- ಶಾಸಕ ದರ್ಶನಾಪುರ ಹೇಳಿಕೆ
- ಸರ್ಕಾರ ರೈತರೊಂದಿಗೆ ಇದೆ
ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಿಂದ ರೈತರು ಬಿತ್ತಿದ ಬೆಳೆ ಒಣಗಿದ ಪರಿಣಾಮ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳಬಾರದು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಮನವಿ ಮಾಡಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರೈತರೊಂದಿಗೆ ನಿಂತು ಅಗತ್ಯ ನೆರವು ನೀಡಲಿದೆ. ರಾಜ್ಯದಲ್ಲಿ ಈ ಬಾರಿ ಶೇ.೪೦ರಿಂದ ೫೦ ಮಳೆ ಕೊರತೆಯಾಗಿದೆ. ಜೂನ್ ತಿಂಗಳಲ್ಲಿ ಸುರಿದ ಮಳೆ ನಂಬಿ ರೈತರು ಬಿತ್ತನೆ ಮಾಡಿದ್ದರೂ, ನಂತರ ಮಳೆ ಕೈಕೊಟ್ಟ ಪರಿಣಾಮ ಅನೇಕ ಕಡೆ ಬೆಳೆ ಹಾನಿಯಾಗಿದೆ. ನೀರಾವರಿ ಯೋಜನೆಗಳ ವ್ಯಾಪ್ತಿಯಲ್ಲಿರುವ ರೈತರಲ್ಲಿ ಜಲಾಶಯಗಳು ಭರ್ತಿಯಾಗಿರುವುದರಿಂದ ಸ್ವಲ್ಪ ಆಶಾಭಾವನೆ ಮೂಡಿದೆ ಎಂದರು.
ಮಳೆಯನ್ನೇ ನಂಬಿರುವ ಒಣಭೂಮಿ ರೈತರು ಇನ್ನೂ ಆತಂಕದಲ್ಲಿz್ದÁರೆ. ಕೆಲವೆಡೆ ಮಳೆ ಸುರಿದಿರುವುದರಿಂದ ಬೆಳೆ ಉತ್ತಮವಾಗಿದೆ. ಆದರೆ ಬಹುತೇಕ ರೈತರು ಇನ್ನೂ ಬಿತ್ತನೆ ಮಾಡಿಲ್ಲ. ಈಗ ಉತ್ತಮ ಮಳೆಯಾದರೆ ಮಾತ್ರ ಬಿತ್ತನೆ ಸಾಧ್ಯವಾಗಲಿದ್ದು, ಮಳೆ ಮತ್ತಷ್ಟು ವಿಳಂಬವಾದರೆ ಅವರ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಹೇಳಿದರು.
ಕಳೆದ ವರ್ಷ ಅತಿವೃಷ್ಟಿಯಿಂದ ವಿಜಯಪುರ, ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿ¯್ಲÉಗಳಲ್ಲಿ ಬೆಳೆ ಹಾನಿಯಾದ ಸಂದರ್ಭದಲ್ಲಿ ಎನ್‌ಡಿಆರ್‌ಎ-ï ನಿಯಮಾವಳಿಯಡಿ ಪರಿಹಾರ ನೀಡಲಾಗಿತ್ತು. ರಾಜ್ಯ ಸರ್ಕಾರವೂ ಹೆಚ್ಚುವರಿ ನೆರವು ನೀಡಿ ರೈತರ ಬೆಂಬಲಕ್ಕೆ ನಿಂತಿತ್ತು. ಈ ಬಾರಿಯೂ ಮುಖ್ಯಮಂತ್ರಿ ಅವರು ಕೇಂದ್ರ ಸರ್ಕಾರದ ತಂಡ ರಾಜ್ಯಕ್ಕೆ ಭೇಟಿ ನೀಡಿ ಬೆಳೆ ಹಾನಿ ಹಾಗೂ ಮಳೆ ಕೊರತೆಯ ಸ್ಥಿತಿಯನ್ನು ಪರಿಶೀಲಿಸುವಂತೆ ಮನವಿ ಮಾಡಿz್ದÁರೆ. ಕೇಂದ್ರದಿAದ ನೆರವು ದೊರೆತ ಬಳಿಕ ರಾಜ್ಯ ಸರ್ಕಾರವೂ ತನ್ನ ಪಾಲಿನ ಅನುದಾನ ಸೇರಿಸಿ ರೈತರಿಗೆ ಪರಿಹಾರ ನೀಡಲಿದೆ ಎಂದರು.
ಕಠಿಣ ನಿರ್ಧಾರ ತೆಗೆದುಕೊಳ್ಳಬೇಡಿ
ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಳ್ಳಬಾರದು. ಆತ್ಮಹತ್ಯೆಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಾಗಿ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಸರ್ಕಾರ ರೈತರೊಂದಿಗಿದ್ದು, ಹಿಂದೆ ನೆರವು ನೀಡಿದ್ದೇವೆ. ಮುಂದೆಯೂ ರೈತರ ಪರವಾಗಿ ನಿಂತು ಅಗತ್ಯ ಸಹಾಯ ಮಾಡುತ್ತೇವೆ. ರೈತರು ಆತಂಕಪಡದೆ ಧೈರ್ಯದಿಂದಿರಬೇಕು ಎಂದು ಅವರು ಮನವಿ ಮಾಡಿದರು.