Five arrested for stealing grapes
ಚಿಕ್ಕಬಳ್ಳಾಪುರ: ಕೊಳವನಹಳ್ಳಿಯ ರೈತನ ತೋಟದಿಂದ ದ್ರಾಕ್ಷಿಯನ್ನು ರಾತ್ರೋರಾತ್ರಿ ಕದ್ದು ಪರಾರಿಯಾಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಗುಡಿಬಂಡೆ ತಾಲೂಕು ಹಳೇಯರಹಳ್ಳಿಯ ವೈ.ಒ.ಅನಿಲ್(21), ಬೆಂಗಳೂರು ನಗರ ಜಿಲ್ಲೆಯ ಚೆನ್ನಹಳ್ಳಿಯ ಸಿ.ಎಂ.ಅಂಬರೀಷ್(33), ವೆಂಕಟೇಶ್(27), ಗಸಾಲು ವೆಂಕಟೇಶ್ (24), ಬೈನಹಳ್ಳಿಯ ವಿಶ್ವನಾಥ್ (24) ಬಂಧಿತರು. ದ್ರಾಕ್ಷಿ ಮಾಲನ್ನು ಕದ್ದು ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಕೊಳವನಹಳ್ಳಿಯಲ್ಲಿನ ದೇವರಾಜ್ ಎಂಬುವವರ ತೋಟದಲ್ಲಿ 2 ಟನ್ ದ್ರಾ ಕಳೆದ ಜು.14ರಂದು ಕಳವಾಗಿತ್ತು. ರಾತ್ರಿ 10ರ ಬಳಿಕ ಲಗ್ಗೆ ಹಾಕಿದ್ದ ಆರೋಪಿಗಳು ಕಟಾವು ಮಾಡಿದ ದ್ರಾಯನ್ನು ಕತ್ತಲಿನಲ್ಲಿಯೇ ಹೆದ್ದಾರಿ ಸಮೀಪದಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಸಾಗಿಸಿದ್ದು, ಬಳಿಕ ಹೊರ ಭಾಗಕ್ಕೆ ತೆಗೆದುಕೊಂಡು ಹೋಗಿ ಮಾರಿದ್ದಾರೆ. ಆರೋಪಿಗಳು ದ್ರಾಕ್ಷಿ ಕಟ್ಟಿಂಗ್ ಕೆಲಸ ಮಾಡುತ್ತಿದ್ದರು. ಅಕ್ರಮ ಮಾರ್ಗದಲ್ಲಿ ಹಣ ಸಂಪಾದನೆಗಾಗಿ ಕಳವಿಗೆ ಯೋಜನೆ ರೂಪಿಸಿದ್ದಾರೆ. ಅದರಂತೆ ವ್ಯಾಪಾರಿಗಳ ಸೋಗಿನಲ್ಲಿ ತೋಟಕ್ಕೆ ಬಂದು ದ್ರಾ ಇಳುವರಿ ನೋಡಿಕೊಂಡು ಹೋಗಿದ್ದರು.
ನಂದಿಗಿರಿಧಾಮ ಠಾಣೆಗೆ ದೂರು ನೀಡಲಾಗಿತ್ತು. ಪ್ರಗತಿಪರ ರೈತರು, ವಿವಿಧ ಸಂಟನೆಗಳ ಮುಖಂಡರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆಗೆ ಮನವಿ ಸಲ್ಲಿಸಿ, ಕಳ್ಳರ ಬಂಧನಕ್ಕೆ ಒತ್ತಾಯಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತ್ವರಿತವಾಗಿ ಪ್ರಕರಣ ಭೇದಿಸಿದ್ದಾರೆ.