ಕಲಬುರಗಿಯ ಎಪಿಎಂಸಿ ನೂತನ ಅಧ್ಯಕ್ಷ ಮಂಜುನಾಥ ಅಂಜುಟಗಿ ಅಧ್ಯತೆಯಲ್ಲಿ ಗುರುವಾರ ಪ್ರಥಮ ಸಭೆ ಜರುಗಿತು. ಉಪಾಧ್ಯ ಬಸವರಾಜ ಜಿವಣಗಿ ಇದ್ದರು. 
ರಾಜ್ಯ

ರೈತರ ಪ್ರಗತಿ ಮೂಲ ಧ್ಯೇಯ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಮಂಜುನಾಥ ಅಂಜುಟಗಿ ಹೇಳಿಕೆ
  • ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಸಭೆ
ಕಲಬುರಗಿ: ರೈತರ ಪ್ರಗತಿ ಮತ್ತು ಮಾರುಕಟ್ಟೆಯ ಅಭಿವೃದ್ಧಿಯೇ ನಮ್ಮೆಲ್ಲರ ಮೂಲ ಧ್ಯೇಯವಾಗಿದ್ದು, ಸದಸ್ಯರು ಮತ್ತು ಅಧಿಕಾರಿಗಳ ಸಹಕಾರ ಅಗತ್ಯ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷ ಮಂಜುನಾಥ ಅಂಜುಟಗಿ ಹೇಳಿದರು.
ಕಲಬುರಗಿಯ ಎಪಿಎಂಸಿಯ ಆಡಳಿತ ಕಚೇರಿಯಲ್ಲಿ ಗುರುವಾರ ನಡೆದ ಪ್ರಥಮ ಸಭೆಯ ಅಧ್ಯಕ್ಷತೆಹಿಸಿ ಮಾತನಾಡಿ ಅಂಜುಟಗಿ, ಕಲ್ಯಾಣ ಕರ್ನಾಟಕದಲ್ಲಿ ನಮ್ಮ ಎಪಿಎಂಸಿ ಪ್ರಥಮ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಕರ್ನಾಟಕದಲ್ಲೇ ಮಾದರಿ ಮಾರುಕಟ್ಟೆ ಮಾಡಲು ಶ್ರಮಿಸಬೇಕಿದೆ. ಕಲಬುರಗಿ ತೊಗರಿ ಕಣಜ ಹಾಗೂ ಹತ್ತಿ ಹಬ್​ ಆಗಿದೆ. ಮಾರುಕಟ್ಟೆಗೆ ನಿತ್ಯ ಸುಮಾರು 3 ಸಾವಿರ ರೈತರು ಭೇಟಿ ನೀಡುತ್ತಿದ್ದು, ಅವರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುತ್ತದೆ. ನಾವು ಅಧಿಕಾರ ಚಲಾಯಿಸಲು ಬಂದಿಲ್ಲ, ಬದಲಾಗಿ ರೈತರ ಸೇವೆ ಮಾಡಲು ಬಂದಿದ್ದೇವೆ. ನಮ್ಮ ಸದಸ್ಯರೆಲ್ಲರೂ ಕ್ರಿಯಾಶೀಲ ಮತ್ತು ನಿಪುಣರಾಗಿದ್ದು, ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು.
ಎಪಿಎಂಸಿ ಸಹಾಯಕ ಕಾರ್ಯದರ್ಶಿ ಸವಿತಾ ಗೋಣಿ, ಬೀರಲಿಂಗ ಪಡದಳ್ಳಿ ಸಭೆಗೆ ಮಾಹಿತಿ ನೀಡಿದರು. ಉಪಾಧ್ಯ ಬಸವರಾಜ ಜಿವಣಗಿ, ಸದಸ್ಯರಾದ ದಾನಯ್ಯ ಹಿರೇಮಠ್​, ಶರಣಬಸಪ್ಪಾ ಕುಂಬಾರ, ವಿರುಪಾಪ್ಪ ಕಲ್ಯಾಣಿ ಮಾತನಾಡಿದರು. ಸದಸ್ಯರಾದ ವೀರಣ್ಣ ಭಂಗೂರ, ಸವಿತಾ ಜಿಡಗಿ, ಗಣಪತಿ ಮಿಣಜಗಿ, ಪುತಲಿಬಿ ಮುಲ್ಲಾ, ರವೀಂದ್ರ ಕೊಲ್ಲೂರ, ನಾಗೇಶ ಪಾಣೇಗಾಂವ, ಸುನಿತಾ ಸುನೀಲಕುಮಾರ ಇತರರಿದ್ದರು.
"

ವರ್ಷ ಪೂರ್ತಿ ಬೆವರು ಸುರಿಸಿ ಬೆಳೆದು ಮಾರಾಟ ಮಾಡಲು ಮಾರುಕಟ್ಟೆಗೆ ಬಂದಾಗ ರೈತರ ಗೌರವಕ್ಕೆ ಧಕ್ಕೆ ಬಂದರೆ ಸಹಿಸಲಾಗದು. ಮಾರುಕಟ್ಟೆಯಲ್ಲಿ ರೈತನೆ ರಾಜ ಎಂದು ಅರಿವು ಗೌರವಿಸಬೇಕು.

— ಮಂಜುನಾಥ ಅಂಜುಟಗಿ, ಅಧ್ಯಕ್ಷ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಲಬುರಗಿ.