ಮಳೆಗಾಗಿ ಪ್ರಾರ್ಥಿಸಿ ದೋರನಹಳ್ಳಿ ಪಟ್ಟಣದಲ್ಲಿನ ಹೆಣ್ಣು ದೇವತೆಗಳಿಗೆ ಉಡಿ ತುಂಬುವ ಕಾರ್ಯ ಹಾಗೂ ವಾರ ಹಿಡಿಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಶಿವಲಿಂಗರಾಜೇAದ್ರ ಶಿವಾಚಾರ್ಯರು, ಅಭಿನವ ಮಹಾಂತೇಶ್ವರ ಶಿವಾಚಾರ್ಯರು, ಜಟ್ಟೆಪ್ಪ ಪೂಜÁರಿ, ಸಿಲಿಂಗಪ್ಪ ಪೂಜÁರಿ, ಷಣ್ಮುಖಯ್ಯ ಗುಡಿ, ಗೌಡಪ್ಪಗೌಡ ಲಕ್ಕಶೇಟ್ಟಿ, ಪರಮಣ್ಣ ಆಂದೇಲಿ, ಮಹೇಶ ಕಂಚಗಾರ, ಮಾನಪ್ಪ ಕಂಬಾರ, ಸಂಗಣ್ಣ ಮಲಗೊಂಡ, ವಿಠ್ಠಲ್ ಹೊಸಪೇಟೆ, ಬಂಡೆಪ್ಪ ಅಗಸಿ ಸೇರಿ ಇತರರು ಇದ್ದರು.
- ಚಿಕ್ಕಮಠದ ಶಿವಲಿಂಗರಾಜೇAದ್ರ ಶಿವಾಚಾರ್ಯರ ನೇತೃತ್ವದಲ್ಲಿ ಹೆಣ್ಣು ದೇವರಿಗೆ ಉಡಿ ತುಂಬಿದ ಗ್ರಾಮಸ್ಥರು
ದೋರನಹಳ್ಳಿ : ಮಳೆ ಬಾರದ ಕಾರಣ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಹೀಗಾಗಿ ಉತ್ತಮ ಮಳೆಗಾಗಿ ಗ್ರಾಮದ ಎಲ್ಲ ಹೆಣ್ಣು ದೇವರುಗಳಿಗೆ ಉಡಿ ತುಂಬುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಶಾಂಭವಿ ಮಾತಾ ಚಿಕ್ಕಮಠದ ಶಿವಲಿಮಗ ರಾಜೇಂದ್ರ ಶಿವಾಚಾರ್ಯರು ಹೇಳಿದರು.
ಪಟ್ಟಣದಲ್ಲಿ ಮಳೆಗಾಗಿ ಪ್ರಾರ್ಥಿಸಿ ಹಮ್ಮಿಕೊಂಡ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತ ನಗುತ್ತಿದ್ದರೆ ಎಲ್ಲರೂ ನಗುತ್ತೇವೆ ರೈತ ಇಲ್ಲವಾದರೆ ನಾವುಗಳು ಯಾರು ಬದುಕುಳಿಯುವುದು ಕಷ್ಟ. ನಮ್ಮ ಪಟ್ಟಣದಲ್ಲಿ ಈಗಾಗಲೇ ರೈತರು ಎರಡು, ಮೂರು ಬಾರಿ ಬಿತ್ತನೇ ಮಾಡಿದರೂ ಮಳೆ ಇಲ್ಲದೆ ಬೀಜ ಭೂಮಿಯಿಂದ ಮೇಲೆಳುತ್ತಿಲ್ಲ. ಹೀಗಾಗಿ ವರುಣನ ಕೃಪೆಯಾಗಿ ಈ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕಳ್ಳಲಾಗಿದೆ ಎಂದರು.
ಪಟ್ಟಣದ ಎಲ್ಲ ಹಿರಿಯ ಮುಖಂಡರು, ರೈತರು ಜತೆಗೂಡಿ ಭಾಜÁ ಭಜಂತ್ರಿ, ಡೊಳ್ಳಿನ ಮೇಳ, ಹಲಗೆ ಮೇಳದೊಂದಿಗೆ ದೇವಿಗೆ ಉಡಿತುಂಬಿ ವಿಶೆಷ ಪೂಜೆಸಲ್ಲಿಸಿ ವಾರ ಪದ್ದತಿಗೆ ಚಾಲನೆ ನೀಡಲಾಯಿತು. ಈ ವೇಳೆ ಗಣಪತರಾವ ಜೋಳದ್, ವೀರಸಂಗಣ್ಣ ದೇಸಾಯಿ, ಈಶ್ವರಪ್ಪಗೌಡ ಲಕ್ಕಶೇಟ್ಟಿ, ಗೌಡಪ್ಪಗೌಡ ಲಕ್ಕಶೇಟ್ಟಿ, ಖಂಡಪ್ಪ ಗುಂಟನೂರ, ತಿಪ್ಪಣ್ಣ ಬಿರಾಳ್, ದೊಡಪ್ಪ ದೇಸಾಯಿ, ದೇವಿಂದ್ರಪ್ಪ ಜೋಳದ್, ಮಹೇಶ ಕಂಚಗಾರ, ಮಾನಪ್ಪ ಕಂಬಾರ ಸೇರಿ ಅನೇಕರು ಭಾಗವಹಿಸಿದ್ದರು.