Farmers cut down 9 acres of Totapuri mango orchards.
ಚಿಂತಾಮಣಿ : ಸೂಕ್ತ ಮಾರುಕಟ್ಟೆ ಹಾಗೂ ಬೆಲೆ ಸಿಗದೆ ಕಂಗಾಲಾಗಿರುವ ಸೀಕಲ್ ಗ್ರಾಮದ ಮೂವರು ರೈತರು ಬರೋಬ್ಬರಿ 9 ಎಕರೆಯಲ್ಲಿ ತೋತಾಪುರಿ ಮರಗಳ ಕಟಾವು ಮಾಡಿದ್ದಾರೆ.
ರೈತರಾದ ವೆಂಕಟೇಶ್, ಮಂಜುನಾಥ್ ಮತ್ತು ನಾರಾಯಣಸ್ವಾಮಿ ತಲಾ 3 ಎಕರೆಯಂತೆ ಒಟ್ಟು 9 ಎಕರೆ ಪ್ರದೇಶದಲ್ಲಿನ ಹಳೆಯ ಮಾವಿನ ಮರಗಳನ್ನು ಕಟಾವು ಮಾಡಿದ್ದಾರೆ.
ವರ್ಷದಿಂದ ವರ್ಷಕ್ಕೆ ಮಾರುಕಟ್ಟೆಯಲ್ಲಿ ತೋತಾಪುರಿ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ. ಕನಿಷ್ಠ ಬಂಡವಾಳವೂ ಕೈಗೆ ಸಿಗುತ್ತಿಲ್ಲ. ಸಾಲದ ಹೊರೆ ಹೆಚ್ಚಾಗುತ್ತಿದೆಯೇ ಹೊರತು ನೆಮ್ಮದಿ ಇಲ್ಲ. ಹೀಗಾಗಿ ಮನಸ್ಸಿಲ್ಲದಿದ್ದರೂ ಮರಗಳನ್ನು ಕಡಿಯುತ್ತಿದ್ದೇವೆ ಎಂದು ರೈತರು ಅಸಹಾಯಕತೆ ತೋಡಿಕೊಂಡಿದ್ದಾರೆ.
ಹವಾಮಾನ ವೈಪರೀತ್ಯದಿಂದ ರೈತನಿಗೆ ನಷ್ಟವಾಗುತ್ತಿರುವುದು ಒಂದಡೆಯಾದರೆ, ಮರಗಳನ್ನು ಬೆಳೆಸುವ ವೆಚ್ಚ, ಹಣ್ಣು ಕೀಳಲು ಕಾರ್ಮಿಕರ ಖರ್ಚು ಮತ್ತು ಕಿತ್ತಿರುವ ಹಣ್ಣುಗಳನ್ನು ಮಾರುಕಟ್ಟೆಗೆ ಸಾಗಿಸುವ ವೆಚ್ಚ ಇಷ್ಟೆಲ್ಲಾ ಮಾಡಿದರೂ ರೈತನಿಗೆ ಅಸಲು ಬೆಲೆ ಸಿಗದೆ ಕೈಯಿಂದ ಖರ್ಚು ಭರಿಸುವ ಮಟ್ಟಕ್ಕೆ ತಲುಪಿದ್ದರಿಂದ ಮರಗಳ ಕಟಾವು ಅನಿವಾರ್ಯವಾಗಿದೆ ಎಂದು ರೈತರು ಹೇಳುತ್ತಿದ್ದಾರೆ.
ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ಏನೇನೂ ಸಾಲುತ್ತಿಲ್ಲ. ಆದ್ದರಿಂದ ಮಾವು ಬೆಳೆಗಾರರ ರಕ್ಷಣೆಗೆ ಸರ್ಕಾರ ಮುಂದಾಗಬೇಕಿದೆ. ಬೆಲೆ ಕೊರತೆ ಪಾವತಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸರ್ಕಾರ ಆದೇಶ ಹೊರಡಿಸಬೇಕು. ನಷ್ಟದಲ್ಲಿರುವ ರೈತರಿಗೆ ಪರಿಹಾರ ಒದಗಿಸಿ, ಕೃಷಿ ವಲಯವನ್ನು ರಸಬೇಕು ಎಂದು ಮಾವು ಬೆಳೆಗಾರರ ಸಂದ ಜಿಲ್ಲಾಧ್ಯಕ್ಷ ಶ್ರೀನಿವಾಸರೆಡ್ಡಿ ಹಾಗೂ ಸೀಕಲ್ ಸುತ್ತಮುತ್ತಲಿನ ಭಾಗದ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ತೋತಾಪುರಿ ಮಾವಿನ ಹಣ್ಣಿಗೆ ಸರಿಯಾದ ಬೆಲೆ ಸಿಗದ ಪರಿಣಾಮ ಚಿಂತಾಮಣಿ ತಾಲೂಕಿನ ಸೀಕಲ್ ಗ್ರಾಮದ ರೈತರು ತೋತಾಪುರಿ ಮಾವಿನ ಮರಗಳನ್ನು ಕಟಾವು ಮಾಡಿರುವುದು.