸುಗಮ ಸಂಗೀತ, ಜಂಬೆ ಜಲಕ್ ಡೊಳ್ಳುಕುಣಿತ, ಮಹಿಳಾ ವೀರಗಾಸೆ, ತಮಟೆ ವಾದ್ಯ, ಕೀಲು ಕುದುರೆ, ನಗಾರಿ, ಗಾರುಡಿ ಬೊಂಬೆ, ಮುಂತಾದ ಜಾನಪದ ಕಲಾವಿದರು ಭಾಗವಹಿಸಿದ್ದರು.
ಬಮುಲ್ ನಿರ್ದೇಶಕ ಎಸ್.ಪಿ. ಮುನಿರಾಜು, ಬಯಾಪ ನಿರ್ದೇಶಕ ವಿ.ರಾಮಚಂದ್ರಪ್ಪ, ಗ್ಯಾಸ್ ಶ್ರೀನಿವಾಸ್, ಮುದುಗುರ್ಕಿ ವಿ.ನಾರಾಯಣಸ್ವಾಮಿ, ವಿ.ಹನುಮಂತಪ್ಪ, ಚಿಕ್ಕಬಳ್ಳಾಪುರ ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ, ಟ್ರಸ್ಟಿನ ಗೌರವಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ, ಚಂದೇನಹಳ್ಳಿ ಮುನಿಯಪ್ಪ, ಜಾಲಿಗೆ ಮುನಿರಾಜು, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ಆರ್. ಅಮರನಾಥ್, ರವಿಪ್ರಕಾಶ್, ಸಿ.ಸಜ್ಜಾದ್, ಎಂ.ಜಗದೀಶ್, ಟ್ರಸ್ಟಿನ ಪದಾಧಿಕಾರಿಗಳಾದ ಎಂ.ವೇಣುಗೋಪಾಲ್, ಬಿ.ಟಿ.ಸುಧಾಮಣಿ, ಮುನಿರಾಜು, ನರಸಿಂಹಪ್ಪ, ಎನ್.ಮುನಿರಾಜು, ನಿರ್ದೇಶಕರಾದ ದೇವರಾಜು, ವೆಂಕಟೇಶ್ ಪ್ರಭು, ನರಸಿಂಹಮೂರ್ತಿ, ಮುನಿರತ್ನಮ್ಮ, ನರಸಿಂಹಮೂರ್ತಿ, ಮಾರಪ್ಪ, ಜಗದೀಶ್, ನಾರಾಯಣಸ್ವಾಮಿ, ಪ್ರಕಾಶ್, ಮಾರಪ್ಪ, ಮುನಿರಾಜು, ವೆಂಕಟೇಶ್, ಮುನಿಯಪ್ಪ, ಕೇಶವ ಇದ್ದರು.