ಗಿರಿಜಿಲ್ಲೆ ಪತ್ರಕರ್ತರ ಮಕ್ಕಳಿಗೆ ಖಾಸಗಿ ಶಾಲಾ&ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದಿಂದ ಡಿಡಿಪಿಐ ಕಚೇರಿ ವ್ಯವಸ್ಥಾಪಕರಿಗೆ ಅಧ್ಯಕ್ಷ ಮಲ್ಲಪ್ಪ ಸಂಕಿನ್ ಮನವಿ ಸಲ್ಲಿಸಿದರು. ಸಿದ್ದಪ್ಪ ಲಿಂಗೇರಿ, ರಾಜು ನಲ್ಲಿಕರ್, ಗಣೇಶ ಪಾಟೀಲ್, ಮಹೇಶ ಗಣೇರ, ನಾಗರಾಜ ಕೋಟೆ, ನರಸಪ್ಪ ನಾರಾಯಣೋರ್, ಶರಭು ನಾಟೇಕರ ಇತರರಿದ್ದರು.
- ಖಾಸಗಿ ಶಾಲಾ-ಕಾಲೇಜುಗಳಲ್ಲಿರಲಿ ಶೇ.50
- ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಆಗ್ರಹ
ಯಾದಗಿರಿ: ಜಿಲ್ಲೆಯ ಖಾಸಗಿ ಶಾಲಾ ಮತ್ತು ಕಾಲೇಜುಗಳಲ್ಲಿ ಅಭ್ಯಾಸ ಮಾಡುವ ಪತ್ರಕರ್ತರ ಮಕ್ಕಳಿಗೆ ಪ್ರಸ್ತಕ ಶೈಕ್ಷಣಿಕ ವರ್ಷದಿಂದಲೇ ಶುಲ್ಕ ವಿನಾಯಿತಿ ನೀಡುವಂತೆ ಆಗ್ರಹಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದಿಂದ ಶುಕ್ರವಾರ ಡಿಡಿಪಿಐ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರತ್ಯೇಕ ಮನವಿ ಸಲ್ಲಿಸಿ ಮಾತನಾಡಿದ ಸಂದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕಿನ್ ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರಗೆ ಮತ್ತು ಪಿಯು ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಅಭ್ಯಾಸ ಮಾಡುವ ಪತ್ರಕರ್ತರ ಮಕ್ಕಳಿಗೆ ಶೇ.50 ಶುಲ್ಕ ವಿನಾಯಿತಿ ನೀಡುವ ಮೂಲಕ ಅನುಕೂಲ ಮಾಡಿಕೊಡಬೇಕು. ಸಾಕಷ್ಟು ಪತ್ರಕರ್ತರು ಆರ್ಥಿಕವಾಗಿ ಸಬಲತೆ ಹೊಂದಿಲ್ಲ. ಹೀಗಾಗಿ ಶುಲ್ಕ ವಿನಾಯಿತಿ ನೀಡಲು ಮುಂದಾಗಬೇಕು. ತಾವು ಖಾಸಗಿ ಶಾಲಾ ಮತ್ತು ಕಾಲೇಜು ಶಿಣ ಸಂಸ್ಥೆಗಳಿಗೆ ಪತ್ರಕರ್ತರ ಸೇವೆ ಮನದಟ್ಟು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಇಲಾಖೆ ಅಧಿಕಾರಿಗಳು ನಮ್ಮ ಬೇಡಿಕೆಯನ್ನು ಈಡೇರಿಸಲು ಸಾಕಷ್ಟು ಮುತುವರ್ಜಿ ವಹಿಸಬೇಕು. ಶುಲ್ಕ ವಿನಾಯಿತಿ ಮಾಡಿದರೆ ಪತ್ರಕರ್ತರಿಗೆ ತುಂಬ ಆರ್ಥಿಕವಾಗಿ ಪ್ರಯೋಜನವಾಗಲಿದೆ ಎಂದರು. ಸಾಮಾಜಿಕ ವ್ಯವಸ್ಥೆ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರ ಅಮೋವಾಗಿದೆ. ಆದರೆ ಬಹುತೇಕ ಪತ್ರಕರ್ತರ ಆರ್ಥಿಕ ಪರಿಸ್ಥಿತಿ ಅಯೋಮಯವಾಗಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬೇಡಿಕೆ ಈಡೆರಿಸಿದರೇ ಪತ್ರಕರ್ತರ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ, ಜಿಲ್ಲಾ ಖಜಾಂಚಿ ರಾಜು ನಲ್ಲಿಕರ್, ಗಣೇಶ ಪಾಟೀಲ್, ಮಹೇಶ ಗಣೇರ, ನಾಗರಾಜ ಕೋಟೆ, ನರಸಪ್ಪ ನಾರಾಯಣೋರ್, ಶರಭು ನಾಟೇಕರ, ಲ್ಮಕಾಂತ ಲಿಂಗೇರಿ, ಸುದೀರ್ ಕೋಟೆ, ಮಾನಯ್ಯ ಘಾಳೆಣ್ಣವರ, ನಾಗಪ್ಪ ದೇಸಾಯಿ ಇತರರಿದ್ದರು.