ಸವದತ್ತಿ ಪಟ್ಟಣದ ಪಟ್ಟದಕಲ್ಲ ಓಣಿಯಲ್ಲಿ ಬೆಂಕಿ ಅವಡದಿಂದ ಮನೆ ಹಾನಿಗೊಳಗಾದ ಕೀರಪ್ಪ ಬೆನಕಟ್ಟಿ ನಿವಾಸಕ್ಕೆ ಶಾಸಕ ವಿಶ್ವಾಸ ವೈದ್ಯ ಭೇಟಿ ನೀಡಿ ಸಾಂತ್ವನ ಹೇಳಿದರು. ಗದಿಗೆಪ್ಪ ಕುರಿ, ಮೈಲಾರಿ ಹೊಸಮನಿ ಇತರರಿದ್ದರು. 
ರಾಜ್ಯ

ಬೆಂಕಿ ಅವಘಡ ಪೀಡಿತರಿಗೆ ವೈದ್ಯ ನೆರವು

ಸವದತ್ತಿ: ಪಟ್ಟಣದ ಪಟ್ಟದಕಲ್ಲ ಓಣಿಯಲ್ಲಿ ಬೆಂಕಿ ಅವಡದಿಂದ ಮನೆ ಹಾನಿಗೊಳಗಾದ ಕೀರಪ್ಪ ಬೆನಕಟ್ಟಿ ಅವರ ನಿವಾಸಕ್ಕೆ ಶಾಸಕ ವಿಶ್ವಾಸ ವೈದ್ಯ ಭೇಟಿ ನೀಡಿ ಸಹಾಯಧನ ವಿತರಿಸಿದರು. ಬೆಂಕಿ ಅವಡದಿಂದ ಸಂಭವಿಸಿದ ನಷ್ಟದ ಕುರಿತು ಕುಟುಂಬಸ್ಥರಿಂದ ಮಾಹಿತಿ ಪಡೆದ ಶಾಸಕ ವಿಶ್ವಾಸ ವೈದ್ಯ, ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ನೆಲೆಯಲ್ಲಿ ನೆರವು ಒದಗಿಸಿದರು. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಸರ್ಕಾರದ ಮಟ್ಟದಲ್ಲಿ ಅಗತ್ಯ ಪರಿಹಾರ ಶ್ರೀ ಒದಗಿಸುವಂತೆ ಸೂಚನೆ ನೀಡಿದರು. ಗದಿಗೆಪ್ಪ ಕುರಿ, ಮೈಲಾರಿ ಹೊಸಮನಿ, ಸಿದ್ಪಪ್ಪ ಕಾಳಗಿ, ಬಸು ಪಿರಜನವರ, ನೀಲಪ್ಪ ಅಣ್ಣಿಗೇರಿ ಸಂತೋಷ ನೊರೆಯವರ ಇತರರಿದ್ದರು.