ಚಿಂತಾಮಣಿಯ ಕುರುಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ತೆಂಗು ದಿನಾಚರಣೆಯನ್ನು ಬೆಂಗಳೂರಿನ ಲಾಲ್​ಬಾಗ್​ ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಶಕೀಲ್​ ಅಹಮದ್​ ಉದ್ಘಾಟಿಸಿದರು. ತೆಂಗು ಅಭಿವೃದ್ಧಿ ಮಂಡಳಿ ನಿರ್ದೇಶಕಿ ರೇಷ್ಮಾ, ತೋಟಗಾರಿಕೆ ವಿಜ್ಞಾನಿ ಆರ್​.ಪ್ರವಿಣ್​ ಕುಮಾರ್​, ನರಸರೆಡ್ಡಿ, ಡಾ.ಎಂ.ಪಾಪಿರೆಡ್ಡಿ ಇದ್ದರು. 
ರಾಜ್ಯ

ವಿವಿಧ ಯೋಜನೆ, ಸಹಾಯಧನ ರೈತರಿಗೆ ಸಿಗಲಿ

ಚಿಂತಾಮಣಿ :ತೋಟಗಾರಿಕೆ ಇಲಾಖೆಯಿಂದ ಸಿಗುವ ವಿವಿಧ ಯೋಜನೆ, ಸಹಾಯಧನ ಸೌಲಭ್ಯವನ್ನು ರೈತರೂ ಸದ್ಬಳಸಿಕೊಳ್ಳಬೇಕು ಎಂದು ಬೆಂಗಳೂರಿನ ಲಾಲ್​ಬಾಗ್​ ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಶಕೀಲ್​ ಅಹಮದ್​ ತಿಳಿಸಿದರು.
ಚಿಕ್ಕಬಳ್ಳಾಪುರದ ತೋಟಗಾರಿಕೆ ಇಲಾಖೆ, ಬೆಂಗಳೂರಿನ ತೆಂಗು ಅಭಿವೃದ್ಧಿ ಮಂಡಳಿ ಸಂಯುಕ್ತಾಶ್ರಯದಲ್ಲಿ ಚಿಂತಾಮಣಿ ಕುರುಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ತೆಂಗು ದಿನಾಚರಣೆಯಲ್ಲಿ ಮಾತನಾಡಿ, ತೆಂಗಿನ ಸಮಸ್ಯೆಗಳ ನಿವಾರಣೆ ಕುರಿತು ವಿವರಿಸಿದರು.
ತೆಂಗು ಅಭಿವೃದ್ಧಿ ಮಂಡಳಿ ನಿರ್ದೇಶಕಿ ರೇಷ್ಮಾ ಮಾತನಾಡಿ, ರೈತರಿಗೆ ಮಂಡಳಿಯಿಂದ ದೊರೆಯುವ ಸೌಲಭ್ಯಗಳು, ತಾಂತ್ರಿಕ ಪ್ರೋತ್ಸಾಹ, ಯೋಜನೆಗಳ ಕುರಿತು ತಿಳಿಸಿದರು.
ತೋಟಗಾರಿಕೆ ವಿಜ್ಞಾನಿ ಆರ್​.ಪ್ರವಿಣ್​ ಕುಮಾರ್​ ಮಾತನಾಡಿ,ತೆಂಗು ಬೆಳೆಯಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ಬೇಸಾಯ ಕ್ರಮಗಳ ಕುರಿತು ಮಾಹಿತಿ ನೀಡಿ, ರೈತರ ಅನುಕೂಲಕ್ಕಾಗಿ ಸಿದ್ಧಪಡಿಸಲಾದ ವೈಜ್ಞಾನಿಕ ಬೆಳೆ ಪದ್ಧತಿಗಳ ತರಬೇತಿ ಕೈಪಿಡಿ ಬಿಡುಗಡೆಗೊಳಿಸಿದರು.
ಚಿಂತಾಮಣಿಯ ರೇಷ್ಮೆ ಕೃಷಿ ಮಹಾವಿದ್ಯಾಲಯದ ಕೀಟಶಾಸ್ತ್ರ ಸಹಾಯಕ ಪ್ರಾಧ್ಯಾಪಕ ನರಸರೆಡ್ಡಿ, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ, ಮುಖ್ಯಸ್ಥ ಡಾ.ಎಂ.ಪಾಪಿರೆಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಿಂತಾಮಣಿ ಹಾಗೂ ಸುತ್ತಮುತ್ತಲ ಪ್ರದೇಶಗಳ 200ಕ್ಕೂ ಹೆಚ್ಚು ರೈತರು, ಮಹಿಳೆಯರು ಭಾಗವಹಿಸಿದರು.