ಮುನವಳ್ಳಿ ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ಸಭಾಂಗಣದಲ್ಲಿ ರೈತ ಲಾನುಭವಿಗಳಿಗೆ ಶೂನ್ಯ ಬಡ್ಡಿ ಸಾಲದ ಪತ್ತಿನ ಚೆಕ್ನ್ನು ವಿರೂಪಾ ಮಾಮನಿ, ಅಂಬರೀಷ ಯಲಿಗಾರ ವಿತರಿಸಿದರು. ರವೀಂದ್ರ ಯಲಿಗಾರ, ಎಸ್.ಎಸ್.ಸಿದ್ದನ್ನವರ, ಅಶೋಕ ಪಟ್ಟಣಶೆಟ್ಟಿ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಮುನವಳ್ಳಿ
ಸಂದ ಬೇಡಿಕೆಯಂತೆ ಹಿಂದೆ ಇದ್ದ 3 ಲ ರೂ. ಸಾಲದ ಮಿತಿಯನ್ನು 5 ಲ ರೂ.ಗೆ ಹೆಚ್ಚಿಸಲಾಗಿದೆ. ರೈತರು ಸರ್ಕಾರದ ಶೂನ್ಯ ಬಡ್ಡಿ ಸಾಲ ಸೌಲಭ್ಯ ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷ ಮಾಮನಿ ಹೇಳಿದರು.
ಪಟ್ಟಣದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ಸಭಾಂಗಣದಲ್ಲಿ ಮಂಗಳವಾರ ರೈತ ಲಾನುಭವಿಗಳಿಗೆ ಸಾಲದ ಪತ್ತು ವಿತರಿಸಿ ಮಾತನಾಡಿದರು.
ಶತಮಾನೋತ್ಸವ ಕಂಡ ಸಂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಗತಿಪಥದತ್ತ ಮುನ್ನಡೆದಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಸದೃಢವಾಗಿದೆ. ರೈತರು ಉಹಾಪೋಹಗಳಿಗೆ ಕಿವಿಗೊಡದೇ, ಬ್ಯಾಂಕ್ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.
ಅಧ್ಯತೆ ವಹಿಸಿದ್ದ ಸಂದ ಅಧ್ಯ ಅಂಬರೀಷ ಯಲಿಗಾರ ಮಾತನಾಡಿ, ಸಂಕ್ಕೆ ಒಟ್ಟು 14.20 ಕೋಟಿ ರೂ. ಪತ್ತು ಮಂಜೂರಾಗಿದ್ದು, ಈಗಾಗಲೇ 11.68 ಕೋಟಿ ರೂ. ವಿತರಿಸಲಾಗಿದೆ. ರೈತರಿಗೆ ಹೆಚ್ಚಿನ ಪತ್ತು ನೀಡಿ, ಆರ್ಥಿಕವಾಗಿ ಸದೃಢಗೊಳಿಸುವುದೇ ಸಂದ ಮುಖ್ಯ ಧ್ಯೇಯವಾಗಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾ ಮಾಮನಿ ಅವರನ್ನು ಸನ್ಮಾನಿಸಲಾಯಿತು. ಸಹಕಾರಿ ಧುರೀಣ ರವೀಂದ್ರ ಯಲಿಗಾರ, ಸಂದ ಉಪಾಧ್ಯ ವೀರಭದ್ರಗೌಡ ಪಾಟೀಲ, ಕಲ್ಲಪ್ಪ ಕಿತ್ತೂರ, ಅಂದಾನೆಪ್ಪ ಗೋಮಾಡಿ, ಶಿವಲಿಂಗಯ್ಯ ಹಿರೇಮಠ, ಪ್ರಕಾಶ ಕಾಮಣ್ಣವರ, ಮೌಲಾಸಾಬ್ ಬಂಡ್ರೊಳ್ಳಿ, ನಾಗಪ್ಪ ಕಾಮಣ್ಣವರ, ಪಂಚಪ್ಪ
ಗುಂಡ್ಲೂರ, ನಾಗಪ್ಪ ಕಾಮಣ್ಣವರ, ಮಂಜುನಾಥ ದೊಡ್ಡಮನಿ, ಸಹಕಾರ ಸಂಗಳ ತಾಲೂಕು ನಿಯಂತ್ರಣಾಧಿಕಾರಿ ಸಿ.ಕೆ.ಕೋರಿ, ಬ್ಯಾಂಕ್ ನಿರೀಕ ಎಸ್.ಎಸ್.ಸಿದ್ದನ್ನವರ, ಮುಖ್ಯ ಕಾರ್ಯನಿರ್ವಾಹಕ ಅಶೋಕ ಪಟ್ಟಣಶೆಟ್ಟಿ ಇತರರಿದ್ದರು.