ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಸ್ಐಆರ್ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ಬುಧವಾರ ಸಭೆ ನಡೆಸಿದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಐಎಎಸ್ ಪ್ರೊಬೇಷನರ್ ಅಧಿಕಾರಿ ಶಿಖರ್ ಮೋಘಾ ಇದ್ದರು.
- ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ
- ರಾಜಕಿಯ ಪಕ್ಷಗಳೊಂದಿಗೆ ಡಿಸಿ ಮಾಹಿತಿ ವಿನಿಮಯ
ಕಲಬುರಗಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 01-10-2026 ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಈ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಜುಲೈ 29ರವರೆಗೆ ಬಿಎಲ್ಓಗಳು ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಿಸಿ, ಸಂಗ್ರಹಣೆ ಮಾಡಿ, ಮೊಬೈಲ್ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಲಿದ್ದಾರೆ. ಈ ಅವಧಿಯಲ್ಲಿ ಮತಗಟ್ಟೆಗಳ ರ್ಯಾಷ್ನಲೈಜೇಶನ್ ಕಾರ್ಯವೂ ನಡೆಯಲಿದೆ. ಒಟ್ಟಾರೆ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಬುಧವಾರ ಸಭೆ ನಡೆಸಿ ಪ್ರಸ್ತುತ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಸೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪ್ರಗತಿಯ ಮಾಹಿತಿ ಹಂಚಿಕೊಂಡರು.
ಆಗಸ್ಟ್ 5ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟಿಸಿ ಸೆಪ್ಟೆಂಬರ್ 4ರವರೆಗೆ ಆೇಪಣೆ ಆಹ್ವಾನಿಸಿ ಅಕ್ಟೋಬರ್ 3ರೊಳಗೆ ಆೇಪಣೆ ವಿಲೇವಾರಿ ಮಾಡಿ, ಅಕ್ಟೋಬರ್ 7ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ವಿವರಿಸಿದರು.
ಜಿಲ್ಲೆಯಾದ್ಯಂತ ಈವರೆಗೆ ಬಿಎಲ್ಓಗಳು ಮನೆ&ಮನೆಗೆ ಹೋಗಿ ಒಟ್ಟು 23,71,542 ಮತದಾರರ ಪೈಕಿ 23,35,062 (ಶೇ.98.46) ರಷ್ಟು ಗಣತಿ ನಮೂನೆ ವಿತರಣೆ ಮಾಡಿದ್ದಾರೆ. ಜತೆಗೆ 6,86,812 (ಶೇ.28.96) ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆ ಪಡೆದು ಮೊಬೈಲ್ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಿದ್ದಾರೆ. ಇನ್ನು 5,585 (ಶೇ.0.24) ಮತದಾರರು ಸ್ವಯಂ ಪ್ರೇರಿತವಾಗಿ ಆನ್ ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಿದ್ದಾರೆ. ಬಿಎಲ್ಓಗಳು ಮನೆ&ಮನೆ ಭೇಟಿ ನೀಡಿದಾಗ ಈವರೆಗೆ 6,156 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಮತ್ತು 6,924 ಜನ ಮತದಾರರು ನಿಧನ ಹೊಂದಿರುವ ಬಗ್ಗೆ ವರದಿಯಾಗಿದೆ ಎಂದು ರಾಜಕೀಯ ಪಕ್ಷಗಳ ಗಮನಕ್ಕೆ ತಂದರು.
ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಐಎಎಸ್ಪ್ರೊಬೇಷನರ್ ಅಧಿಕಾರಿ ಶಿಖರ್ ಮೋಘಾ ಇತರರಿದ್ದರು.
"
ಎಸ್ಐಆರ್ ಕಾರ್ಯ ಸುಗಮವಾಗಿ ನಡೆಯಲು ಜಿಲ್ಲೆಯ ಎಲ್ಲ 2400 ಮತಗಟ್ಟೆಗಳಿಗೆ ಬಿಎಲ್ಓ ನೇಮಿಸಿದ್ದು, ಮತದಾರರ ನೆರವಿಗೆ 2,400 ವೋಟರ್ ಫೆಸಿಲಿಟೇಶನ್ ಸೆಂಟರ್ ಮತ್ತು ಬಿಎಲ್ಓಗಳ ಸಹಾಯಕ್ಕೆ 283 ಫೆಸಿಲಿಟೇಶನ್ ಸೆಂಟರ್ ಸ್ಥಾಪಿಸಲಾಗಿದೆ. ಈ ಕಾರ್ಯ ನಿಖರ, ದೋಷರಹಿತ ಮತ್ತು ಪಾರದರ್ಶಕವಾಗಿ ತಯಾರಿಸಲು ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಸಹಕಾರ ನೀಡಬೇಕು.
— ಇಕ್ರಮ್ ಶರೀಫ್, ಜಿಲ್ಲಾ ಚುನಾವಣಾಧಿಕಾರಿ, ಕಲಬುರಗಿ.