ತೆರಕಣಾಂಬಿಹುಂಡಿ ಗ್ರಾಮದ ರೈತ ಮಹಾಲಿಂಗಯ್ಯ ಅವರ ಕಬ್ಬು ಬೆಂಕಿಗಾಹುತಿಯಾಗಿರುವುದು. 
ರಾಜ್ಯ

ಬೆಂಕಿಗಾಹುತಿಯಾದ ಕಬ್ಬಿನ ಬೆಳೆ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ತೆರಕಣಾಂಬಿಹುಂಡಿ ಗ್ರಾಮ
  • ಬೆಂಕಿಗೆ ಕಬ್ಬಿನ ಬೆಳೆ ಭಸ್ಮ

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿಹುಂಡಿ ಗ್ರಾಮದಲ್ಲಿ ಬೆಂಕಿಗೆ ಕಬ್ಬಿನ ಬೆಳೆ ಭಸ್ಮವಾಗಿದೆ.

ಗ್ರಾಮದ ಮಹಾಲಿಂಗಯ್ಯ 3 ಎಕರೆಯಲ್ಲಿ ಕಬ್ಬು ಬೆಳೆದಿದ್ದರು. ದುಷ್ಕರ್ಮಿಗಳು ಕಬ್ಬಿಗೆ ಬೆಂಕಿಯಿಟ್ಟ ಪರಿಣಾಮ ಭಾರಿ ಹೊಗೆ ಕಾಣಿಸಿಕೊಂಡಿದ್ದು, ಕೂಡಲೇ ಅಕ್ಕಪಕ್ಕದ ಜಮೀನುಗಳ ರೈತರು ಬೆಂಕಿ ಹರಡದಂತೆ ನೀರು ಹಾಕಿದರು. ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಭಾರಿ ಅನಾಹುತ ತಪ್ಪಿಸಿದ್ದಾರೆ.