Find a solution to the water problem
ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಪರಿಹಾರ ಕಂಡುಕೊಳ್ಳುವಂತೆ ಪುರಸಭೆ ಆಡಳಿತಾಧಿಕಾರಿಯೂ ಆದ ತಿಪಟೂರು ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆಯ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಪಟ್ಟಣದಲ್ಲಿ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಬೋರ್ವೆಲ್ ಕೊರೆಯಲು ಆದೇಶ ನೀಡಿದ್ದರೂ ಕ್ರಮಕೈಗೊಂಡಿಲ್ಲ. 13 ಬೋರ್ವೆಲ್ಗಳಿಗೆ ಪೈಪ್ ಬಿಡಲು ಪಟ್ಟಿ ಸಿದ್ಧಮಾಡಿದ್ದೀರಿ, ಇವು ಎಷ್ಟು ನೀರಿನ ಮಟ್ಟ ಇದೆ ಹಾಗೂ ಇದರ ಸುಸ್ಥಿತಿಯಲ್ಲಿವಿಯೇ ಎಂಬುದರ ಬಗ್ಗೆ ಸಂಬಂಧಪಟ್ಟ ಭೂವಿಜ್ಞಾನಿಯಿಂದ ಮಾಹಿತಿ ಪಡೆದಿಲ್ಲ ಎಂದು ಕಿಡಿಕಾರಿದರು.
ನಾಗರಿಕರಿಂದ ನೀರಿನ ಸಮಸ್ಯೆ ಬಗ್ಗೆ ದೂರುಗಳು ಕೇಳಿಬರುತ್ತಿದೆ. ಇಂಜಿನಿಯರ್ ಹಾಗೂ ಮುಖ್ಯಾಧಿಕಾರಿ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು. ಅಲ್ಲದೇ ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಜನರ ಸಮಸ್ಯೆಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು. ಮುಖ್ಯಾಧಿಕಾರಿ ಮಂಜಮ್ಮ ಮಾತನಾಡಿ, ಕುಡಿಯುವ ನೀರಿನ ಬಗ್ಗೆ ಇಂಜಿನಿಯರ್ಗೆ ಸೂಚನೆ ನೀಡಿದ್ದು, ನೀರಿನ ಅಭಾವ ಹೆಚ್ಚಾಗಿರುವ ವಾರ್ಡ್ಗಳಿಗೆ ಪುರಸಭೆಯ ಟ್ಯಾಂಕರ್ ಮೂಲಕ ಹಾಗೂ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು ಎಂದರು.