ಉಲುಚುಕಮ್ಮೆ ಬ್ರಾಹ್ಮಣ ಮಹಾಸಭೆ ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳಾ ಸಮಾವೇಶವನ್ನು ಮೇದಿನಿ ಗರುಡಾಚಾರ್ ಉದ್ಘಾಟಿಸಿದರು. ಜಿ.ಎನ್.ಲಕ್ಷ್ಮೀನಾರಾಯಣ ರಾವ್, ಬಿ.ವಿ. ಕುಮಾರ್ ಮತ್ತಿತರರಿದ್ದರು.  
ರಾಜ್ಯ

ಪ್ರಥಮ ಉಲುಚುಕಮ್ಮೆ ಮಹಿಳಾ ಸಮಾವೇಶ

ಉಲುಚುಕಮ್ಮೆ ಬ್ರಾಹ್ಮಣ ಮಹಾಸಭೆ ಆಯೋಜನೆ

ಬೆಂಗಳೂರು : ಉಲುಚುಕಮ್ಮೆ ಬ್ರಾಹ್ಮಣ ಮಹಾಸಭೆಯ ವತಿಯಿಂದ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳಾ ಸಮಾವೇಶವು ಭಾನುವಾರ ಮಹಾಸಭೆಯ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೇದಿನಿ ಗರುಡಾಚಾರ್ ಮಹಿಳೆಯರ ಪ್ರತಿಭೆ, ಸಾಧನೆ ಮತ್ತು ಸಂಘಟನಾ ಸಾಮರ್ಥ್ಯವನ್ನು ಗುರುತಿಸಲು ಇಂತಹ ಸಮಾವೇಶಗಳು ಉತ್ತಮ ವೇದಿಕೆಯಾಗಿವೆ ಎಂದರು.

ಮಹಾಸಭೆಯ ಗೌರವಾಧ್ಯಕ್ಷ ಜಿ.ಎನ್.ಲಕ್ಷ್ಮೀನಾರಾಯಣ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಬಿ.ವಿ. ಕುಮಾರ್ ಸಮುದಾಯದ ಹಿತದೃಷ್ಟಿಯಿಂದ ನಿರ್ಮಿಸಲು ಉದ್ದೇಶಿಸಿರುವ ಮಹಿಳಾ ಹಾಸ್ಟೆಲ್ ಯೋಜನೆಯ ರೂಪುರೇಷೆಗಳನ್ನು ವಿವರಿಸಿದರು. ವಿಶೇಷ ಆಹ್ವಾನಿತರಾಗಿ ಅಂಬಿಕಾ ರಾಮಚಂದ್ರ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ದಾರದ ಚಿತ್ರ ಕಲಾವಿದೆ ಹೇಮಾ ವಿನಾಯಕ ಪಾಟೀಲ್ ಪಾಲ್ಗೊಂಡಿದ್ದರು. ಹೇಮಾ ಪಾಟೀಲ್ ದಾರದಚಿತ್ರ ಕಲೆಯ ಮೂಲಕ ಶಾರದಾ ದೇವಿಯ ಸುಂದರ ಚಿತ್ರವನ್ನು ರಚಿಸಿ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಸಮುದಾಯದ ಸಾಧಕಿಯರಾದ ಡಾ. ಸುವರ್ಣ ಅಮರನಾಥ್, ಲಕ್ಷ್ಮೀ ಚಂದ್ರಶೇಖರ ಪ್ರಸಾದ್ ಹಾಗೂ ಲೀಲಾವತಿ ಸೀತಾರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ದಸರಾ ಬೊಂಬೆಗಳ ಪ್ರದರ್ಶನ, ಮಕ್ಕಳ ಚಿತ್ರಕಲಾ ಸ್ಪರ್ಧೆ ಹಾಗೂ ವಿವಿಧ ಜಿಲ್ಲೆ ಮತ್ತು ತಾಲ್ಲೂಕುಗಳ ಮಹಿಳೆಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕನ್ನಡ ರಾಜ್ಯೋತ್ಸವ, ದೀಪಾವಳಿ ದೀಪೋತ್ಸವ ಮತ್ತು ಮಕ್ಕಳ ದಿನಾಚರಣೆಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಸಮಾರಂಭದಲ್ಲಿ ಮಹಾಸಭೆಯ ಸದಸ್ಯರುಗಳಾದ ಮಂಗಳ ಕೆ. ಶ್ರೀವಿದ್ಯಾ ಸುರೇಶ್, ಪೂರ್ಣಿಮಾ ಹೊಸಕೋಟೆ ಮತ್ತಿತರರು ಉಪಸ್ಥಿತರಿದ್ದರು.