Fire safety awareness for summer camp children 
ರಾಜ್ಯ

ಬೇಸಿಗೆ ಶಿಬಿರದ ಮಕ್ಕಳಿಗೆ ಅಗ್ನಿ ಸುರಕ್ಷತೆ ಅರಿವು

ಚಿಂತಾಮಣಿ: ನಗರದ ಕೆ.ಆರ್​.ಬಡಾವಣೆಯ ಪತಂಜಲಿ ಯೋಗ ಶಿಕ್ಷಣ ಸಮಿತಿ ಚಿಂತಾಮಣಿ ಶಾಖೆಯಿಂದ ಆಯೋಜಿಸಿದ್ದ ಮಕ್ಕಳ ವಸಂತ ಶಿಬಿರದಲ್ಲಿ ತಾಲೂಕು ಅಗ್ನಿಶಾಮಕ ದಳದಿಂದ ಅಗ್ನಿ ಅವಡಗಳ ತಡೆ, ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅರಿವು ಕಾರ್ಯಕ್ರಮ ನಡೆಯಿತು.
ಅಗ್ನಿಶಾಮಕದ ದಳದ ಅಧಿಕಾರಿ ಲೋಕೇಶ್​ರೆಡ್ಡಿ ಮಾತನಾಡಿ, ಬೆಂಕಿ ಅವಡ ಸಂಭವಿಸಿದಾಗ ಗಾಬರಿಯಾಗದೆ ಹೇಗೆ ಪರಿಸ್ಥಿತಿ ನಿಭಾಯಿಸಬೇಕು ಎಂಬುದನ್ನು ಮಕ್ಕಳಿಗೆ ವಿವರಿಸಿದರು. ಅಗ್ನಿಶಾಮಕ ವಾಹನದಲ್ಲಿರುವ ಹೈಡ್ರೆಂಟ್​, ಪಂಪ್​, ವಿವಿಧ ಆಕ್ಸಿಜನ್​ ಮಾಸ್ಕ್​ಗಳ ಕಾರ್ಯವೈಖರಿಯನ್ನು ಮಕ್ಕಳಿಗೆ ತೋರಿಸಲಾಯಿತು.
ಗ್ಯಾಸ್​ ಸೋರಿಕೆ, ವಿದ್ಯುತ್​ ಶಾರ್ಟ್​ ಸಕ್ಯೂರ್ಟ್​, ಮನೆಗಳಲ್ಲಿ ಉಂಟಾಗುವ ಸಣ್ಣಪುಟ್ಟ ಬೆಂಕಿ ಅನಾಹುತಗಳನ್ನು ಆರಿಸುವ ವಿಧಾನ ಪ್ರಾಯೋಗಿಕವಾಗಿ ಪ್ರದರ್ಶಿಸಲಾಯಿತು. ಶಿಬಿರಾರ್ಥಿಗಳು ಅಗ್ನಿ ಶಾಮಕ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಬೆಂಕಿ ಆರಿಸುವ ಕೊಳವೆಗಳನ್ನು ಹಿಡಿದು ನೀರಿನ ಸಿಂಪಡಣೆ ಮಾಡುವ ಪ್ರಕ್ರಿಯೆ ಕಂಡು ಮಕ್ಕಳು ಸಂಭ್ರಮಿಸಿದರು.
ಅಗ್ನಿಶಾಮಕ ದಳದ ಮುಖ್ಯಾಧಿಕಾರಿ ಲೋಕೇಶ್​ರೆಡ್ಡಿ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿಯೇ ಇಂತಹ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ನೀಡುವುದರಿಂದ ಭವಿಷ್ಯದಲ್ಲಿ ದೊಡ್ಡ ಅನಾಹುತಗಳನ್ನು ತಪ್ಪಿಸಬಹುದು. ವಸಂತ ಶಿಬಿರಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾನೀಯ ಎಂದರು.
ಸಮಿತಿ ಚಿಂತಾಮಣಿ ಶಾಖೆ ಗೌರವಾಧ್ಯಕ್ಷ ನಾರಾಯಣಪ್ಪ ಮಾತನಾಡಿ, ಪ್ರತಿವರ್ಷ ಬೇಸಿಗೆಯಲ್ಲಿ ಮಕ್ಕಳ ಯೋಗ ಶಿಬಿರದ ಜತೆಗೆ ವಿವಿಧ ಸ್ಪರ್ಧೆಗಳು, ವಿವಿಧ ಕ್ರೀಡೆಗಳು, ಬೆಟ್ಟಕ್ಕೆ ಚಾರಣ, ಅಗ್ನಿ ಅವಡದ ಅರಿವು ಮೂಡಿಸುವುದು ಸೇರಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಪ್ರತಿವರ್ಷ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು.