ಸರ್ಕಾರಿ ಜಾಗಗಳ ಭೂ ಕಬಳಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದೊಡ್ಡಬಳ್ಳಾಪುರದ ಕನ್ನಡಿಗರ ಕರವೇ ಮುಖಂಡರು ಡಿವೈಎಸ್ಪಿ ಪಾಂಡುರಂಗ ಅವರಿಗೆ ಮನವಿ ಸಲ್ಲಿಸಿದರು. ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಯೇಗೌಡ, ಕಾರ್ಯಾಧ್ಯಕ್ಷ ಪ್ರದಿಪ್ ಕುಮಾರ್, ಯುವ ಘಟಕದ ಅಧ್ಯಕ್ಷ ರಂಜಿತ್ ಗೌಡ ಇತರರು ಇದ್ದರು.
ದೊಡ್ಡಬಳ್ಳಾಪುರ : ತಾಲೂಕಿನ ವಿವಿಧೆಡೆ ಸರ್ಕಾರಿ ಜಾಗ ಕಬಳಿಸುತ್ತಿರುವವರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಸರ್ಕಾರಿ ಅಧಿಕಾರಿಗಳ ರ್ನಿಲಕ್ಷ$್ಯ ಖಂಡಿಸಿ ಆ.15ರಂದು ಸ್ವಾತಂತ್ರೊ$್ಯತ್ಸವದಲ್ಲಿ ಕಪ್ಪು ಪಟ್ಟಿ ಧರಿಸಿ ಹೋರಾಟ ನಡೆಸಲಾಗುವುದು ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಎಚ್ಚರಿಸಿದ್ದಾರೆ.
ಡಿವೈಎಸ್ಪಿ ಪಾಂಡುರಂಗ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದವೇದಿಕೆ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್, ಕರ್ನಾಟಕ ರಕ್ಷಣಾ ವೇದಿಕೆಯು ಭೂಗಳ್ಳರಿಂದ ಸರ್ಕಾರಿ ಜಾಗ ಕಬಳಿಕೆ ತಡೆಯುವ ಪ್ರಯತ್ನ ಮಾಡುತ್ತಲೇ ಬಂದಿದೆ. ಆದರೆ, ಈ ಪ್ರಯತ್ನಕ್ಕೆ ಸರ್ಕಾರಿ ಅಧಿಕಾರಿಗಳ ರ್ನಿಲಕ್ಷ$್ಯ ಎದ್ದುಕಾಣುತ್ತಿದೆ ಎಂದು ದೂರಿದರು.
ತಾಲೂಕಿನ ಕಸಬಾ ಹೋಬಳಿಯ ಗಂಗಾಧರಪುರದ ಸರ್ವೇ ನಂ. 17ರ ಸರ್ಕಾರಿ ಕುಂಟೆ 2-04 ಎ/ಗುಂ ಜಾಗವನ್ನು ಕುಂಟೆಯಾಗಿಯೇ ಉಳಿಸಬೇಕು. ಕಸಬಾ ಹೋಬಳಿಯ ಅರೇಹಳ್ಳಿಗುಡ್ಡದಹಳ್ಳಿ ಸರ್ವೇ ನಂ.57ರ ಸರ್ಕಾರಿ ಗೋಮಾಳದದಾಖಲೆಗಳನ್ನು ನಕಲಿ ಸೃಷ್ಟಿಸಿದ್ದು, ಈ ಜಾಗವನ್ನು ಉಳಿಸಬೇಕು ಎಂದು ಆಗ್ರಹಿಸಿದರು.
ರೋಜಿಪುರ ಸರ್ವೇ ನಂ.93ರ 0-23 ಗುಂಟೆ ಖರಾಬು ಜಾಗದಲ್ಲಿ ಖಾಸಗಿಯವರು ಕೈಗೊಂಡಿರುವ ಕಾಮಗಾರಿ ತಡೆಯುವುದು, ಗಂಗಾಧರಪುರ ಸರ್ವೇ ನಂ.124 ರಲ್ಲಿನ ಸ್ಮಶಾನದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಬೇಕು ಎಂದರು.
ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದ ಬಳಿ ಪರಿಶಿಷ್ಟ ಪಂಗಡದ ಹೆಣ್ಣುಮಕ್ಕಳ ವಿದ್ಯಾರ್ಥಿನಿಲಯಕ್ಕೆ ಮೀಸಲಿಟ್ಟ ಜಾಗ ಅತಿಕ್ರಮಿಸಲು ನಾಮಫಲಕ ಹಾಕಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು,ನಗರದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಮಠ ನಡೆಸುತ್ತಿರುವುದು, ಗಂಗಾಧರಪುರ ಸ.ನಂ. 111ರಲ್ಲಿದ್ದ ಪೊಲೀಸ್ ಕ್ವಾರ್ಟಸ್ ಜಾಗ ಕಬಳಿಸಲು ಯತ್ನಿಸಿದ್ದ ಭೂಗಳ್ಳರ ವಿರುದ್ಧ ಕಾನೂನು ಕ್ರಮವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಶ್ರೀ ಇವೆಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.