ರೈತರು ಮಣ್ಣಿನ ಪರೀಕ್ಷೆ ಮಾಡಿಸಲಿ soil tested 
ರಾಜ್ಯ

ರೈತರು ಮಣ್ಣಿನ ಪರೀಕ್ಷೆ ಮಾಡಿಸಲಿ soil tested

ಕೋಲಾರ ಡೆಸ್ಕ್

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಕಿವಿಮಾತು
  • ರೈತ ಸಂಪರ್ಕ ಕೇಂದ್ರ ಕಟ್ಟಡಕ್ಕೆ ಚಾಲನೆ
ಬಂಗಾರಪೇಟೆ: ಹಿಂದಿನ ಸರ್ಕಾರದಲ್ಲಿ ಕೃಷಿ ಸಾಮಗ್ರಿ ಖರೀದಿಸಬೇಕಾದರೆ ರೈತರು ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಗೊಬ್ಬರ ಕೇಳಲು ಹೋಗಿದ್ದ ರೈತರ ಮೇಲೆ ಹಾವೇರಿಯಲ್ಲಿ ಗೋಲಿಬಾರ್​ ನಡೆದ ಟನೆ ನಮ್ಮ ಕಣ್ಣು ಮುಂದಿದೆ. ಆದರೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ರೈತರಿಗೆ ಯಾವುದೇ ತೊಂದರೆ ಇಲ್ಲದೆ ರಸಗೊಬ್ಬರ ಸಿಗುತ್ತಿದೆ ಎಂದು ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಹೇಳಿದರು.soil tested
ತಾಲೂಕಿನ ಎಪಿಎಂಸಿ ಆವರಣದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟಿರುವ ಕಸಬಾ ರೈತ ಸಂಪರ್ಕ ಕೇಂದ್ರ ಕಟ್ಟಡ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಪರಿಣಾಮ ರೈತರಿಗೆ ಗೊಬ್ಬರ, ಬಿತ್ತನೆಬೀಜ ತಲುಪಿಸುವಲ್ಲಿ ಸಮಸ್ಯೆ ಆಗುತ್ತಿಲ್ಲ ಎಂದು ಹೇಳಿದರು.
ಜಿಲ್ಲೆಗೆ ಕೆಸಿ ವ್ಯಾಲಿ ನೀರು ಬಂದ ನಂತರ ಟೊಮ್ಯೊಟೊ, ಆಲೂಗಡ್ಡೆ, ಕೋಸು, ಕೊಳತು ಹೋಗುತ್ತಿದೆ ಎಂದು ಸರ್ಕಾರದ ಮೇಲೆ ಮಾಡಿದ್ದ ಅಪಪ್ರಚಾರವನ್ನು ಸರ್ಕಾರ ಸವಾಲಾಗಿ ಸ್ವೀಕರಿಸಿ ಲ್ಯಾಬ್​ಗೆ ನೀರನ್ನು ಕಳುಹಿಸಿ ಪರೀಸಿದ ನಂತರ ಕೆಸಿ ವ್ಯಾಲಿ ನೀರಿನಿಂದ ಯಾವುದೇ ಬೆಳೆಗಳಿಗೆ ತೊಂದರೆಯಾಗುತ್ತಿಲ್ಲ ಎಂದು ವರದಿ ಬಂದಿತು ಎಂದು ತಿಳಿಸಿದರು.
ಸಾಮಾನ್ಯವಾಗಿ ರೈತರು ಒಂದು ಬಾರಿ ಟೊಮ್ಯಾಟೊ ಬೆಳೆದರೆ ಮತ್ತೆ ಅದೇ ಜಾಗದಲ್ಲಿ ಅದೇ ಬೆಳೆ ಬೆಳೆಯುತ್ತಾರೆ. ಜಮೀನಿನ ಮಣ್ಣನ್ನು ಯಾರು ಸಹ ಪರೀೆ ಮಾಡುತ್ತಿಲ್ಲ. ಈಗಲಾದರು ಮಣ್ಣಿನ ಪರೀೆ ಮಾಡಿಸಿ. ಕಾಲಕ್ಕೆ ತಕ್ಕಂತೆ ಬೆಳೆ ಬೆಳೆದು ಆರ್ಥಿಕ ಆದಾಯ ಹೆಚ್ಚಿಸಿಕೊಳ್ಳಿ ಎಂದು ಹೇಳಿದರು.
ಟಿಎಪಿಎಂಸಿಎಸ್​ ಉಪಾಧ್ಯ ಅ.ನಾ ಹರೀಶ್​, ಕೃಷಿ ಇಲಾಖೆ ಅಧಿಕಾರಿ ಪ್ರತಿಭಾ, ಸಹಾಯಕ ನಿರ್ದೇಶಕ ನಾರಾಯಣರೆಡ್ಡಿ, ತೋಟಗಾರಿಕಾ ಇಲಾಖೆ ಅಧಿಕಾರಿ ಶಿವಕುಮಾರಿ, ರೇಷ್ಮೆ ಇಲಾಖೆ ಅಧಿಕಾರಿ ಸೌಮ್ಯಾ, ಎ.ಒ.ವಿಜಯಕುಮಾರ್​, ಗುತ್ತಿಗೆದಾರ ಜೈಪ್ರಕಾಶ್​ ಇತರರು ಇದ್ದರು.