ಬಂಗಾರಪೇಟೆ ಕಾಂಗ್ರೆಸ್​ ಕಚೇರಿಯಲ್ಲಿ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಮಾತನಾಡಿದರು. ಗ್ಯಾರಂಟಿ ಸಮಿತಿ ಅಧ್ಯಕ್ಷ ಪಾರ್ಥಸಾರಥಿ, ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮುನಿರಾಜು, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಶ್ರೀನಿವಾಸ್​, ಬೂದಿಕೋಟೆ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ನಾಗರಾಜ್​, ನಗರ ಬ್ಲಾಕ್​ ಅಧ್ಯಕ್ಷ ಚಂದು ಕುಮಾರ್​, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ರಘುನಾಥ್​ ಇದ್ದರು. 
ರಾಜ್ಯ

ಭಾರತ್​ ಜೋಡೋ ಯುವ ಸಂಘಕ್ಕೆ 10 ಲಕ್ಷ ಆರ್ಥಿಕ ನೆರವು

ಕೋಲಾರ ಡೆಸ್ಕ್
ಬಂಗಾರಪೇಟೆ :ಗ್ರಾಮ ಮಟ್ಟದಲ್ಲಿ ಸಾಮಾಜಿಕ ಸಾಮರಸ್ಯ, ಸಹೋದರತ್ವ, ಸಂಘಟನಾತ್ಮಕ ಶಕ್ತಿ ಬಲಪಡಿಸಲು ಭಾರತ್​ ಜೋಡೋ ಸಂಘಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಹೇಳಿದರು.
ಕಾಂಗ್ರೆಸ್​ ಕಚೇರಿಯಲ್ಲಿ ನಡೆದ ಭಾರತ್​ ಜೋಡೋ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ಗ್ರಾಪಂ ಮಟ್ಟದಿಂದ ಸಂಘಟನೆ ಬಲಪಡಿಸಬೇಕು ಎಂದರು.
ಪ್ರತಿ ಭಾರತ್​ ಜೋಡೋ ಯುವ ಸಂಘಕ್ಕೆ 10 ಲಕ್ಷ ಆರ್ಥಿಕ ನೆರವು ನೀಡಲಾಗುವುದು. ಸಂಘಗಳು ಕ್ರೀಡೆ, ಸಾಂಸತಿಕ ಕಾರ್ಯಕ್ರಮಗಳ ಜತೆಗೆ ಯುವಜನರಲ್ಲಿ ರಾಷ್ಟ್ರೀಯ ದಿನಗಳ ಮಹತ್ವದ ಕುರಿತು ಜಾಗೃತಿ ಮೂಡಿಸಲಿವೆ.
ತಾಲೂಕಿನಲ್ಲಿ ಸೆ.5ರಂದು ಪ್ರಜಾ ಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ತಮ್ಮ ಸರ್ಕಾರಿ ಕೆಲಸಗಳ ವಿಳಂಬ ಹಾಗೂ ಸಮಸ್ಯೆಗಳ ಕುರಿತು ನೇರವಾಗಿ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು ಎಂದರು.