ಮುಧೋಳ ನಗರದ ವಿಶ್ವಗುರು ಪತ್ತಿನ ಸೌಹಾರ್ದ ಬ್ಯಾಂಕ್ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಅಶೋಕ ಪಟ್ಟಣಶೆಟ್ಟಿ, ಆನಂದ ಯಂಡಿಗೇರಿ, ಕಲ್ಲಪ್ಪ ಸಬರದ, ಮಹಾದೇವ ಅಂಗಡಿ, ಡಾ. ಕೆ.ಎಲ್. ಉದಪುಡಿ, ಬಸವರಾಜ ಜಮಖಂಡಿ ಇತರರಿದ್ದರು. 
ರಾಜ್ಯ

ಬಣಜಿಗ ಸಮುದಾಯದ ಸಂಘಟನೆಗೆ ಮೊದಲ ಆದ್ಯತೆ

ಬಸವರಾಜ ಭೂಷಣ್ಣವರ

ಪ್ರಮುಖ ಮುಖ್ಯಾಂಶಗಳು

  • ಮುಧೋಳ ತಾಲೂಕು ಅಧ್ಯಕ್ಷ ಅಶೋಕ ಪಟ್ಟಣಶೆಟ್ಟಿ ಅಭಿಮತ
  • ನೂತನ ಪದಾಧಿಕಾರಿಗಳಿಗೆ ಸನ್ಮಾನ

ಮುಧೋಳ: ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ವೇದಿಕೆ ಮೂಲಕ ಸಮಾಜಮುಖಿ ಸೇವೆಯನ್ನು ಇನ್ನಷ್ಟು ವ್ಯಾಪಕವಾಗಿ ವಿಸ್ತರಿಸಲಾಗುವುದು ಎಂದು ಸಂಘದ ತಾಲೂಕು ಅಧ್ಯಕ್ಷ ಅಶೋಕ ಪಟ್ಟಣಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ವಿಶ್ವಗುರು ಪತ್ತಿನ ಸೌಹಾರ್ದ ಬ್ಯಾಂಕ್ ಸಭಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸಮುದಾಯದ ಪ್ರತಿಯೊಬ್ಬ ಜನರ ಕಷ್ಟ-ಸುಖಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿ, ಅವರ ಕಣ್ಣೀರು ಒರೆಸುವ ಮೂಲಕ ನಿಜವಾದ ಜನೋಪಯೋಗಿ ಕೆಲಸಗಳನ್ನು ಮಾಡಲಾಗುವುದು ಎಂದರು.

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಶ್ರಮಿಸುವುದೇ ನಮ್ಮ ಪ್ರಮುಖ ಗುರಿ ಎಂದು ಪ್ರತಿಪಾದಿಸಿದರು.

ಆನಂದ ಯಂಡಿಗೇರಿ, ಕಲ್ಲಪ್ಪ ಸಬರದ, ಮಹಾದೇವ ಅಂಗಡಿ, ಶಿವಾನಂದ ಉದಪುಡಿ, ಡಾ. ಕೆ.ಎಲ್. ಉದಪುಡಿ, ಬಸವರಾಜ ಜಮಖಂಡಿ, ರವಿ ಕೋಲಾರ, ಶ್ರೀಶೈಲ ಪಸಾರ, ಜಿಲ್ಲಾಧ್ಯಕ್ಷ ಹೊಳೆಬಸು ಬಾಳಶೆಟ್ಟಿ, ಬಸವರಾಜ ಬಳ್ಳಾರಿ, ಗೋಲಪ್ಪ ಗೋಲಶೆಟ್ಟಿ, ಪ್ರಕಾಶ ಸಬರದ, ಮಲ್ಲಿಕಾರ್ಜುನ ಬಟಕುರ್ಕಿ, ಸುರೇಶ ಅಕ್ಕಿಮರಡಿ ಇತರರಿದ್ದರು.