ಭಿರಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ರೈತರನ್ನು ಸನ್ಮಾನಿಸಲಾಯಿತು. ನಿಜಲಿಂಗೇಶ್ವರ ಸ್ವಾಮೀಜಿ, ಸಹದೇವ ಯರಗೊಪ್ಪ, ರೇಖಾ ಕರಬರಿ, ವಿನೋದ ಮಾವರಕರ ಇತರರಿದ್ದರು. 
ರಾಜ್ಯ

ರಾಸಾಯನಿಕ ಗೊಬ್ಬರದಿಂದ ಫಲವತ್ತತೆ ನಾಶ

ರಾಯಬಾಗ: ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡು ಬರಡಾಗುತ್ತಿದೆ ಎಂದು ನಿಡಸೋಸಿ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಭಿರಡಿ ಗ್ರಾಮದ ಮಹಾದೇವ ದೇವಸ್ಥಾನ ಕಾರ್ಯಾಲಯದಲ್ಲಿ ಕೃಷಿ ಇಲಾಖೆ, ನ್ಯಾಷನಲ್​ ರ್ಟಿಲೆಸರ್​ ಹಾಗೂ ವೀರಭದ್ರೇಶ್ವರ ರ್ಟಿಲೆಸರ್​ ಸಹಯೋಗದಲ್ಲಿ ವಿಶ್ವ ಮಣ್ಣು ದಿನಾಚರಣೆ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಮಣ್ಣಿನ ಆರೋಗ್ಯ ಮತ್ತು ಕಷಿಯಲ್ಲಿ ಮಹಿಳೆಯರ ಪಾತ್ರ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಚಿಕ್ಕೋಡಿ ಉಪಕಷಿ ನಿರ್ದೇಶಕ ಸಹದೇವ ಯರಗೊಪ್ಪ ಮಾತನಾಡಿ, ಮಣ್ಣಿನ ಮಹತ್ವ ಸಾರುವ ಉದ್ದೇಶದಿಂದ ಡಿ.5ರಂದು ಮಣ್ಣು ದಿನ ಆಚರಿಸಲಾಗುತ್ತಿದೆ ಎಂದರು.
ತುಕ್ಕಾನಟ್ಟಿ ಕೃಷಿ ಕೇಂದ್ರದ ಗೃಹವಿಜ್ಞಾನ ತಜ್ಞೆ ರೇಖಾ ಕರಬರಿ ಮಾತನಾಡಿ, ಮಹಿಳೆಯರು ಕೃಷಿ ಚಟುವಟಿಕೆಗಳ ಜತೆಗೆ ಹೈನುಗಾರಿಕೆ ಮತ್ತು ಉಪಕಸುಬು ಮಾಡಿ ಸಬಲರಾಗಬೇಕು ಎಂದರು.
ಕಬಡ್ಡಿ ಸಾಧಕರು, ಅಗ್ನೀವಿರರಾಗಿ ಆಯ್ಕೆಯಾದವರು ಹಾಗೂ ಅಧಿಕ ಇಳುವರಿ ಕಬ್ಬು ಬೆಳೆದ ರೈತರನ್ನು ಸನ್ಮಾನಿಸಲಾಯಿತು. ರೈತ ಮಹಿಳೆಯರ ಉಡಿ ತುಂಬಲಾಯಿತು. ತಾಲೂಕು ಸಹಾಯಕ ಕೃಷಿ ನಿರ್ದೇಶಕ ವಿನೋದ ಮಾವರಕರ, ಹೈನುಗಾರಿಕೆ ತ ಸೂರಜ ಕೌಜಲಗಿ, ಸಿಬಿಕೆಎಸ್​ಎಸ್​ಕೆ ಉಪಾಧ್ಯ ತಾತ್ಯಾಸಾಬ ಕಾಟೆ, ನಿರ್ದೇಶಕ ಭರತೇಶ ಬನವಣೆ, ಮಲ್ಲಪ್ಪ ಮೈಶಾಳೆ, ಮಹಾದೇವ ಬೋರಗಾಂವೆ, ಭರತ ಪಾಟೀಲ, ಮಹಾಂತೇಶ ಸಂಕೇಶ್ವರ, ಶಂಕರ ಗಡಕರಿ, ಶಿವಪ್ಪ ಭೆಂಡೆ, ವಿರೂಪಾ ಗಳತಗೆ, ಬಾಬಾಜಿ ಬೋರಗಾಂವೆ, ಕೆಂಪಣ್ಣ ಮೈಶಾಳೆ, ಶಿವಗೊಂಡ ನಿಡವಣಿ, ಪರಶುರಾಮ ಭೆಂಡೆ ಇತರರಿದ್ದರು.