ಕೋಲಾರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೋಲಾರಮ್ಮ ಹೂವಿನ ಮಾರುಕಟ್ಟೆಯನ್ನು ಶಾಸಕ ಕೊತ್ತೂರು ಜಿ. ಮಂಜುನಾಥ್ ಉದ್ಘಾಟಿಸಿದರು. ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್, ಡಿಐಜಿಪಿ ಡಿ. ದೇವರಾಜ್, ಮಾಜಿ ಸಚಿವ ವರ್ತೂರು ಪ್ರಕಾಶ್ ಇದ್ದರು.
ಕೋಲಾರ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಪಿಎಂಸಿ ಮಾರುಕಟ್ಟೆ ಸಮೀಪ ಭೋಗ್ಯಕ್ಕೆ ಪಡೆದಿರುವ ಜಮೀನಿನಲ್ಲಿ ಮಂಡಿ ಮಾಲೀಕರೇ 12 ಮಳಿಗೆಗಳ ಜತೆಗೆ 4 ಮಳಿಗೆಗಳನ್ನು ನೂತನವಾಗಿ ನಿರ್ಮಿಸಿರುವ ಕೋಲಾರಮ್ಮ ಹೂವಿನ ಮಾರುಕಟ್ಟೆಯನ್ನು ಗುರುವಾರ ಶಾಸಕ ಕೊತ್ತೂರು ಜಿ.ಮಂಜುನಾಥ್ ಉದ್ಘಾಟಿಸಿದರು.
ನೂತನ ಮಾರುಕಟ್ಟೆಯಿಂದ ಹೂವಿನ ವ್ಯಾಪಾರಿಗಳಿಗೆ ಅನುಕೂಲವಾಗಲಿದ್ದು, ವ್ಯಾಪಾರಕ್ಕೆ ಸುಸಜ್ಜಿತ ವ್ಯವಸ್ಥೆ ಆಗಲಿದೆ ಎಂದು ಗಣ್ಯರು,ರೈತರು ಮತ್ತು ಮಂಡಿ ಮಾಲೀಕರು ಅಭಿಪ್ರಾಯಪಟ್ಟರು.
ಜೆಡಿಎಸ್ ಮುಖಂಡ ಶ್ರೀನಾಥ್ ಇತರರಿದ್ದರು.