ಅಫಜಲಪುರ ತಾಲೂಕಿನ ಅಳ್ಳಗಿ (ಕೆ) ಗ್ರಾಮಕ್ಕೆ ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಭೇಟಿ ನೀಡಿ ವಿದ್ಯುತ್ ಅವಡದಿಂದ ಮೃತನಾದ ರೈತ ಬಸಪ್ಪ ಪೂಜಾರಿ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕ ಧನಸಹಾಯ ಮಾಡಿದರು. ಮಂಜುನಾಥ ಅಂಜುಟಗಿ, ಶಿವಾನಂದ ಗಾಡಿಸಾಹುಕಾರ, ರಮೇಶ ಪೂಜಾರಿ ಇತರರಿದ್ದರು.
- ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಸೂಚನೆ
- ಅಳ್ಳಗಿ(ಕೆ) ಗ್ರಾಮದಲ್ಲಿ ಮೃತ ರೈತ ಕುಟುಂಬಕ್ಕೆ ಸಾಂತ್ವನ
ಅಫಜಲಪುರ: ಮಳೆಗಾಲ ಆರಂಭವಾಗಿದ್ದು, ಜೋತು ಬಿದ್ದಿರುವ ವಿದ್ಯುತ್ ತಂತಿ, ಬಾಗಿರುವ ಹಾಗೂ ಹಾಳಾದ ಕಂಬಗಳನ್ನು ಕೂಡಲೇ ಸರಿಪಡಿಸಬೇಕು. ವಿದ್ಯುತ್ ಅವಡ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಅರುಣಕುಮಾರ ಪಾಟೀಲ್ ಸೂಚನೆ ನೀಡಿದರು.
ಅಳ್ಳಗಿ (ಕೆ) ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ವಿದ್ಯುತ್ಗೆ ಬಲಿಯಾದ ರೈತ ಬಸಪ್ಪ ಪೂಜಾರಿ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕ ಧನಸಹಾಯ ಮಾಡಿದ ಅವರು, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ವಿದ್ಯುತ್ ಸುರಾ ಸಪ್ತಾಹ ನಡೆಸಿ ವಿದ್ಯುತ್ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಮನೆಗೆ ಆಧಾರವಾಗಿದ್ದ ಬಸಪ್ಪ ಪೂಜಾರಿ ಅವರ ಜೀವಕ್ಕೆ ಬೆಲೆ ಕಟ್ಟಲಾಗದು, ಬಡ ಕುಟುಂಬಕ್ಕೆ ವೈಯಕ್ತಿಕವಾಗಿ ಧನ ಸಹಾಯ ಮಾಡಲಾಗಿದೆ. ಜತೆಗೆ ಜೆಸ್ಕಾಂ ಇಲಾಖೆಯಿಂದ ತುರ್ತು ಪರಿಹಾರ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸರ್ಕಾರದಿಂದ ಸಿಗುವ ಎಲ್ಲ ರೀತಿಯ ಪರಿಹಾರ ಕೊಡಿಸಲು ಶ್ರಮಿಸುವೆ ಎಂದರು.
ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಂಜುನಾಥ ಅಂಜುಟಗಿ, ತಾಪಂ ಮಾಜಿ ಅಧ್ಯಕ್ಷ ಶಿವಾನಂದ ಗಾಡಿಸಾಹುಕಾರ, ಪ್ರಮುಖರಾದ ರಮೇಶ ಪೂಜಾರಿ, ಕೃಷ್ಣಾರಾವ ಪಾಟೀಲ್, ಇಮಾಮಶೇಖ್ ಪಟೇಲ್, ಸಂಗನಗೌಡ ಪಾಟೀಲ್, ಸೈಫನಸಾಬ್ ಚಿಕ್ಕಳಗಿ, ರಾಜಶೇಖರಗೌಡ ಪಾಟೀಲ್, ಹಣಮಂತ ಪೂಜಾರಿ, ಅಣ್ಣಾರಾವ ಪಾಟೀಲ್, ಪ್ರವಿಣ ಕಲ್ಲೂರ, ಆನಂದ ಪಾಟೀಲ್, ಮಹಾಂತಪ್ಪ ಶಿಂಧೆ, ಮಹಮ್ಮದ್ ಶೇಖ್, ಶಫಿಕ್ ಭಾಗವಾನ, ಮಲಕಯ್ಯ ಹಿರೇಮಠ, ಅಜರ್ ಮಣ್ಣೂರ, ಸಿದ್ದು ಚೌಡಾಪುರ ಇತರರಿದ್ದರು.