ಬೆಂಗಳೂರು: ನಗರ ನೆಲಮಂಗಲ ಠಾಣಾ ವ್ಯಾಪ್ತಿಯಲ್ಲಿ ಮದುವೆಯಾದ ಮೊದಲ ರಾತ್ರಿಯೇ(first night) ನವವಿವಾಹಿತ ದಂಪತಿಗಳ ನಡುವೆ ಗಲಾಟೆ ನಡೆದಿದ್ದು, ಗಂಡ ನಪುಂಸಕ, ಹೆಂಡತಿಗೆ ಕನ್ಯತ್ವ ಇಲ್ಲ ಎಂದು ಪರಸ್ಪರ ಆರೋಪಿಸಿಕೊಂಡಿದ್ದು, ಪುರುಷತ್ವ & ಕನ್ಯತ್ವ ಪರೀಕ್ಷೆ ವಿಷಯವಾಗಿ ಹಲ್ಲೆ ನಡೆದಿದ್ದು ವಧು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ನೆಲಮಂಗಲ ಠಾಣಾ ವ್ಯಾಪ್ತಿಯ 30 ವರ್ಷದ ಯುವಕ ಲೆಕ್ಕಪರಿಶೋಧಕ ಮತ್ತು ಹೆಸರಘಟ್ಟ ಬಳಿಯ ಕುಟ್ಟತಹಳ್ಳಿಯ 26 ವರ್ಷದ ಯುವತಿ ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದರು. ಆಸೆ ಆಕಾಂಕ್ಷೆಯೊಂದಿಗೆ ಮೊದಲ ರಾತ್ರಿ ದಂಪತಿಗಳು ನಿರ್ಧರಿಸಿದ್ದರು. ಆದರೆ ಮೊದಲ ರಾತ್ರಿಯೇ ಪತಿ, ಪತ್ನಿಯೊಂದಿಗೆ ಲೈಂಗಿಕ ಸಂಬಂಧದಲ್ಲಿ ತೊಡಗಿಕೊಳ್ಳದ ಕಾರಣ ಇಬ್ಬರ ನಡುವೆ ಗಲಾಟೆ ನಡೆದಿದೆ.
ಬಳಿಕ ಕೆಲವು ದಿನಗಳ ಬಳಿಕವೂ ಪತ್ನಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿಲ್ಲ ಎನ್ನಲಾಗಿದೆ. ಇದರಿಂದ ಕೋಪಗೊಂಡಿರುವ ಪತ್ನಿ, ತನ್ನ ಪತಿ ನಪುಂಸಕನಾಗಿದ್ದು, ಲೈಂಗಿಕ ಕ್ರಿಯೆಗೆ ನಿರಾಕರಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ. ಇದರಿಂದ ಸಿಟ್ಟಾಗಿರುವ ಯುವಕ ಪತ್ನಿ ಕನ್ಯತ್ವವನ್ನು ಹೊಂದಿಲ್ಲ, ಮೊದಲೇ ಕನ್ಯತ್ವ ಕಳೆದುಕೊಂಡಿದ್ದಾಳೆ ಎಂದು ಪ್ರತಿಯಾಗಿ ಆರೋಪಿಸಿದ್ದಾನೆ. ಈ ವಿಷಯಕ್ಕೆ ಎರಡೂ ಕುಟುಂಬದವರ ನಡುವೆ ಗಲಾಟೆ ನಡೆದಿದ್ದು, ಸತ್ಯ ಏನೆಂದು ತಿಳಿಯಲು ಯುವಕನಿಗೆ ಪುರುಷತ್ವ ಪರೀಕ್ಷೆ & ಯುವತಿಗೆ ಕನ್ಯತ್ವ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ.
ಪುರುಷತ್ವ ಪರೀಕ್ಷೆಗೆ ಹೆದರಿ ಓಡಿಹೋದ ಯುವಕ
ಎರಡು ಕುಟುಂಬಗಳು ನಿರ್ಧರಿಸಿದಂತೆ ಬೆಂಗಳೂರಿನ ಕ್ಲೌಡ್ನೈನ್ ಫರ್ಟಿಲಿಟಿ ಆಸ್ಪತ್ರೆಯಲ್ಲಿ ಇಬ್ಬರ ಪರೀಕ್ಷೆಗೆಳನ್ನು ನಿಗದಿ ಪಡಿಸಲಾಗಿತ್ತು. ಮೊದಲು ಯುವತಿ ಕನ್ಯತ್ವ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ ಯುವತಿ ಕನ್ಯಯಾಗಿದ್ದಾಳೆ ಎಂದು ತಿಳಿಯುತ್ತಿದ್ದಂತೆ, ಯುವಕ ತನ್ನ ಪುರುಷತ್ವ ಪರೀಕ್ಷೆಗೆ ನಿರಾಕರಿಸಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಬಳಿಕ ಯುವತಿ ತನ್ನ ಗಂಡನ ಮನೆಗೆ ವಾಪಸ್ ಬಂದಿದ್ದು, ಈ ವೇಳೆ ಆಕೆಯ ಪತಿ ಮತ್ತು ಅತ್ತೆ ಪುರುಷತ್ವ ಪರೀಕ್ಷೆಗೆ ಸಂಬಂಧಿಸಿದಂತೆ ಒತ್ತಾಯಿಸಿದ್ರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹಾಗೆಯೇ ವರದಕ್ಷಿಣೆ ಮತ್ತು ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವತಿ ನೆಲಮಂಗಲ ಠಾಣೆಗೆ ದೂರು ನೀಡಿದ್ದಾಳೆ.
ಯುವತಿ ನೀಡಿದ ಆಧಾರದ ಮೇಲೆ ಮೂವರ ವಿರುದ್ಧ ವರದಕ್ಷಿಣೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ (ಏಜೆನ್ಸೀಸ್).