ಸೇಡಂ ತಾಲೂಕು ಒಕ್ಕುಲುತನ ಹುಟ್ಟುವಳಿ ಮಾರಾಟ ಸಹಕಾರ ಸಂದ ಕಚೇರಿ ಮುಂಭಾಗದಲ್ಲಿ ರಸಗೊಬ್ಬರಕ್ಕಾಗಿ ಸರದಿ ಸಾನಲ್ಲಿ ಪಾದರೆ ಇಟ್ಟಿರುವುದು.  
ರಾಜ್ಯ

ಗೊಬ್ಬರಕ್ಕಾಗಿ ರೈತರ ಪಾದರಕ್ಷೆ ಸಾಲು

ಪ್ರಮುಖ ಮುಖ್ಯಾಂಶಗಳು

  • ಸೇಡಂನಲ್ಲಿ ಡಿಎಪಿಗಾಗಿ ಪರದಾಟ
  • ಚಪ್ಪಲಿ ಲೈನ್​ ತುಣುಕು ಎಲ್ಲೆಡೆ ವೈರಲ್​
ಸೇಡಂ: ಗೊಬ್ಬರ, ಡಿಎಪಿಗಾಗಿ ರೈತರ ಪರದಾಟ ಮುಂದುವರೆದಿದ್ದು, ತಾಲೂಕು ಒಕ್ಕುಲುತನ ಹುಟ್ಟುವಳಿ ಮಾರಾಟ ಸಹಕಾರ ಸಂದ ಕಚೇರಿ ಮುಂಭಾಗದಲ್ಲಿ ರೈತರು ತಮ್ಮ ಪಾದರೆಯನ್ನು ಸರದಿ ಸಾಲಿಗಿಟ್ಟುರುವುದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ.
ಇರಾನ್​&ಅಮೆರಿಕಾ ದೇಶಗಳ ಮಧ್ಯೆ ನಡೆದಿರುವ ಯುದ್ಧದ ಕಾರಣಕ್ಕಾಗಿ ದೇಶದಲ್ಲಿ ಡಿಎಪಿ ಕೊರತೆ ಜೋರಾಗಿದೆ. ಈಗಾಗಲೇ ಮುಂಗಾರು ಕೃಷಿ ಚಟುವಟಿಕೆ ಚುರುಕಾಗಿದ್ದು, ಬೀಜ&ರಸಗೊಬ್ಬರ ಖರೀದಿಯಲ್ಲಿ ರೈತರು ನಿರತರಾಗಿದ್ದಾರೆ. ತಾಲೂಕು ರಸಗೊಬ್ಬರ ಕೊರತೆ ತೀವ್ರವಾಗಿದ್ದು, ಡಿಎಪಿಗಾಗಿ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಂಗಳವಾರದಂದು ಟಿಎಪಿಸಿಎಂಗೆ ಡಿಎಪಿ ಬಂದಿರುವ ಮಾಹಿತಿ ತಿಳಿದ ರೈತರು ಬುಧವಾರ ಬೆಳಗ್ಗೆಯೇ ಕಚೇರಿ ಮುಂಭಾಗದಲ್ಲಿ ಜಮಾಯಿಸಿದರು. ಪಾಳಿಗಾಗಿ ತಮ್ಮ ಪಾದರೆ ಇಟ್ಟು ಡಿಎಪಿಗಾಗಿ ಕಾದಿದ್ದಾರೆ. ಪಾದರಕ್ಷೆಗಳ ಸಾಲಿನ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ್ದು, ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
"

ತಾಲೂಕಿನಲ್ಲಿ ಬೇಡಿಕೆಗೆ ಅನುಗುಣವಾಗಿ ಡಿಎಪಿ, ರಸಗೊಬ್ಬರ ತರಿಸಲಾಗುತ್ತಿದೆ. ಟಿಎಪಿಸಿಎಂ ಮುಂದೆ ಗೊಬ್ಬರಕ್ಕಾಗಿ ಪಾದರಕ್ಷೆಗಳನ್ನು ಸರದಿ ಸಾಲಿನಲ್ಲಿ ಇಟ್ಟು ನಿಂತಿದ್ದ ಎಲ್ಲ ರೈತರಿಗೂ ನೀಡಲಾಗಿದೆ. ಯಾವುದೇ ಕಾರಣಕ್ಕೂ ರೈತರು ಆತಂಕಕ್ಕೆ ಒಳಗಾಗಬಾರದು.

— ವಿಶಾಲಕುಮಾರ, ಸಹಾಯಕ ಕೃಷಿ ನಿರ್ದೇಶಕ, ಸೇಡಂ