ಕಲಬುರಗಿ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳೊಂದಿಗೆ ಡಾ.ಸುರೇಶಕುಮಾರ ನಂದಗಾಂವ್, ಡಾ.ರಾಮಕೃಷ್ಣರೆಡ್ಡಿ, ಮಯೂರಕುಮಾರ ಗೊರ್ಮೆ, ಡಾ.ದಶರಥ ಮೇತ್ರೆ, ಪ್ರೊ.ದಯಾನಂದ ಹೊಡಲ್, ಡಾ.ಸುನಂದಾ ವಾಂಜರಖೇಡೆ ಇತರರಿದ್ದರು.
ಕಲಬುರಗಿ: ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಐದು ಜನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಭಾರತ ಸರಕಾರದ ಮೈ ಭಾರತ ಯುವಜನ ಸೇವೆಯ ಇಲಾಖೆ ಮತ್ತು ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ 77 ವಿದ್ಯಾರ್ಥಿಗಳು ತುರ್ತು ಪರಿಸ್ಥಿತಿ 50 ವರ್ಷಗಳು : ಭಾರತೀಯ ಪ್ರಜಾಸತ್ತಾತ್ಮಕತೆಗೆ ಸಿಕ್ಕ ಪಾಠಗಳು ಎಂಬ ವಿಷಯದ ಮೇಲೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಕೆ.ಎಲ್.ಇ ಫಾರ್ಮಸಿ ಕಾಲೇಜಿನ ಪವನ ಗುರುರಾಜ ಪ್ರಥಮ, ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಲಕ್ಷಿ$್ಮ ಪಾಟೀಲ ದ್ವೀತಿಯ, ಅಪ್ಪಾಸಾಬ ತೃತೀಯ, ಚೇತನ ನಾಲ್ಕನೆ, ಸಿದ್ಧಲಿಂಗೇಶ್ವರ ಕಾಲೇಜಿನ ಮಹೇಶ ಐದನೆ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಡಾ.ಅನಿತಾ ಮೇತ್ರೆ, ಡಾ.ಸಂಗಪ್ಪ ಮಾಮನಶೆಟ್ಟಿ, ಡಾ.ನಿರ್ಮಲಾ ಸಿರಗಾಪೂರ, ಡಾ.ಎನ್.ಎಸ್.ಹೂಗಾರ ಮತ್ತು ಅಬ್ದುಲ್ ಶಫಿ ನಿರ್ಣಾಯಕರಾಗಿದ್ದರು.
ಆಯ್ಕೆಯಾದ ವಿದ್ಯಾರ್ಥಿಗಳನ್ನು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುರೇಶಕುಮಾರ ನಂದಗಾಂವ್, ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಮಕೃಷ್ಣರೆಡ್ಡಿ, ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೊರ್ಮೆ, ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಶರಥ ಮೇತ್ರೆ ಸನ್ಮಾನಿಸಿದರು.
ಎನ್ಎಸ್ಎಸ್ ಅಧಿಕಾರಿ ಪೊ.ದಯಾನಂದ ಹೊಡಲ್, ನ್ಯಾಕ್ ಸಂಯೋಜಕಿ ಡಾ.ಸುನಂದಾ ವಾಂಜರಖೇಡೆ, ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.