ಶಾದಿಪುರ ಬಳಿಯ ಚಂದುನಾಯಕ ತಾಂಡಾದಲ್ಲಿ ಹೋರಾಟಗಾರರ ಪೆಂಡಾಲ್ ಸುಟ್ಟು ಹಾಕಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕನ್ನಡಪರ ಸಂಟನೆಗಳು ಕಾರ್ಯಕರ್ತರು ಕುಂಚಾವರಂ ಠಾಣೆಗೆ ದೂರು ಸಲ್ಲಿಸಿದರು. ಲಿಂಬಾಜಿ ಚವ್ಹಾಣ, ಶಂಕರ ಚವ್ಹಾಣ್, ಪ್ರೇಮಸಿಂಗ್ ರಾಠೋಡ್ ಇತರರಿದ್ದರು.
- ಚಂದುನಾಯಕ ತಾಂಡಾದಲ್ಲಿ ಪ್ರತಿಭಟನೆ ಹತ್ತಿಕ್ಕಲು ಯತ್ನ
- ಗಡಿಯಲ್ಲಿ ಉದ್ವಿಗ್ನ ವಾತಾವರಣ
ಚಿಂಚೋಳಿ: ಕರ್ನಾಟಕ& ತೆಲಂಗಾಣ ಗಡಿ ಭಾಗದ ಶಾದಿಪುರ ಬಳಿಯ ಚಂದುನಾಯಕ ತಾಂಡಾದಲ್ಲಿ ಫಲಾನುಭವಿಗಳು ತಮ್ಮ ಭೂಮಿ ಪಡೆಯುವುದಕ್ಕಾಗಿ ನಡೆಸುತ್ತಿರುವ ಹೋರಾಟ ಹತ್ತಿಕ್ಕಲು ಕಿಡಿಗೇಡಿಗಳು ಪ್ರತಿಭಟನಾ ಟೆಂಟ್ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.
ಸರ್ವೇ ನಂ.126ರಲ್ಲಿ ಸುಮಾರು 59 ಫಲಾನುಭವಿಗಳಿಗೆ ಸರ್ಕಾರ ನೀಡಿದ ಭೂಮಿಯನ್ನು ಬಡವರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಶಾದಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚಂದುನಾಯಕ ತಾಂಡಾದಲ್ಲಿ ಅರ್ನಿದಿಷ್ಟಾವಧಿ ಹೋರಾಟ ನಡೆಸಲಾಗುತ್ತಿದೆ. ಶನಿವಾರ ರಾತ್ರಿ ಮಳೆ ಬಂದಿದ್ದರಿಂದ ಹೋರಾಟಗಾರರು ಬೇರೆಡೆ ಹೋಗಿದ್ದು, ಇದೇ ವೇಳೆ ಹೋರಾಟ ಸಹಿಸದ ಕೆಲವರು ಹಾಗೂ ನೆರೆಯ ತೆಲಂಗಾಣದ ಓಮ್ಲನಾಯಕ, ರಾಮಸಿಂಗ್ ನಾಯಕ ತಾಂಡಾದ ಕಿಡಿಗೇಡಿಗಳು ಪೆಂಡಾಲ್ಗೆ ಬೆಂಕಿ ಹಚ್ಚಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಇದರಿಂದ ಗಡಿ ವಲಯದಲ್ಲಿ ತೀವ್ರ ಆಕ್ರೋಶ ಹಾಗೂ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಭಾನುವಾರ ಬೆಳಗ್ಗೆ ಕನ್ನಡಪರ ಹೋರಾಟಗಾರರು ಮತ್ತು ಸ್ಥಳಿಯ ರೈತರು ಕುಂಚಾವರಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಟನಾ ಸ್ಥಳಕ್ಕೆ ಪಿಎಸ್ಐ ವೆಂಕಟೇಶ ನಾಯಕ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೋರಾಟಗಾರರಿಗೆ ಸೂಕ್ತ ಬಂದೋ ಬಸ್ತ್ ಕಲ್ಪಿಸಿದ್ದಾರೆ.
ಲಿಂಬಾಜಿ ಚವ್ಹಾಣ, ಶಂಕರ ಚವ್ಹಾಣ್, ಪ್ರೇಮಸಿಂಗ್ ರಾಠೋಡ್, ವೆಂಕಟೇಶ, ಶಂಕ್ರಯ್ಯ, ಪ್ರಕಾಶ, ಮನಿಬಾಯಿ, ಕಮಲಾಬಾಯಿ, ರುಕ್ಕಿಬಾಯಿ, ಮುನ್ನು, ಗೋಪಿಬಾಯಿ ಇತರರಿದ್ದರು.
"
ನಮ್ಮ ಭೂಮಿ ಪಡೆಯುವುದಕ್ಕಾಗಿ ನ್ಯಾಯಸಮ್ಮತ ಹೋರಾಟ ನಡೆಸುತ್ತಿದ್ದೇವೆ. ಬೆಂಕಿ ಹಚ್ಚುವ, ಬೆದರಿಸುವ ತಂತ್ರಗಳಿಗೆ ಹೆದರುವುದಿಲ್ಲ. ನಮ್ಮ ಪೆಂಡಾಲ್ ಸುಟ್ಟಿರಬಹುದು, ಆದರೆ ಹೋರಾಟದ ಕಿಚ್ಚು ಹೆಚ್ಚಿಸಿದ್ದಾರೆ. ಪೊಲೀಸರು ತಣ ತಪ್ಪಿತಸ್ಥರನ್ನು ಬಂಧಿಸದಿದ್ದರೆ ಗಡಿಭಾಗದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ.
— > ಲಿಂಬಾಜಿ ಚವ್ಹಾಣ, ತಾಲೂಕು ಅಧ್ಯ, ಕರ್ನಾಟಕ ರಣಾ ವೇದಿಕೆ ಸ್ವಾಭಿಮಾನಿ ಸೇನೆ