Fines for bikers not wearing helmets
ಚಿಂತಾಮಣಿ: ಹೆಲ್ಮೆಟ್ ಬಳಸದೇ ಚಾಲನೆ ಮಾಡುತ್ತಿದ್ದ ಬೈಕ್ ಸವಾರರಿಗೆ ಚಿಂತಾಮಣಿ ಪೋಲಿಸರು ದಂಡದ ಬಿಸಿ ಮುಟ್ಟಿಸಿದ್ದಾರೆ.
ಹೆಲ್ಮೆಟ್ ಧರಿಸಿ ವಾಹನ ಓಡಿಸಲು ಕಳೆದ ಡಿಸೆಂಬರ್ನಲ್ಲಿ ಗಡವು ನಿಗದಿಪಡಿಸಲಾಗಿತ್ತು. ಗಡುವ ಮುಗಿದು, ಹಲವಾರು ಬಾರಿ ದಂಡ ವಿಧಿಸಿದರು ಜನ ಎಚ್ಚೆತ್ತುಕೊಳ್ಳದ ಕಾರಣ ನಗರ ಠಾಣೆ ಪೊಲೀಸರು ಸೋಮವಾರ ರಸ್ತೆಗಿಳಿದು ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ದಂಡ ವಿಧಿಸಿದರು.
ಚಿಂತಾಮಣಿ ನಗರ ಪೊಲೀಸರು ಠಾಣೆ ಸಮೀಪದ ಅಂಜನಿ ಬಡಾವಣೆಯ ಪ್ರವೇಶದ ವೃತ್ತದಲ್ಲಿ ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ 500 ರೂ. ದಂಡ ವಿಧಿಸಿದ್ದಾರೆ. ಇದುವರೆಗೂ ನಗರ ಸೇರಿ ತಾಲೂಕಿನ ಎಲ್ಲ ಠಾಣೆಗಳಿಂದ ಲಕ್ಷಾಂತರ ರೂಪಾಯಿಗೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.
ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ 1,000 ದಂಡ ವಿಧಿಸಲಾಗುತ್ತದೆ ಮತ್ತು ಡೆವಿಂಗ್ ಲೈಸೆನ್ಸ್ 3 ತಿಂಗಳವರೆಗೆ ಅಮಾನತುಗೊಳ್ಳಬಹುದು. ಜತೆಗೆ ಅರ್ಧ ಹೆಲ್ಮೆಟ್ಗೂ ದಂಡವಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ಇದರ ಕಟ್ಟುನಿಟ್ಟಿನ ಜಾರಿ ಆರಂಭವಾಗಿದ್ದು, ಪೆಟ್ರೋಲ್ ಬಂಕ್ಗಳಲ್ಲಿಯೂ ಹೆಲ್ಮೆಟ್ ಧರಿಸದೆ ಇರುವವರಿಗೆ ಪೆಟ್ರೋಲ್ ಹಾಕದಂತೆ ಸೂಚಿಸುವ ಮೂಲಕ ಹೆಲ್ಮೆಟ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕ ವಲಯದಲ್ಲಿ ಪೊಲೀಸರ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ.