ಸೂಲಿಬೆಲೆ ಸರ್ಕಾರಿ ಪದವಿಪೂರ್ವ ಕಾಲೇಜು ವಾರ್ಷಿಕೋತ್ಸವವನ್ನು ಸಮಿತಿ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ ಉದ್ಘಾಟಿಸಿದರು. ಸಮಿತಿ ಖಜಾಂಚಿ ವಿ.ಪ್ರಸಾದ್, ನಗರೇನಹಳ್ಳಿ ನಾಗರಾಜಪ್ಪ, ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ, ಸದಸ್ಯ ಬೆಟ್ಟಹಳ್ಳಿ ಗೋಪಿನಾಥ್ ಇದ್ದರು.
ಸೂಲಿಬೆಲೆ : ಪದವಿಪೂರ್ವ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಯ ಹೊಣೆ ನಮ್ಮದಾಗಿದ್ದು, ಪೂರಕವಾಗಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತರಬೇಕಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ ಹೇಳಿದರು.
ಸೂಲಿಬೆಲೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕ್ರೀಡೆ ಮತ್ತು ಸಾಂಸತಿಕ ಚಟುವಟಿಕೆಗಳ ವಾರ್ಷಿಕೋತ್ಸವ ಸಮಾರೋಪ ಉದ್ಘಾಟಿಸಿ ಮಾತನಾಡಿದರು. ಶಾಸಕ ಶರತ್ ಬಚ್ಚೇಗೌಡ ಅವರು ಶೈಕ್ಷಣಿಕವಾಗಿ ಹೆಚ್ಚು ಆಸಕ್ತಿ ಹೊಂದಿದ್ದು, ಕಾಲೇಜಿನ ಅಭಿವೃದ್ಧಿ ವಿಚಾರದಲ್ಲಿ ಸೂಕ್ಷ$್ಮವಾಗಿ ಗಮನಿಸುತ್ತಾರೆ. ವಿದ್ಯಾರ್ಥಿಗಳು ನಮಗೆ ಬಹುಮಾನ ರೂಪದಲ್ಲಿ ಉತ್ತಮ ಫಲಿತಾಂಶ ನೀಡಬೇಕು ಎಂದರು.
ಬಮುಲ್ ನಿರ್ದೇಶಕ ಬಿ.ವಿ.ಸತೀಶಗೌಡ ಅವರು, ವಿದ್ಯಾರ್ಥಿಗಳಿಗೆ ನಂದಿನಿ ಪೇಡಾ, ನಂದಿನಿ ಮಜ್ಜಿಗೆ ಹಾಗೂ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಕಾಲೇಜು ಅಭಿವೃದ್ಧಿಸಮಿತಿ ಸದಸ್ಯ ನಗರೇನಹಳ್ಳಿ ನಾಗರಾಜಪ್ಪ ಅವರು ಕ್ರೀಡಾ ಮತ್ತು ಸಾಂಸ್ಕತಿಕ ಸ್ಪರ್ಧೆಗಳ ವಿಜೇತರಿಗೆ ಹಾಗೂ ದ್ವೀತಿಯಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಖಜಾಂಚಿ ವಿ.ಪ್ರಸಾದ್ , ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಾಷಾ, ಪ್ರಾಂಶುಪಾಲ ಮಂಜುನಾಥ್, ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ, ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ವೆಂಕಟೇಶ್, ರಾಜ್ಯ ವೈಜ್ಞಾನಿಕ ವಿಜ್ಞಾನ ಪರಿಷತ್ ಜಿಲ್ಲಾಧ್ಯಕ್ಷ ಎಂ.ಆರ್.ಉಮೇಶ್, ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ, ನಿರ್ದೇಶಕ ಅತ್ತಿಬೆಲೆ ಮಂಜುನಾಥ್, ಸೈಯದ್ ಮಹಬೂಬ್, ನಯಾಜ್ ಖಾನ್, ಉಪನ್ಯಾಸಕರಾದ ಸುಬ್ರಮಣಿ, ಕುಮಾರ್, ಸರಸ್ವತಿ, ರೇಣುಕಾ, ಶ್ರೀಕೃಪಾ, ಮೃತ್ಯುಂಜಯ, ನಾಗರಾಜ್, ಉರ್ದು ಶಾಲೆ ಆಧ್ಯಕ್ಷ ಇನಾಯತ್ ಇದ್ದರು.