Fine for littering anywhere
ಶಿರಾ : ನಗರಾದ್ಯಂತ ಬ್ಲಾ$್ಯಕ್ ಸ್ಪಾಟ್ಗಳನ್ನು ಗುರುತಿಸಿ ಸ್ವಚ್ಛವಾಗಿ ಪರಿವರ್ತಿವುದೇ ನಮ್ಮ ಉದ್ದೇಶವಾಗಿದೆ ಎಂದು ಶಿರಾ ನಗರಸಭೆ ಆಯುಕ್ತ ರುದ್ರೇಶ್ ತಿಳಿಸಿದರು.
ಜ್ಯೋತಿನಗರದ ನಾಲ್ಕನೇ ವಾರ್ಡ್ನಲ್ಲಿ ಬ್ಲಾ$್ಯಕ್ ಸ್ಪಾಟ್ ಅನ್ನು ಕ್ಲೀನ್ ಸ್ಪಾಟ್ ಆಗಿ ಪರಿವರ್ತಿಸಿರುವ ಜಾಗವನ್ನು ಗುರುವಾರ ವೀಕ್ಷಿಸಿದ ನಂತರ ಮಾತನಾಡಿ, ಖಾಲಿ ಜಾಗದಲ್ಲಿ ಸಾರ್ವಜನಿಕರು ದಿನನಿತ್ಯದ ತ್ಯಾಜ್ಯವನ್ನು ಹಾಕುವುದರಿಂದ ನಗರದ ಅಂದ ಕೆಡುವುದರ ಜತೆಗೆ ರಸ್ತೆಯಲ್ಲಿ ಸಂಚರಿಸುವರು ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ಉಂಟಾಗಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಚೆಲ್ಲುವುದರ ಬದಲು ಮನೆ ಬಾಗಿಲಿಗೆ ಬರುವ ಕಸದ ವಾಹನಗಳಿಗೆ ಹಾಕಿ ನಗರದ ನೈರ್ಮಲ್ಯ ಕಾಪಾಡಲು ಸಹಕರಿಸಬೇಕೆಂದು ಮನವಿ ಮಾಡಿದರು.
ಇಲ್ಲಿ ಹಲವು ವರ್ಷಗಳಿಂದ ವಾರ್ಡ್ ನಿವಾಸಿಗಳು ತ್ಯಾಜ್ಯವನ್ನು ಹಾಕುತ್ತಿರುವುದರಿಂದ ದುರ್ವಾಸನೆ ಹಾಗೂ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿತ್ತು. ಈ ಬಗ್ಗೆ ವಾರ್ಡ್ನ ನಿವಾಸಿಗಳು ಸಾಕಷ್ಟು ದೂರು ನೀಡಿದ್ದರು. ಪೌರಕಾರ್ಮಿಕರು ಕಸದ ರಾಶಿಯನ್ನು ತೆಗೆದು, ಫುಟ್ಬಾಲ್ ಆಟದ ಮೈದಾನ ಹಾಗೂ ಸಾರ್ವಜನಿಕರು ಸಂಜೆ ಹಾಗೂ ಬೆಳಗ್ಗೆ ಕುಳಿತುಕೊಳ್ಳಲು ಉತ್ತಮ ಪರಿಸರ ಸೃಷ್ಟಿ ಮಾಡಿದ್ದಾರೆ. ಕಸ ಹಾಕಿದರೆ ಅಂತವರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ನಗರದ ಯಾವುದೇ ಭಾಗದಲ್ಲಾದರೂ ಇಂತಹ ಬ್ಲಾ$್ಯಕ್ ಸ್ಪಾಟ್ ಕಂಡುಬಂದಲ್ಲಿ ಸಾರ್ವಜನಿಕರು ನಗರಸಭೆ ಗಮನಕ್ಕೆ ತಂದರೆ ಆ ಜಾಗವನ್ನು ಸ್ವಚ್ಛಗೊಳಿಸಲಾಗುವುದು ಎಂದರು.