FES staff member dies after falling into swimming pool 
ರಾಜ್ಯ

ಈಜುಕೊಳಕ್ಕೆ ಇಳಿದ ಎಫ್​ಇಎಸ್​ ಸಿಬ್ಬಂದಿ ಸಾವು

ಶಿಡ್ಲಘಟ್ಟ: ತಾಲೂಕಿನ ತುಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಂತಡಪಿ ಬಳಿಯ ಖಾಸಗಿ ರೆಸಾರ್ಟ್​ನಲ್ಲಿ ಈಜಲು ಹೋದ ಸ್ವಯಂ ಸೇವಾ ಸಂಸ್ಥೆಯ ಮಹಿಳಾ ಉದ್ಯೋಗಿ ಸೋಮವಾರ ಮೃತಪಟ್ಟಿದ್ದಾರೆ.
ಎಫ್​ಇಎಸ್​ ಸಂಸ್ಥೆ ಸಿಬ್ಬಂದಿಗೆ 2 ದಿನಗಳ ವಸತಿ ಸಹಿತ ತರಬೇತಿ ಕಾರ್ಯಾಗಾರವನ್ನು ರೆಸಾರ್ಟ್​ನಲ್ಲಿ ಹಮ್ಮಿಕೊಂಡಿದ್ದು, ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರೇಖಾ ತರಬೇತಿ ಮುಗಿಸಿಕೊಂಡು ಸಹೊದ್ಯೋಗಿಗಳ ಜತೆ ಈಜುಕೊಳಕ್ಕೆ ಇಳಿದಾಗ ಘಟನೆ ನಡೆದಿದೆ.
ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದ ರೆಸಾರ್ಟ್​ನ ರ್ನಿಲಕ್ಷ$್ಯದಿಂದಲೆ ಸಾವು ಸಂಭವಿಸಿದೆ ಎಂದು ಮೃತಳ ಕುಟುಂಬದವರು ದೂರಿದ್ದಾರೆ. ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
"

ನಡೆದಿದ್ದೇನು?

ಮೊದಲ ದಿನದ ತರಬೇತಿ ಮುಗಿಸಿಕೊಂಡು ಸಂಜೆ 6.30ರ ಆಸುಪಾಸಿನಲ್ಲಿ ರೇಖಾ ಕೆಲ ಸಹೊದ್ಯೋಗಿಗಳ ಜತೆ ಈಜುಕೊಳಕ್ಕೆ ಇಳಿದಿದ್ದಾರೆ. ಕೆಲ ಕಾಲ ಈಜಾಡಿದ ರೇಖಾ ನಂತರ ಅಸ್ವಸ್ಥಗಳಾಗಿದ್ದು, ಜತೆಯಲ್ಲಿದ್ದವರು ಆಕೆಯನ್ನು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಅಷ್ಟರಲ್ಲಿ ರೇಖಾ ಮೃತಪಟ್ಟಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ.ನಿಯಮದಂತೆ ಸಂಜೆ 6 ಗಂಟೆ ನಂತರ ಈಜುಕೊಳದಲ್ಲಿ ಈಜಾಡುವುದು ನಿಷಿದ್ಧ. ಆದರೆ, ರೆಸಾರ್ಟ್​ನವರು ಈಜಾಡಲು ಅವಕಾಶ ಕೊಟ್ಟಿದ್ದಾರಲ್ಲದೆ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಇದರಿಂದಲೆ ರೇಖಾ ಮೃತಪಟ್ಟಿದ್ದಾರೆಂದು ಕುಟುಂಬದವರು ದೂರಿದ್ದಾರೆ.

"

ಕುಟುಂಬದವರ ಆಕ್ರೋಶ

ವಿಷಯ ತಿಳಿದು ಆಸ್ಪತ್ರೆ ಮುಂದೆ ಜಮಾಯಿಸಿದ ಮೃತಳ ಕುಟುಂಬದವರು, ಕುಂದಲಗುರ್ಕಿ ಗ್ರಾಮಸ್ಥರು ರೆಸಾರ್ಟ್​ನ ಮಾಲೀಕರ ವಿರುದ್ದ ಕಿಡಿ ಕಾರಿದರು. ರೆಸಾರ್ಟ್​ ಮಾಲೀಕರು ಸ್ಥಳಕ್ಕೆ ಆಗಮಿಸಿ, ನಡೆದ ಘಟನೆ ಬಗ್ಗೆ ವಿವರಿಸಬೇಕು ಎಂದು ಶವಪರೀಕ್ಷೆ ನಡೆಸದಂತೆ ತಡೆ ಹಾಕಿದರು.ಸ್ಥಳದಲ್ಲಿದ್ದ ಎಫ್​ಇಎಸ್​ ಸಂಸ್ಥೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆದ ಘಟನೆಯನ್ನು ವಿವರಿಸಿದರು. ಪೊಲೀಸರು ರೇಖಾಳ ಕುಟುಂಬದವರನ್ನು ಮತ್ತು ಕುಂದಲಗುರ್ಕಿ ಗ್ರಾಮಸ್ಥರನ್ನು ಸಮಾಧಾನಪಡಿಸಿ, ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಮೃತ ರೇಖಾಳ ಪತಿ ರಾಜು ರೆಸಾರ್ಟ್​ಲ್ಲಿ ಈಜುಕೊಳದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಕಾವಲುಗಾರರನ್ನೂ ನೇಮಿಸಿಲ್ಲ.ಪತ್ನಿ ಸಾವಿಗೆ ರೆಸಾರ್ಟ್​ನ ಮಾಲೀಕರೇ ಕಾರಣವಾಗಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.