ಹಾರೂಗೇರಿಯಲ್ಲಿ ಹಮ್ಮಿಕೊಂಡಿದ್ದ ರೈತರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಪದ್ಮಶ್ರೀ ಪುರಸತ ಡಾ.ಪ್ರಭಾಕರ ಕೋರೆ ಅವರನ್ನು ಸನ್ಮಾನಿಸಲಾಯಿತು. ಜಿನ್ನಪ್ಪ ಅಸ್ಕಿ, ಭೀಮಪ್ಪ ಬದನೆಕಾಯಿ, ನೇಮಣ್ಣ ನಾಣಾವಿ, ಬಸನಗೌಡ ಆಸಂಗಿ, ಸಿದ್ದಪ್ಪ ನಾಗನೂರು, ಶ್ರೀಧರ ಸದಲಗಿ ಇತರರಿದ್ದರು.  
ರಾಜ್ಯ

ಸಂಕಷ್ಟಗಳಿಗೆ ರೈತರು ಧೃತಿಗೆಡದಿರಲಿ: ಡಾ.ಪ್ರಭಾಕರ ಕೋರೆ ಕಿವಿಮಾತು

ಬೆಳಗಾವಿ: ಯಾವುದೇ ಸಂಕಷ್ಟ ಎದುರಾದರೂ ರೈತರು ಧೃತಿಗೆಡದೆ ಧೈರ್ಯದಿಂದ ಎದುರಿಸಬೇಕು. ಮಳೆ, ಬೆಳೆ ಹಾಗೂ ಹವಾಮಾನ ಪರಿಸ್ಥಿತಿ ನಮ್ಮ ಕೈಯಲ್ಲಿಲ್ಲ. ಅವೆಲ್ಲವೂ ಪ್ರಕೃತಿಯ ನಿರ್ಧಾರ. ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ರೈತರು ಕೃಷಿ ಪದ್ಧತಿಗಳನ್ನು ಬದಲಿಸಿಕೊಳ್ಳುವುದು ಅಗತ್ಯ ಎಂದು ಕಾಹೆರ್​ ಕುಲಾಧಿಪತಿ, ಪದ್ಮಶ್ರೀ ಪುರಸತ ಡಾ.ಪ್ರಭಾಕರ ಕೋರೆ ಹೇಳಿದರು.

ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಶಿವಶಕ್ತಿ ಶುಗರ್ಸ್​ನಿಂದ ಹಮ್ಮಿಕೊಂಡಿದ್ದ ರೈತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಕೃಷಿಯಲ್ಲಿ ಹೊಸ ತಂತ್ರಾನ ಹಾಗೂ ವೈಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದೇ ಇಂದಿನ ಅಗತ್ಯವಿದೆ. ಕೆಎಲ್​ಇ ಸಂಸ್ಥೆಯ ಕೃಷಿ ವಿಾನ ಕೇಂದ್ರ ರೈತರ ನೆರವಿಗೆ ಸದಾ ಸಿದ್ಧವಿದೆ. ಬೆಳೆ ನಿರ್ವಹಣೆ, ಮಣ್ಣಿನ ಪರೀೆ, ಆಧುನಿಕ ಕೃಷಿ ತಂತ್ರಾನ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ವಿವಿಧ ೇತ್ರಗಳಲ್ಲಿ ತರಬೇತಿ ಹಾಗೂ ಮಾರ್ಗದರ್ಶನ ನೀಡಲಿದೆ ಎಂದು ಹೇಳಿದರು.
ಕೃಷಿ ವಿಾನ ಕೇಂದ್ರ ಸ್ಥಾಪಿಸಲು ಸಾಕಷ್ಟು ಪರಿಶ್ರಮಪಟ್ಟಿದ್ದೇನೆ. ಇಂದು ಸಾವಿರಾರು ರೈತರು ಈ ಕೇಂದ್ರದ ಮೂಲಕ ತರಬೇತಿ ಪಡೆದು ಉತ್ತಮ ಕೃಷಿ ಪದ್ಧತಿ ಅಳವಡಿಸಿಕೊಂಡು ಆದಾಯ ಹೆಚ್ಚಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿಯೂ ರೈತರ ಅಭಿವೃದ್ಧಿಗಾಗಿ ಈ ಕೇಂದ್ರ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ನಿಮ್ಮ ನೆರವಿಗೆ ಯಾವಾಗಲೂ ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.
ಕಬ್ಬು ಬೆಳೆಯೊಂದನ್ನೇ ಅವಲಂಬಿಸುವುದು ಸೂಕ್ತವಲ್ಲ. ಮಿಶ್ರ ಬೆಳೆ ಪದ್ಧತಿ ಅನುಸರಿಸಿದಲ್ಲಿ ಆದಾಯದಲ್ಲಿ ಸ್ಥಿರತೆ ಸಾಧಿಸಬಹುದು. ಪ್ರಕೃತಿ ವೈಪರೀತ್ಯದಿಂದಾಗುವ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಹಣ್ಣು, ತರಕಾರಿ, ಕಾಳು ಬೆಳೆಗಳು ಹಾಗೂ ಇತರ ವಾಣಿಜ್ಯ ಬೆಳೆಗಳನ್ನು ಕಬ್ಬಿನೊಂದಿಗೆ ಬೆಳೆಯುವ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗಬಹುದು ಎಂದು ಸಲಹೆ ನೀಡಿದರು.
ರೈತರ ಮಕ್ಕಳ ಉನ್ನತ ಶಿಣಕ್ಕೂ ಕೆಎಲ್​ಇ ಸಂಸ್ಥೆ ಮಹತ್ವ ನೀಡುತ್ತಿದೆ. ತೆನಿಕೊಳ್ಳದಲ್ಲಿ ಬಿಎಸ್​ಸಿ ಕೃಷಿ ಮಹಾವಿದ್ಯಾಲಯ ಆರಂಭಿಸಲಾಗಿದೆ. ಇದರ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕೃಷಿ ಶಿಣ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೃಷಿ ಶಿಣದ ವಿಸ್ತರಣೆಗೆ ಹೆಚ್ಚಿನ ಕೃಷಿ ಮಹಾವಿದ್ಯಾಲಯಗಳನ್ನು ಆರಂಭಿಸುವ ಯೋಜನೆಯೂ ಇದೆ ಎಂದು ತಿಳಿಸಿದರು.
ರೈತರಾದ ಜಿನ್ನಪ್ಪ ಅಸ್ಕಿ, ಭೀಮಪ್ಪ ಬದನೆಕಾಯಿ, ನೇಮಣ್ಣ ನಾಣಾವಿ, ಬಸನಗೌಡ ಆಸಂಗಿ, ಸಿದ್ದಪ್ಪ ನಾಗನೂರು, ಶ್ರೀಧರ ಸದಲಗಿ ಅನೇಕ ರೈತರು ಹಾಗೂ ಶಿವಶಕ್ತಿ ಶುಗರ್ಸ್​ ಅಧಿಕಾರಿಗಳು, ಕೃಷಿ ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಹಾರೂಗೇರಿಯಲ್ಲಿ ಹಮ್ಮಿಕೊಂಡಿದ್ದ ರೈತರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಪದ್ಮಶ್ರೀ ಪುರಸತ ಡಾ.ಪ್ರಭಾಕರ ಕೋರೆ ಮಾತನಾಡಿದರು. ಜಿನ್ನಪ್ಪ ಅಸ್ಕಿ, ಭೀಮಪ್ಪ ಬದನೆಕಾಯಿ, ನೇಮಣ್ಣ ನಾಣಾವಿ, ಬಸನಗೌಡ ಆಸಂಗಿ, ಸಿದ್ದಪ್ಪ ನಾಗನೂರು, ಶ್ರೀಧರ ಸದಲಗಿ ಇತರರಿದ್ದರು.