ಯಾದಗಿರಿ ಜಿಲ್ಲೆಯಲ್ಲಿ ಬರಪೀಡತ ಘೋಷಿಸಬೇಕೆಂದು ಆಗ್ರಹಿಸಿ ಹುಣಸಗಿ ತಹಸಿಲ್ ಕಚೇರಿ ಎದುರು ಕರವೇ ತಾಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಬಸವರಾಜ ಚನ್ನೂರು, ಮೌನೇಶ ಚಿಂಚೋಳಿ, ರಾಜು ಅವರಾದಿ ಇತರರಿದ್ದರು. 
ರಾಜ್ಯ

ಸಂಕಷ್ಟಕ್ಕೆ ಸಿಲುಕಿದ ಅನ್ನದಾತರು

ಪ್ರಮುಖ ಮುಖ್ಯಾಂಶಗಳು

  • ಅನಾವೃಷ್ಟಿ ಹಾಗೂ ಬೆಳೆ ಹಾನಿ
  • ಸಂಕಷ್ಟದಲ್ಲಿರುವ ರೈತರು
ಹುಣಸಗಿ: ಮಳೆ ಇಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇದ್ದ ಬೆಳಗಳು ಸಹ ಕಣ್ಣ ಮುಂದೆ ಒಣಗುತ್ತಿರುವುದನ್ನು ನೋಡಲಾಗದಂತ ಸ್ಥಿತಿ ನಿರ್ಮಾಣವಾಗಿದೆ ಹೀಗಾಗಿ ಕೂಡಲೇ ಜಿಲ್ಲೆಯಲ್ಲಿ ಬರಪೀಡಿತ ಘೋಷಣೆ ಮಾಡಬೇಕು ಎಂದು ಕರವೇ ತಾಲೂಕು ಅಧ್ಯಕ್ಷ ಬಸವರಾಜ ಚನ್ನೂರು ಆಗ್ರಹಿಸಿದರು.
ಗುರುವಾರ ಕರವೇಯಿಂದ ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಯಾದಗಿರಿ, ಗುರುಮಠಕಲ್, ವಡಗೇರಾ, ಸುರಪುರ ಹಾಗೂ ಹುಣಸಗಿ ತಾಲೂಕು ಕೂಡಲೇ ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು. ರೈತ ಘಟಕದ ತಾಲೂಕು ಅಧ್ಯಕ್ಷ ಮೌನೇಶ ಚಿಂಚೋಳಿ ಮಾತನಾಡಿದರು.
ಈ ವೇಳೆ ಯುವ ಘಟಕದ ಅಧ್ಯಕ್ಷ ರಾಜು ಅವರಾದಿ, ಪ್ರಶಾಂತ ಕೊಡೇಕಲ್, ನಿಂಗಣ್ಣ ಗುತ್ತೇದಾರ್, ಆಂಜನೇಯ ಶ್ರೀನಿವಾಸಪುರ, ಹಣಮಗೌಡ ಪಾಟೀಲ್, ದೇವಣ್ಣ ಮುದನೂರು, ಖಾಜಾ ಹುಸೇನ್, ಬಸವರಾಜ ಎಂ.ಕೆ, ಹುಲಗಪ್ಪ ಪಾಳೇಗಾರ, ಶಿವಲಿಂಗ ಸಾಹು ಪಟ್ಟಣಶೆಟ್ಟಿ, ಸಿದ್ಧನಗೌಡ ಮಾಳನೂರ, ರಾಜುಗೌಡ ಕುಪ್ಪಿ, ಸಿದ್ಧನಗೌಡ ಯಕ್ತಾಪುರ, ಬಂದೇನವಾಜ ಯಾತನೂರ, ಶಿವನಗೌಡ ಸದಬ, ಹಣಮಂತ್ರಾಯ ಮಾರಲಭಾವಿ, ಬಲಭೀಮರಾಯ, ಮಲ್ಲು ಮಾಳಿ, ಹಣಮಂತ ದೊರೆ ಇತರರಿದ್ದರು. ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿಯನ್ನು ತಹಸೀಲ್ದಾರ್‌ಗೆ ಸಲ್ಲಿಸಿದರು.