400 ಕೆವಿ ವಿದ್ಯುತ್ ಪ್ರಸರಣ ಮಾರ್ಗ
ಬೆಂಗಳೂರು: ಗಣರಾಜ್ಯೋತ್ಸವ ದಿನ ಪ್ರಯುಕ್ತ ಮೂಡುಬಿದಿರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಡುಪಿ-ಕಾಸಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗಕ್ಕಾಗಿ ಭೂಮಿ ಕೊಟ್ಟಿದ್ದ ಭೂ ಮಾಲೀಕರು ಮತ್ತು ರೈತರನ್ನು ಸನ್ಮಾನಿಸಲಾಯಿತು.
ಈ ವಿದ್ಯುತ್ ಪ್ರಸರಣ ಯೋಜನೆಯು ಕೇಂದ್ರ ಸರ್ಕಾರದ ಪ್ರಮುಖ ಉಪಕ್ರಮವಾದ ‘ಒಂದು ಗ್ರಿಡ್, ಒಂದು ರಾಷ್ಟ್ರ’ದ ಭಾಗವಾಗಿದೆ. ಕೃಷಿ ಮೂಲಕ ತಮ್ಮ ಭೂಮಿಯೊಂದಿಗೆ ಆಳವಾದ ಭಾವನಾತ್ಮಕ ಮತ್ತು ಪೀಳಿಗೆಯ ಬಾಂಧವ್ಯವನ್ನು ಹೊಂದಿದ್ದರೂ ಬಾಧಿತ ಭೂಮಾಲೀಕರು ಈ ರಾಷ್ಟ್ರೀಯ ಮೂಲಸೌಕರ್ಯ ಯೋಜನೆಯ ಅನುಷ್ಠಾನಕ್ಕಾಗಿ ಸ್ವಇಚ್ಛೆಯಿಂದ ಭೂಮಿಯನ್ನು ದೇಣಿಗೆ ನೀಡಿದರು.
ದೇಶದ ಅಭಿವೃದ್ಧಿಗೆ ಅವರ ತ್ಯಾಗ ಮತ್ತು ಕೊಡುಗೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಅವರನ್ನು ಸನ್ಮಾನಿಸಿದೆ. ಭೂಮಿ ಮತ್ತು ನೀರಿನ ರಕ್ಷಣೆಗಾಗಿ ಪ್ರತಿಪಾದಿಸುವಾಗ ಯೋಜನೆಯನ್ನು ಬೆಂಬಲಿಸುವ ಮೂಲಕ ಸಹಕಾರ ಮತ್ತು ರಾಷ್ಟ್ರೀಯ ಜವಾಬ್ದಾರಿ ಮನೋಭಾವವನ್ನು ಪ್ರದರ್ಶಿಸಿದ ರೈತರ ಕಾರ್ಯವನ್ನು ಶ್ಲಾಸಲಾಯಿತು. ಸಂಘಟಕರು ಸೇರಿ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.