Five injured after car tire explodes
ಚಿಂತಾಮಣಿ: ನಗರದ ಬೆಂಗಳೂರು ಜೋಡಿ ರಸ್ತೆಯ ಕನ್ನಂಪಲ್ಲಿ ಬಳಿ ಕಾರಿನ ಹಿಂಬದಿ ಟಯರ್ ಸ್ಫೋಟಗೊಂಡು ಮರಕ್ಕೆ ಡಿಕ್ಕಿಯಾದ್ದರಿಂದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರಿನಲ್ಲಿದ್ದ ನಗರದ ಕೆ.ಆರ್.ಬಡಾವಣೆ ನಿವಾಸಿಗಳಾದ ಹಿದಾಯತ್ ಉಲ್ಲಾ ಮತ್ತು ಅವರ ಪತ್ನಿ ರೂಹಿ ಫೀರ್ ದೋಸ್, ಮಗ ಮಹ್ಮದ್ ರುಮಾನ್ಗೆ ಗಾಯಗಳಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ರುಹಾನ್ ಮತ್ತು ರಿಫಾ ಫಿರದೋಸ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಕಾರು ರಸ್ತೆ ವಿಭಜಕ ದಾಟಿ ಮರಕ್ಕೆ ಡಿಕ್ಕಿಯಾಗಿದ್ದು, ಅಕ್ಕಪಕ್ಕದಲ್ಲಿದ್ದ ಅಂಗಡಿಯವರು ಮತ್ತು ಸ್ಥಳಿಯರು ಗಾಯಾಳುಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲು ನೆರವಾದರು. ಚಿಂತಾಮಣಿ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.