ಮುದ್ದೇಬಿಹಾಳದ ಹೆಸ್ಕಾಂ ಕಚೇರಿಗೆ ರೈತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿ, ಇಇ ಎಸ್.ಎಂ. ಬಿರಾದಾರಗೆ ಮನವಿ ಸಲ್ಲಿಸಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಎಸ್. ಪಾಟೀಲ (ನಡಹಳ್ಳಿ) ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಆರ್.ಎನ್. ಹಾದಿಮನಿ, ಪ್ರಭು ಗುರಡ್ಡಿ, ಪಿಎಸ್‌ಐ ಸಂಜಯ ತಿಪ್ಪಾರಡ್ಡಿ ಇತರರಿದ್ದರು.
- ಅಸಮರ್ಪಕ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಆಗ್ರಹ
- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ
ಮುದ್ದೇಬಿಹಾಳ : ತಾಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಸರಬರಾಜು ತೀವ್ರ ಅಸ್ತವ್ಯಸ್ತಗೊಂಡಿದ್ದು, ಲೈನ್ ಟ್ರಿಪ್ ಹಾಗೂ ಟ್ರಾನ್‌ಸ್ಾರ್ಮರ್ ಸುಟ್ಟುಹೋಗಿ ಬೆಳೆಗಳು ಒಣಗುತ್ತಿವೆ. ಇಲಾಖೆ ಬೇಜವಾಬ್ದಾರಿ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಮಂಗಳವಾರ ಸ್ಥಳೀಯ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಎಸ್. ಪಾಟೀಲ (ನಡಹಳ್ಳಿ) ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ನಿಯಮದಂತೆ ಕೃಷಿಗೆ ಏಳು ಗಂಟೆಗಳ ಕಾಲ ತ್ರಿ-ೇಸ್ ವಿದ್ಯುತ್ ಸಿಗುತ್ತಿಲ್ಲ. ಅಧಿಕಾರಿಗಳು ಹಾಗೂ ಲೈನ್‌ಮನ್‌ಗಳ ನಿರ್ಲಕ್ಷ್ಯದಿಂದ ರೈತರೇ ಸ್ವಂತ ಖರ್ಚಿನಲ್ಲಿ ಟಿಸಿ ಹೊರುವಂತಾಗಿದೆ. ಹಳ್ಳೂರಿನ ರೈತ ಮಲ್ಲಪ್ಪ ಎಂಬುವರ ಹೊಲದಲ್ಲಿ ಟಿ.ಸಿ. ಸುಟ್ಟುಹೋಗಿ ಕಬ್ಬು ಒಣಗಿದ್ದು, ಅಧಿಕಾರಿಗಳ ನೇರ ನಿರ್ಲಕ್ಷ್ಯಕ್ಕೆ ಬೇಸತ್ತು ಅವರು ಕಚೇರಿ ಮುಂದೆಯೆ ಕಣ್ಣಿರಿಟ್ಟ ಘಟನೆ ಇಲಾಖೆ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಢವಳಗಿ ಹೆಸ್ಕಾಂ ಶಾಖಾಧಿಕಾರಿ ಕಳೆದ ಹತ್ತು ವರ್ಷಗಳಿಂದ ತಾಲೂಕಿನಲ್ಲೇ ಬೀಡು ಬಿಟ್ಟಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರೈತರಿಂದ ಹಣ ವಸೂಲಿ ಮಾಡುವ ಲೈನ್‌ಮನ್‌ಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಬಸವನ ಬಾಗೇವಾಡಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಂ. ಬಿರಾದಾರ ರೈತರೊಂದಿಗೆ ಚರ್ಚಿಸಿ, ಸದ್ಯ ವರ್ಕ್ ಲೋಡ್ ಹೆಚ್ಚಿದ್ದರೂ ಹಗಲು 4 ಗಂಟೆ ಹಾಗೂ ರಾತ್ರಿ 3 ಗಂಟೆ ಸೇರಿ ಒಟ್ಟು 7 ಗಂಟೆ ಗುಣಮಟ್ಟದ ವಿದ್ಯುತ್ ನೀಡಲಾಗುವುದು. ಮಾನ್ಸೂನ್ ಒಳಗಾಗಿ ಜೋತು ಬಿದ್ದ ತಂತಿ, ವಾಲಿ ಬಿದ್ದ ಕಂಬಗಳನ್ನು ದುರಸ್ತಿ ಮಾಡಲಾಗುವುದು.
ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಇನ್ನು ಮುಂದೆ 72 ಗಂಟೆಗಳ ಒಳಗಾಗಿ ರೈತರಿಗೆ 25 ಹಾಗೂ 50 ಕೆ.ವಿ ಸಾಮರ್ಥ್ಯದ ಟಿ.ಸಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಅಧಿಕಾರಿಗಳ ಸಕಾರಾತ್ಮಕ ಸ್ಪಂದನೆಗೆ ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಹೆಸ್ಕಾಂ ಅಭಿಯಂತರ ಆರ್.ಎನ್. ಹಾದಿಮನಿ, ನಾಲತವಾಡ ಹೆಸ್ಕಾಂ ಶಾಖಾಧಿಕಾರಿ ಪ್ರಭು ಗುರಡ್ಡಿ, ಪಿಎಸ್‌ಐ ಸಂಜಯ ತಿಪ್ಪಾರಡ್ಡಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಸಿದ್ರಾಮಪ್ಪ ಹೊರ್ತಿ, ಸೀತಪ್ಪ ಗಣಿ, ಸಾಬಣ್ಣ ಅಂಗಡಿ, ಮಲ್ಲನಗೌಡ ನಾಗನೂರು ಸೇರಿ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.