ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗೆ ಬೆಂಕಿ Fire breaks
ಮುಳಬಾಗಿಲು: ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಗುರುವಾರ ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಬೈಕ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ನಗರದ ಜೈಭೀಮ್ ಬುದ್ದ ನಗರದ ನಿವಾಸಿ ಹಾಗೂ ಮಾಜಿ ಗೃಹರಕ್ಷಕ ದಳ ಸಿಬ್ಬಂದಿ ಸುಬ್ರಮಣಿ ಅವರು ಎಂದಿನಂತೆ ಬೈಕ್ಅನ್ನು ಮನೆಯ ಮುಂದಿನ ಗೇಟ್ನಲ್ಲಿ ನಿಲ್ಲಿಸಿ ಮಲಗಿದ್ದಾಗ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಮಧ್ಯರಾತ್ರಿಯಲ್ಲಿ ಹಚ್ಚಿದ ಬೆಂಕಿಗೆ ವಾಹನ ಸುಟ್ಟು ಬೆಂಕಿಯ ಕೆನ್ನಾಲಿಗೆಯ ಬಿಸಿ ಮನೆಯವರಿಗೆ ತಟ್ಟಿದಾಗ ಎಚ್ಚರವಾಗಿ ನೋಡಿದರೆ ವಾಹನ ಸಂಪೂರ್ಣ ಭಸ್ಮವಾಗಿತ್ತು. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.