ಅಕ್ರಮ ರಸಗೊಬ್ಬರ ಮಾರಾಟ ತಡೆಯುವಂತೆ ಒತ್ತಾಯ
- ಅಕ್ರಮ ರಸಗೊಬ್ಬರ ಮಾರಾಟ ತಡೆಯುಂತೆ ಒತ್ತಾಯ
- ಚಿಕ್ಕೋಡಿಯಲ್ಲಿ ಕೆಆರ್ ಎಸ್ ಪಕ್ಷದಿಂದ ಪ್ರತಿಭಟನೆ
- ಸಮರ್ಪಕ ರಸಗೊಬ್ಬರ ನೀಡುವಂತೆ ಮನವಿ
ಅಕ್ರಮ ರಸಗೊಬ್ಬರ ಮಾರಾಟ ತಡೆಯುವಂತೆ ಒತ್ತಾಯ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ: ಜಿಲ್ಲೆಯಾದ್ಯಂತ ನಡೆಯುತ್ತಿರುವ
ಅಕ್ರಮ ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಮುಂಗಾರು ಆರಂಭವಾಗಿದೆ, ರೈತರಿಗೆ ಸಮರ್ಪಕ ರಸಗೊಬ್ಬರಗಳು ಸಿಗುತ್ತಿಲ್ಲ. ಕೆಲವು ಕಡೆ ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿತ್ತು.
ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪರವಾನಿಗೆ ಇಲ್ಲದೆ, ಅಕ್ರಮವಾಗಿ ರಸಗೊಬ್ಬರ ಮಾರಾಟ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಮಾರಾಟ ಮಳಿಗೆಗಳ ಮೇಲೆ ನಿರಂತರ ನಿಗಾ ವಹಿಸಬೇಕು ಎಂದು ಮನವಿ ಮಾಡಿದರು.
ವಿನೋದ ಪಾಟೀಲ, ಸಿದ್ದು ಬನಸೋಡೆ, ಕುಮಾರ್ ಡೊಂಗರೆ,ಹನುಮಂತ ಗಾಡಿವಡ್ಡರ, ಸತೀಶ ಪೂಜಾರಿ, ಸಿದ್ದು ಡಾಂಗೆ, ರಾಜೇಂದ್ರ ಪಾಟೀಲ, ಚನ್ನಪ್ಪ ಬಡಿಗೇರ, ಸುರೇಶ ಸೌದಾಗರ್, ರಾಜು ಮೇಲಕೇರಿ, ಸದಾಶಿವ ಬೆರಂಜಿ ಇತರರು ಇದ್ದರು.