ಓದಿನ ಕಡೆ ಗಮನ ಹರಿಸಿ reading
ಬೂದಿಕೋಟೆ: ಪರೀಕ್ಷಾ ದಿನಗಳು ಸಮೀಪಿಸುತ್ತಿರುವುದರಿಂದ ಮೊಬೈಲ್, ಟಿವಿಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಓದಿನ ಕಡೆ ಗಮನ ಹರಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ನಾಗಾನಂದ ಕೆಂಪರಾಜ್ ಹೇಳಿದರು.reading
ಬಂಗಾರಪೇಟೆ ತಾಲೂಕು ಬೂದಿಕೋಟೆಯ ದಿ ಜ್ಯೋತಿ ಇಂಟರ್ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಪಾಲಕರ ಸಹಕಾರವಿದ್ದರೆ ಮಕ್ಕಳು ಉತ್ತಮ ಫಲಿತಾಂಶ ಗಳಿಸುತ್ತಾರೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು. ವಿದ್ಯೆ ಮನುಷ್ಯನನ್ನು ಬೆಳಸುತ್ತದೆ. ಎತ್ತರಕ್ಕೆ ಬೆಳದ ವ್ಯಕ್ತಿ ಸಮಾಜದ ಪ್ರಗತಿ, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಬೂದಿಕೋಟೆ ಗ್ರಾಮದ ಚಂದ್ರಶೇಖರ್, ಪ್ರಭು, ಕೃಷ್ಣಾರೆಡ್ಡಿ, ರಾಜಗೋಪಾಲ್, ಗೋವಿಂದಪ್ಪ, ಪ್ರಾಂಶುಪಾಲ ಸತೀಶ್ ಕುಮಾರ್, ಜಗದೀಶ್, ಹರೀಶ್ ಇದ್ದರು.