ನಬಾಪುರ (ಖನಗಾಂವ) ಗ್ರಾಮದ ಸಿದ್ಧಲಿಂಗೇಶ್ವರ ಜಾತ್ರೆಯಲ್ಲಿ ಅಮರನಾಥ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು. ಟಿ.ಆರ್​.ಕಾಗಲ್​, ಪುಂಡಲೀಕ ವಣ್ಣೂರ ಇತರರಿದ್ದರು. 
ರಾಜ್ಯ

ಉತ್ಸವ ಸಂಸ್ಕೃತಿಯ ಪ್ರತಿಕ ಮಮದಾಪುರ:

ಮಮದಾಪುರ: ಜಾತ್ರೆಗಳು ಭಾರತೀಯ ಸಂಸತಿಯಲ್ಲಿ ವಿಶೇಷ ಸ್ಥಾನ ಹೊಂದಿದೆ. ಜಾತ್ರೆ, ಉತ್ಸವ, ಜನರನ್ನು ಒಗ್ಗೂಡಿಸುವ ಸಂಸತಿಯ ಸಂಕೇತವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಅಮರನಾಥ ಜಾರಕಿಹೊಳಿ ಹೇಳಿದರು. ಗೋಕಾಕ ತಾಲೂಕಿನ ನಬಾಪುರ (ಖನಗಾಂವ) ಗ್ರಾಮದ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್ಥಿಕ ಹೊರೆ ತಗ್ಗಿಸಲು ಸಾಮೂಹಿಕ ವಿವಾಹ ಅನುಕೂಲ ಎಂದರು. ಜಿಪಂ ಮಾಜಿ ಸದಸ್ಯ ಟಿ.ಆರ್​.ಕಾಗಲ್​, ಶಿವಲಿಂಗಯ್ಯ ಹಿರೇಮಠ, ಪುಂಡಲೀಕ ವಣ್ಣೂರ, ಶಿವಾನಂದ ಪಾಟೀಲ, ಚಂದ್ರಪ್ಪ ಹಂಚಿನಮನಿ, ಸಿದ್ದಪ್ಪ ದೇಸಾಯಿ, ಗಂಗಪ್ಪ ಮಾರಿಹಾಳ, ನಾಗನಗೌಡ ಪಾಟೀಲ, ಸುನಿಲ ನಾಯಕ, ಈಶ್ವರ ವಣ್ಣೂರ ಇತರರಿದ್ದರು.