ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘಟನೆಗಳ ನೇತತ್ವದಲ್ಲಿ ಬೈಲಹೊಂಗಲದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಲ್ಲಿಕಾರ್ಜುನ ಹುಂಬಿ, ಈರಣ್ಣ ಹುಬ್ಬಳ್ಳಿ, ಮಲ್ಲಿಕಾರ್ಜುನ ಕುಡೊಳ್ಳಿ, ದೂಳಪ್ಪ ಇಟಗಿ, ದಾನಪ್ಪಗೌಡ ಕುಸಲಾಪುರ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ರೈತ ಸಂಘಟನೆಗಳ ನೇತತ್ವದಲ್ಲಿ ರೈತ ಭವನದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಬಹತ್ ಪ್ರತಿಭಟನಾ ಮೆರವಣಿಗೆ ಜರುಗಿತು. ಬಳಿಕ ಉಪವಿಭಾಗಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಹುಂಬಿ ಮಾತನಾಡಿ, ರೈತರು 2026ನೇ ಸಾಲಿನ ಮುಂಗಾರು ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಸಮರ್ಪಕವಾಗಿ ವಿತರಿಸುವಂತೆ ಆಗ್ರಹಿಸಿದರು. ಗುಣಮಟ್ಟದ ಸೋಯಾಬೀನ್ ಬೀಜವನ್ನು ಕಷಿ ಅಧಿಕಾರಿಗಳು ಕಟ್ಟುನಿಟ್ಟಾಗಿ ಪರಿಶೀಲಿಸಿ ರೈತರಿಗೆ ವಿತರಿಸಬೇಕು. ರಸಗೊಬ್ಬರ ಎಫ್‌ಐಡಿ ಹಾಗೂ ಲಿಂಕ್ ವ್ಯವಸ್ಥೆ ಬಳಸದೆ ನೇರವಾಗಿ ಮತ್ತು ಸಮರ್ಪಕವಾಗಿ ರೈತರಿಗೆ ಒದಗಿಸಬೇಕು. ಜತೆಗೆ 2025ನೇ ಸಾಲಿನ ಬೆಳೆ ವಿಮೆ, ಬೆಳೆ ಪರಿಹಾರ ಹಣವನ್ನು ತಕ್ಷಣ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕೆಂದು ಒತ್ತಾಯಿಸಲಾಯಿತು.
ಮಲಪ್ರಭಾ ಯೋಜನೆಯಿಂದ ಜಮೀನು ಕಳೆದುಕೊಂಡ ಸದದತ್ತಿ ತಾಲೂಕಿನ ಮಲ್ಲೂರ, ಕಾಗಿಹಾಳ ತಾಂಡಾ, ಸೋಮಾಪುರ, ಸೊಗಲ, ಯಕ್ಕುಂಡಿ, ಧುಪದಾಳ, ಕಾರ್ಲಕಟ್ಟಿ, ಮಾಟೊಳ್ಳಿ ಹಾಗೂ ಇಂಗಳಗಿ ಗ್ರಾಮಗಳ ನಿರಾಶ್ರಿತ ರೈತರ ಸಮಸ್ಯೆಯನ್ನೂ ಪ್ರಸ್ತಾಪಿಸಲಾಯಿತು. ಕಾಗಿಹಾಳ ಗ್ರಾಮದ ರಿ.ಸ.ನಂ.3 ಮತ್ತು 4ರಲ್ಲಿ ಒಟ್ಟು 770 ಎಕರೆ ಜಮೀನನ್ನು 22-07-1977ರಂದು ಹಂಚಿಕೆ ಮಾಡಲಾಗಿದ್ದು, ಅಲ್ಲಿ ದಶಕಗಳಿಂದ ರೈತರು ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಈ ಜಮೀನಿನಲ್ಲಿ ಗ್ರೀನ್ಕೋ ಸೋಲಾರ್ ಎನರ್ಜಿ ಪ್ರೈ.ಲಿ. ಸಂಸ್ಥೆ ಸೋಲಾರ್ ಪ್ಲಾಂಟ್ ನಿರ್ಮಿಸುತ್ತಿರುವುದನ್ನು ತಕ್ಷಣ ತಡೆಯಬೇಕು. ನಿರಾಶ್ರಿತ ರೈತರ ಹಕ್ಕು ರಕ್ಷಿಸಬೇಕೆಂದು ಒತ್ತಾಯಿಸಲಾಯಿತು.
ರೈತ ಮುಖಂಡರಾದ ಈರಣ್ಣ ಹುಬ್ಬಳ್ಳಿ, ಹಿರಿಯರಾದ ಮಲ್ಲಿಕಾರ್ಜುನ ಕುಡೊಳ್ಳಿ, ಧೂಳಪ್ಪ ಇಟಗಿ, ದಾನಪ್ಪಗೌಡ ಕುಸಲಾಪುರ, ಸಂಗಪ್ಪ ಹುಲಗೂರ, ಮಹಾಂತೇಶ ಕಮತ, ಶಂಕರ ಕಡಕೋಳ, ಬೀರಪ್ಪ ದೇಶನೂರ, ಬಸವರಾಜ ಉಪ್ಪಾರ, ಉಮೇಶ ಗೋರವನಕೊಳ್ಳ, ಅಣ್ಣಪ್ಪ ಗುಮತಿ, ವಿಠ್ಠಲ ಯಾಸನ್ನವರ, ರಘು ಶೀಗಿಹಳ್ಳಿ, ಬಸವರಾಜ ಹಣ್ಣಿಕೇರಿ, ಶಿವಾನಂದ ಇಂಚಲ, ಮಡಿವಾಳಪ್ಪ ಪೇಂಟೇದ, ಗೋಪಾಲ ಮರಬಸನ್ನವರ ಇತರರಿದ್ದರು.