ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಡಾ.ಎನ್.ಬಿ.ಪ್ರಕಾಶ್‌ಗೆ ಫೆಲೋಶಿಪ್ ಗೌರವ 
ರಾಜ್ಯ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಡಾ.ಎನ್.ಬಿ.ಪ್ರಕಾಶ್‌ಗೆ ಫೆಲೋಶಿಪ್ ಗೌರವ

ಪ್ರಮುಖ ಮುಖ್ಯಾಂಶಗಳು

  • ಕೃಷಿ ಸಂಶೋಧಕ ಡಾ.ಎನ್.ಬಿ.ಪ್ರಕಾಶ್‌ಗೆ ಫೆಲೋಶಿಪ್ ಗೌರವ
  • ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ
  • ರಾಷ್ಟ್ರೀಯ ಕೃಷಿ ವಿಜ್ಞಾನಿಗಳ ಅಕಾಡೆಮಿ ಕೊಡುವ ಪ್ರತಿಷ್ಠಿತ ಫೆಲೋಶಿಪ್

ಬೆಂಗಳೂರು:ರಾಷ್ಟ್ರೀಯಕೃಷಿ ವಿಜ್ಞಾನಿಗಳ ಅಕಾಡೆಮಿಕೊಡುವ ಪ್ರತಿಷ್ಠಿತ ಫೆಲೋಶಿಪ್ಗೌರವಕ್ಕೆ ಬೆಂಗಳೂರು ಕೃಷಿವಿಶ್ವವಿದ್ಯಾನಿಲಯದ ಡೀನ್ ಹಾಗೂಮಣ್ಣು ವಿಜ್ಞಾನದ ಪ್ರಾಧ್ಯಾಪಕಡಾ. ಎನ್.ಬಿ.ಪ್ರಕಾಶ್ಭಾಜನರಾಗಿದ್ದಾರೆ.ಕೃಷಿ ಕ್ಷೇತ್ರದಸಂಶೋಧನೆಯಲ್ಲಿ ಅಪ್ರತಿಮ ಸಾಧನೆಗೈದಕೃಷಿ ವಿಜ್ಞಾನಿಗಳನ್ನು ನವದೆಹಲಿಯರಾಷ್ಟ್ರೀಯ ಕೃಷಿ ವಿಜ್ಞಾನಿಗಳಅಕಾಡೆಮಿಯು ಗುರುತಿಸಿ ಗೌರವಿಸುತ್ತಾಬಂದಿದೆ.

ಪ್ರಸ್ತುತಸಾಲಿಗೆ ಡಾ.ಎನ್.ಬಿ.ಪ್ರಕಾಶ್ ಕೈಗೊಂಡಮಣ್ಣು ಫಲವತ್ತತೆ ಹಾಗೂ ಸುಸ್ಥಿರಕೃಷಿ ಕುರಿತಾದ ಅತ್ಯುನ್ನತಸಂಶೋಧನಾ ಚಟುವಟಿಕೆಗಳ ಫಲಿತಾಂಶಗಳುಹಾಗೂ ಸಿಲಿಕಾನ್ ಪೋಷಕಾಂಶದಉಪಯುಕ್ತತೆ ಮತ್ತು ಮಣ್ಣಿನಫಲವತ್ತತೆ ನಿರ್ವಹಣೆ ಕುರಿತಾದಸಂಶೋಧನೆ ಕೈಗೊಂಡವರಲ್ಲಿ ಮೊದಲಿಗರುಎಂಬ ಹೆಗ್ಗಳಿಕೆಯನ್ನು ಪರಿಗಣಿಸಿ2026ನೇಸಾಲಿನ ರಾಷ್ಟ್ರೀಯ ಕೃಷಿ ವಿಜ್ಞಾನಿಗಳಅಕಾಡೆಮಿ ಫೆಲೋ ಎಂದು ಗುರುತಿಸಿದೆ.

ಬೆಂಗಳೂರುಕೃಷಿ ವಿಶ್ವವಿದ್ಯಾನಿಲಯದವಿಜ್ಞಾನಿಗಳು ರಾಷ್ಟ್ರೀಯ ಫೆಲೋಪಡೆಯುವ ಈ ಹಿಂದಿನ ಸಂಪ್ರದಾಯವನ್ನುಪ್ರಕಾಶ್ ಮುಂದುವರೆಸಿದ್ದಾರೆ. ಈ ಹಿಂದೆ 2004ರಲ್ಲಿರಾಷ್ಟ್ರೀಯ ಫೆಲೋ ಗೌರವ ಬೆಂಗಳೂರುಕೃ.ವಿ.ವಿಗೆಸಿಕ್ಕಿದ್ದು,21 ವರ್ಷಗಳ ನಂತರಮತ್ತೊಮ್ಮೆ ರಾಷ್ಟ್ರೀಯ ಫೆಲೋಬಂದಿದೆ.