ಕರಿಯಪ್ಪ ತಾತನ ಹೂವಿನ ರಥ. 
ರಾಜ್ಯ

ಕಕ್ಕೇರಾದಲ್ಲಿಂದು ಹೂವಿನ ರಥೋತ್ಸವ

ಪ್ರಮುಖ ಮುಖ್ಯಾಂಶಗಳು

  • ಸಂಗಮೇಶ್ವರ ಮಠದ ಶ್ರೀ ಕರಿಯಪ್ಪ ತಾತನವರ ಜಾತ್ರೋತ್ಸವ
  • ಶ್ರೀ ಕರಿಯಪ್ಪ ತಾತನವರ ಜಾತ್ರೋತ್ಸವ
ಕಕ್ಕೇರಾ:

ಸ್ಥಳೀಯ ಶ್ರೀ ಸಂಗಮೇಶ್ವರ ಮಠದ ಪರಿಸರದಲ್ಲಿ ಶ್ರೀ ಕರಿಯಪ್ಪ ತಾತನ ಜಾತ್ರೋತ್ಸವ ನಿಮಿತ್ತ ಸೋಮವಾರ ಸಂಜೆ ಸೋಮವಾರ ಸಂಜೆ ಹೂವಿನ ರಥೋತ್ಸವ ಜರುಗಲಿದೆ.

ಮಠದಲ್ಲಿ ಮುತ್ತೆÊದೆಯರು ನಾಗದೇವತೆಗೆ ಬೆಲ್ಲದ ಹಾಲು ಎರೆದ ಬಳಿಕ ಸಿöÃ, ಪುರುಷರೆನ್ನದೆ ಎಲ್ಲರೂ ನಾಗದೇವರ ದಾರ ಕಟ್ಟಿಸಿಕೊಳ್ಳುವರು. ಇಷ್ಟಾರ್ಥ ಸಿದ್ಧಿಗಾಗಿ ಬೆಳಗ್ಗೆ ದೀರ್ಘದಂಡ ನಮಸ್ಕಾರ, ದೇವರಿಗೆ ಕೊಡೆಗಳನ್ನು ನೀಡಿ ಭಕ್ತಿ ಸಮರ್ಪಣೆ ಸಲ್ಲಿಸುವರು. ಮೈಸೂರ ದಸರಾ ಖ್ಯಾತಿಯ ಬೀರಲಿಂಗೇಶ್ವರ ಡೊಳ್ಳಿನ ಸಂಘದವರು ಡೊಳ್ಳಿನ ಪದಗಳ ಮೂಲಕ ರಂಜಿಸುವರು.
ಸAಜೆ ೫.೩೦ಕ್ಕೆ ರಥಕ್ಕೆ ಶ್ರೀಮಠ ಜತೆ ಸಂಘ-ಸAಸ್ಥೆಗಳಿAದ ಹಾರ ಅರ್ಪಿಸಿದ ಬಳಿಕ ಹೂವಿನ ರಥೋತ್ಸವ ಜರುಗಲಿದೆ. ಶ್ರೀ ನಂದಣ್ಣಪ್ಪ ಪೂಜÁರಿ, ಅರ್ಚಕ ಮಾನಯ್ಯ ಪೂಜÁರಿ, ಮಠದ ಟ್ರಸ್ಟ್ ಅಧ್ಯಕ್ಷ ಸೀತಾರಾಮ ನಾಯಕ ಜಹಾಗೀರದಾರ ನೇತೃತ್ವದಲ್ಲಿ ಜÁತ್ರೋತ್ಸವ ನಡೆಯಲಿದೆ.
ಹಿನ್ನೆಲೆ: ಸಂಗಮೇಶ್ವರ ಮಠ ಹೈದರಾಬಾದ್ ನಿಜಾಮನ ಕಾಲಕ್ಕೂ ಮೊದಲು ನಿರ್ಮಾಣವಾಗಿತ್ತು. ಪೂರ್ವಜರ ಪ್ರಕಾರ ಹಿಂದೆ ಈ ಸ್ಥಳÀದಲ್ಲಿ ಸಂಗಯ್ಯ ಮುತ್ಯಾ ವಾಸವಾಗಿದ್ದರು. ಲಿಂಗೈಕ್ಯರಾದ ಬಳಿಕ ಸಮಾಽ ಮಾಡುವಾಗ ನಿಜÁಮನ ಪ್ರಭಾವ ಇದ್ದಿರಬಹುದೆಂದು ಹೇಳಲಾಗುತ್ತದೆ. ಈಗಲೂ ಸಂಗಮೇಶ್ವರರ ಗದ್ದುಗೆಯನ್ನು ಹಸಿರು ಬಟ್ಟೆಯಿಂದ ಹೊದಿಸಲಾಗಿದೆ. ಮುಸ್ಲಿಂ ಸಮಾಜದ ಗೋರಿಯಂತೆ ಕಂಡು ಬರುತ್ತಿದ್ದರೂ ಎಲ್ಲ ಜÁತಿ ಜನಾಂಗದವರು ಪೂಜಿಸುತ್ತಿರುವುದು ಭಾವೈಕ್ಯದ ಸಂಕೇತವಾಗಿದೆ.